ನೀರು ಶುದ್ಧೀಕರಣ ಘಟಕಗಳ ಅಶುದ್ಧ ನೀರು

ಸಾರ್ವಜನಿಕವಾಗಿ ಉಪಯೋಗಕ್ಕೆ ಶುದ್ಧ ನೀರಿನ ಘಟಕಗಳು ಪ್ರತಿ ಊರಿನಲ್ಲಿ ಈಗಾಗಲೇ ಅಳವಡಿಕೆಯಾಗಿದೆ. ಅಲ್ಲದೆ ಕೆಲವು ಖಾಸಗಿ ಸರಕಾರೇತರ ಸೇವಾ ಸಂಸ್ಥೆಗಳೂ ಈ ಶುದ್ಧ ನೀರಿನ ಘಟಕಗಳನ್ನ ಅಳವಡಿಸಿದ್ದಾರೆ.

ನೀರು  ಶುದ್ಧೀಕರಣ ಘಟಕಗಳ ಅಶುದ್ಧ ನೀರು
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Apr 12, 2024 | 12:53 PM

ಈವರ್ಷ ಮಳೆ ಕಡಿಮೆ ಕಾರಣ ನೀರಿನ ಅಭಾವ, ಏಕಾ ಎಕಿ ನೀರನ್ನು ಉಳಿಸಿ ಉಳಿಸಿ ಜಪ ಶುರುವಾಗಿದೆ. ಸಾಮಾನ್ಯವಾಗಿ ಹತ್ತರಲ್ಲಿ ಐದು ಮನೆಗಳಲ್ಲಿ ನೀರು ಶುದ್ಧೀಕರಣ ಘಟಕ ಅಳವಡಿಸಲಾಗಿದೆ. ಯಾವ ನೀರಿಗೆ ಯಾವ ಘಟಕ ಅವಶ್ಯ ಅಥವಾ ಅಲ್ಲಿಯ ನೀರಿಗೆ ಯಾವ ಶುದ್ದಿಕರಣ ಘಟಕ ಅವಶ್ಯಕತೆ ಎನ್ನುವುದನ್ನು ಪರಿಶೀಲಿಸದೆ ಕಂಪನಿ, ಬ್ರಾಂಡ್, ಆಧಾರಿತ, ಗರಿಷ್ಠ ಬೆಲೆಯದು ಅತೀ ಉತ್ತಮ ಎನ್ನುವ ಭಾವನೆಯಿಂದ ನೀರು ಶುದ್ಧೀಕರಣ ಘಟಕಗಳು ಆಯ್ಕೆ ಮಾಡಲಾಗಿದೆ. ಇಲ್ಲದೆ ಸಾರ್ವಜನಿಕವಾಗಿ ಉಪಯೋಗಕ್ಕೆ ಶುದ್ಧ ನೀರಿನ ಘಟಕಗಳು ಪ್ರತಿ ಊರಿನಲ್ಲಿ ಈಗಾಗಲೇ ಅಳವಡಿಕೆಯಾಗಿದೆ. ಅಲ್ಲದೆ ಕೆಲವು ಖಾಸಗಿ ಸರಕಾರೇತರ ಸೇವಾ ಸಂಸ್ಥೆಗಳೂ ಈ ಶುದ್ಧ ನೀರಿನ ಘಟಕಗಳನ್ನ ಅಳವಡಿಸಿದ್ದಾರೆ.

ನನ್ನ ಮನವಿ ಇಷ್ಟೆ ಹೆಚ್ಚಿನ ನೀರಿನ ಶುದ್ಧೀಕರಣ ಘಟಕಗಳು ಶುದ್ಧ ನೀರಿನ ಪೂರೈಕೆ ಜೊತೆಗೆ ಒಂದಿಷ್ಟು ಅಶುದ್ಧ ನೀರನ್ನು ಕೂಡ ಉತ್ಪಾದಿಸುತ್ತವೆ, ಒಂದು ಸಣ್ಣ ಲೆಕ್ಕಾಚಾರವನ್ನು ವಿಚಾರ ಮಾಡೋಣ ಪ್ರತಿ ಮನೆಯ ನೀರು ಶುದ್ಧೀಕರಣ ಘಟಕದಿಂದ ತಯಾರಾದ ಅಶುದ್ಧ ನೀರು ಹಾಗೂ ಸಾರ್ವಜನಿಕ ನೀರು ಶುದ್ಧೀಕರಣ ಘಟಕಗಳಿಂದ ತಯಾರಾದ ಅಶುದ್ಧ ನೀರು ಇಷ್ಟು ವರ್ಷಗಳ ಕಾಲ ಎಷ್ಟು ಅಶುದ್ಧ ನೀರನ್ನು ಬೇರ್ಪಡಿಸಿ, ಯಾವುದೇ ಉಪಯೋಗವಿಲ್ಲದೆ ಹೋಗಿರಬಹುದು ಎಂಬ ಅಂದಾಜನ್ನ ಈ ಕಷ್ಟದ ಸಮಯದಲ್ಲಾದರೂ ಯೋಚಿಸುವ ಅವಶ್ಯಕತೆ ಇದೆ. ಆ ನೀರಿನ ಗತಿ ಏನಾಯಿತು ?

ಈ ಅಶುದ್ಧ ನೀರಿಗೂ ಒಂದು ನೀತಿ ಬರಬೇಕು.ಅದಕ್ಕೆ ಸರ್ಕಾರ ಒಂದು ವಿಸ್ತೃತ ಅಧ್ಯಯನ ನಡೆಸಿ ತಜ್ಞರ ಅಭಿಪ್ರಾಯ ಪಡೆದು ನೀರು ಶುದ್ಧೀಕರಣ ಘಟಕಗಳಿಂದ ಹೊರಗೆ ಬರುವ ಅಶುದ್ಧ ನೀರಿಗೆ ಒಂದು ಉಪಯೋಗದ ದಾರಿ ತೋರಿಸಬೇಕು. ಘಟಕಗಳಿಂದ ತಯಾರಾದಂತಹ ಅಶುದ್ಧ ನೀರಿನ ಪ್ರಮಾಣ ನನ್ನ ಅಂದಾಜಿನಂತೆ ದೊಡ್ಡ ಅಂಕಿಯಲ್ಲಿಯೇ ಇದೆ ಮತ್ತು ಇದು ಉಪಯೋಗವಿಲ್ಲದೆ ಹೋಗುತ್ತಿದೆ. ನನ್ನ ಒಂದು ಅಂದಾಜಿನಂತೆ ಈ ನೀರು ಮಾನವರು ಉಪಯೋಗಿಸದೆ ಭೂಮಿಯಲ್ಲಿ ನೀರಿಂಗಿಸಲಾಗುತ್ತೆ. ಈ ನೀರಿಗೂ ಕೂಡ ಒಂದು ಸದುಪಯೋಗದ ವಿಚಾರ, ಯೋಜನೆ, ಯೋಚನೆ ಅವಶ್ಯ. ಯಾವ ನೀರಿಗೆ ಯಾವ ನೀರು ಶುದ್ಧೀಕರಣ ಘಟಕ ಅವಶ್ಯ ಎನ್ನುವುದು ಖಚಿತಪಡಿಸಿಕೊಂಡ ನಂತರವೇ ಅಳವಡಿಕೆ ಯಾದರೆ ಶುದ್ಧ, ಅಶುದ್ಧ , ತ್ಯಾಜ್ಯ ನೀರು ಹಾಳಾಗುವ ಪ್ರಶ್ನೆಯೇ ಬರದು.

ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ