ಬಾಯ್ಫ್ರೆಂಡ್ ಜೊತೆ ಅದ್ಧೂರಿ ವಿವಾಹವಾದ ‘ಅರ್ಜುನ’ ಸಿನಿಮಾ ನಟಿ ಮೀರಾ
Meera Chopra: ಕನ್ನಡದ ‘ಅರ್ಜುನ್’ ಸೇರಿದಂತೆ ಹಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿರುವ ನಟಿ ಮೀರಾ ಚೋಪ್ರಾ, ಬಾಯ್ಫ್ರೆಂಡ್ ಜೊತೆ ವಿವಾಹವಾಗಿದ್ದಾರೆ.
Updated on: Mar 12, 2024 | 8:41 PM

ದರ್ಶನ್ ನಟನೆಯ ‘ಅರ್ಜುನ್’ ಸಿನಿಮಾ ಸೇರಿದಂತೆ ದಕ್ಷಿಣದ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಮೀರಾ ಚೋಪ್ರಾ ವಿವಾಹವಾಗಿದ್ದಾರೆ.

ತೆಲುಗು ತಮಿಳಿನ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಮೀರಾ ಚೋಪ್ರಾ, ತಮ್ಮ ಬಾಯ್ಫ್ರೆಂಡ್ ರಕ್ಷಿತ್ ಕೇಜ್ರಿವಾಲ್ ಜೊತೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.

ತಮ್ಮ ಕಾಲೇಜು ಸಮಯದ ಗೆಳೆಯ ರಕ್ಷಿತ್ ಜೊತೆ ಮೀರಾ ಚೋಪ್ರಾ ವಿವಾಹವಾಗಿದ್ದು, ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮೀರಾ ಚೋಪ್ರಾ ವಿವಾಹವಾಗಿರುವ ರಕ್ಷಿತ್ ಕೇಜ್ರಿವಾಲ್ ಉದ್ಯಮಿಯಾಗಿದ್ದು, ಅವರ ಕುಟುಂಬವು ಸಹ ಉದ್ಯಮಿಗಳ ಕುಟುಂಬವೇ ಆಗಿದೆ.

ಮೀರಾ ಚೋಪ್ರಾ, ಪವನ್ ಕಲ್ಯಾಣ್ ನಟನೆಯ ‘ಬಂಗಾರಂ’, ನಾಗಾರ್ಜುನ ಜೊತೆ ‘ಗ್ರಿಕ್ಕು ವೀರುಡು’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

2008 ರಲ್ಲಿ ಬಿಡುಗಡೆ ಆಗಿದ್ದ ದರ್ಶನ್ ತೂಗುದೀಪ ನಟನೆಯ ‘ಅರ್ಜುನ್’ ಸಿನಿಮಾದಲ್ಲಿ ಮೀರಾ ನಾಯಕಿಯಾಗಿದ್ದರು.

‘ಮುಂಗಾರು ಮಳೆ’ ಸಿನಿಮಾದ ತೆಲುಗು ರೀಮೇಕ್ ‘ವಾನ’ ಸಿನಿಮಾನಲ್ಲಿಯೂ ಸಹ ಮೀರಾ ಚೋಪ್ರಾ ನಾಯಕಿಯಾಗಿ ನಟಿಸಿದ್ದರು.




