ತಮಿಳಿನ ‘ಹಿಡನ್ ಕ್ಯಾಮೆರಾ’ ಸಿನಿಮಾಗೆ ನಾಯಕಿಯಾದ ಕನ್ನಡದ ನಟಿ ಸಂಹಿತಾ ವಿನ್ಯಾ
ಸ್ಯಾಂಡಲ್ವುಡ್ ನಟಿ ಸಂಹಿತಾ ವಿನ್ಯಾ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯಿಂದಲೂ ಆಫರ್ ಬರುತ್ತಿರುವುದು ಅವರಿಗೆ ಸಂತಸ ತಂದಿದೆ. ತಮಿಳಿನ ‘ಹಿಡನ್ ಕ್ಯಾಮೆರಾ’ ಸಿನಿಮಾಗೆ ಸಂಹಿತಾ ವಿನ್ಯಾ ಅವರು ನಾಯಕಿ ಆಗಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲೂ ಸಂಹಿತಾ ಅವರು ಬ್ಯುಸಿ ಆಗಿದ್ದಾರೆ.
Updated on:Oct 03, 2025 | 7:07 PM

ಕನ್ನಡದ ನಟಿ ಸಂಹಿತಾ ವಿನ್ಯಾ ಅವರು ಕನ್ನಡ ಮಾತ್ರವಲ್ಲದೇ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ಅಭಿನಯಿಸುತ್ತಿದ್ದಾರೆ. 75ಕ್ಕೂ ಹೆಚ್ಚು ಫ್ಯಾಷನ್ ಶೋಗಳಲ್ಲಿ ಭಾಗವಹಿಸಿರುವ ಖ್ಯಾತಿ ಅವರಿಗೆ ಇದೆ.

ತಮಿಳಲ್ಲಿ ಜೀವಾ ಸಹೋದರ ಜತಿನ್ ರಮೇಶ್ ಜತೆಗೂ ಸಂಹಿತಾ ವಿನ್ಯಾ ನಟಿಸುತ್ತಿದ್ದಾರೆ. ಇದಲ್ಲದೇ ತಮಿಳಿನ ‘ಹಿಡನ್ ಕ್ಯಾಮೆರಾ’ ಚಿತ್ರಕ್ಕೆ ಸಂಹಿತಾ ನಾಯಕಿ ಆಗಿದ್ದಾರೆ. ಕೇರಳದಲ್ಲಿ ಆ ಚಿತ್ರದ ಕೆಲಸ ನಡೆಯುತ್ತಿದೆ.

ಸಂಹಿತಾ ವಿನ್ಯಾ ನಟನೆಯ ಮಿಕ್ಸಿಂಗ್ ಪ್ರೀತಿ, ಮೆಜೆಸ್ಟಿಕ್ 2, ಆಯುಧ, ಜಿಎಸ್ಟಿ, ಸ್ವಾಭಿಮಾನಿ, ಯಾಕೋ ಬೇಜಾರು, ವಿದೂಷಕ, ಮಿಕ್ಸಿಂಗ್ ಕಾದಲ್ ಮುಂತಾದ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.

‘ಹಾಲು ತುಪ್ಪ’ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂಹಿತಾ ವಿನ್ಯಾ ಅವರು ನಂತರ ಅಮೃತಘಳಿಗೆ, ಲಂಗೋಟಿ ಮ್ಯಾನ್, ಯು ಆರ್ ಮೈ ಹೀರೋ ಸಿನಿಮಾದಲ್ಲೂ ನಾಯಕಿಯಾಗಿ ಅಭಿನಯಿಸಿದರು.

ಈವರೆಗೂ ತಮಿಳು ಸೇರಿದಂತೆ 18ಕ್ಕೂ ಅಧಿಕ ಸಿನಿಮಾಗಳಲ್ಲಿ ಸಂಹಿತಾ ವಿನ್ಯಾ ಅವರು ನಟಿಸಿದ್ದಾರೆ. ಪರಭಾಷೆಯಿಂದ ಸಾಕಷ್ಟು ಅವಕಾಶ ಬರುತ್ತಿರುವುದು ಸಂಹಿತಾ ವಿನ್ಯಾ ಅವರಿಗೆ ಖುಷಿ ನೀಡಿದೆ.
Published On - 6:48 pm, Fri, 3 October 25

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್ ಇಂಟರ್ನೆಟ್) ಸಂಸ್ಥೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ.
Read More




