Updated on:Dec 24, 2022 | 3:10 PM
‘ಕೆಜಿಎಫ್’ ಸಿನಿಮಾ ಮಾಡಿದ ದಾಖಲೆಗಳು ಹಲವು. ಈ ಸಿನಿಮಾದಲ್ಲಿ ನಟಿಸಿದ ಅನೇಕರಿಗೆ ಜನಪ್ರಿಯತೆ ಸಿಕ್ಕಿದೆ. ಆ ಪೈಕಿ ಅರ್ಚನಾ ಜೋಯಿಸ್ ಕೂಡ ಒಬ್ಬರು.
ಇಂದು (ಡಿಸೆಂಬರ್ 24) ಅರ್ಚನಾ ಜೋಯಿಸ್ ಅವರ ಬರ್ತ್ಡೇ. ಅವರಿಗೆ ಎಲ್ಲ ಕಡೆಗಳಿಂದ ಬರ್ತ್ಡೇ ವಿಶ್ ಬರುತ್ತಿದೆ.
ಸೀರಿಯಲ್ಗಳಲ್ಲಿ ನಟಿಸುವ ಮೂಲಕ ಅರ್ಚನಾ ಜೋಯಿಸ್ ಖ್ಯಾತಿ ಗಳಿಸಿದರು. 2018ರಲ್ಲಿ ತೆರೆಗೆ ಬಂದ ‘ಕೆಜಿಎಫ್’ ಅವರ ಮೊದಲ ಚಿತ್ರ. ರಾಕಿ ಭಾಯ್ ತಾಯಿ ಶಾಂತಮ್ಮ ಆಗಿ ಕಾಣಿಸಿಕೊಂಡಿದ್ದರು ಅವರು.
ಅರ್ಚನಾ ಅವರಿಗೆ ಈಗಿನ್ನೂ 28 ವರ್ಷ ವಯಸ್ಸು. ಅವರು ಜನಿಸಿದ್ದು 1994ರ ಡಿಸೆಂಬರ್ 24ರಂದು. ‘ಕೆಜಿಎಫ್’ನಲ್ಲಿ ಅವರು ಈ ಪಾತ್ರದ ಮೂಲಕ ಗಮನ ಸೆಳೆದಿದ್ದರು.
ಅರ್ಚನಾ ಅವರು ಶ್ರೇಯಸ್ ಉಡುಪ ಅವರನ್ನು ಮದುವೆ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾರೆ.
Published On - 12:52 pm, Sat, 24 December 22