ಹೊಸ ಹಾಡಿನಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡ ಆಶಿಕಾ ರಂಗನಾಥ್
‘ಹೀರೋ ಹೊಂಡ’ ಹೆಸರಿನ ಸಾಂಗ್ ‘ಅವತಾರ ಪುರುಷ’ ಸಿನಿಮಾದಲ್ಲಿದೆ. ಈ ಹಾಡಿಗಾಗಿ ಕಲರ್ಫುಲ್ ಸೆಟ್ ಹಾಕಲಾಗಿದ್ದು, ಶರಣ್ ಹಾಗೂ ಆಶಿಕಾ ರಂಗನಾಥ್ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.
Updated on: Apr 02, 2022 | 3:23 PM

ಇಂದು (ಏಪ್ರಿಲ್ 2) ಯುಗಾದಿ ಹಬ್ಬ. ಈ ವಿಶೇಷ ದಿನದಂದು ‘ಅವತಾರ ಪುರುಷ’ ಸಿನಿಮಾದ ‘ಹೀರೋ ಹೊಂಡಾ..’ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಕಲರ್ಫುಲ್ ಸೆಟ್ನಲ್ಲಿ, ಶರಣ್-ಆಶಿಕಾ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

‘ರ‍್ಯಾಂಬೊ 2’ ಸಿನಿಮಾದಲ್ಲಿ ಶರಣ್ ಹಾಗೂ ಆಶಿಕಾ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಇವರ ಕಾಂಬಿನೇಷನ್ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಅದೇ ರೀತಿ, ಈ ಸಿನಿಮಾದಲ್ಲಿದ್ದ ಉತ್ತರ ಕರ್ನಾಟಕದ ಸಾಂಗ್ ‘ಚುಟು ಚುಟು..’ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು.

ಈಗ ‘ಅವತಾರ ಪುರುಷ’ ಸಿನಿಮಾದಲ್ಲೂ ಉತ್ತರ ಕರ್ನಾಟಕ ಸಾಂಗ್ ಬಳಕೆ ಮಾಡಿಕೊಳ್ಳಲಾಗಿದೆ. ‘ಹೀರೋ ಹೊಂಡ’ ಹೆಸರಿನ ಸಾಂಗ್ ‘ಅವತಾರ ಪುರುಷ’ ಸಿನಿಮಾದಲ್ಲಿದೆ. ಈ ಹಾಡಿಗಾಗಿ ಕಲರ್ಫುಲ್ ಸೆಟ್ ಹಾಕಲಾಗಿದ್ದು, ಶರಣ್ ಹಾಗೂ ಆಶಿಕಾ ರಂಗನಾಥ್ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.

ಆಶಿಕಾ ರಂಗನಾಥ್ ಅವರ ಗ್ಲಾಮರಸ್ ಲುಕ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ‘ಚುಟು ಚುಟು..’ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದರು. ವಿಶೇಷ ಎಂದರೆ, ‘ಹೀರೋ ಹೊಂಡ..’ ಹಾಡಿಗೂ ಅವರದ್ದೇ ಸಂಗೀತ ಸಂಯೋಜನೆ ಇದೆ.

ಸದ್ಯ, ಈ ವಿಡಿಯೋಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.



















