ಈ ಆಹಾರಗಳಿಂದ ದೂರವಿರಿ; ಶ್ವಾಸಕೋಶವನ್ನು ರಕ್ಷಿಸಿಕೊಳ್ಳಿ
ಉಸಿರಾಟದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಹೀಗಾಗಿ ಕೆಲವು ಅಭ್ಯಾಸಗಳಿಂದ ದೂರ ಉಳಿಯುವುದು ಅಗತ್ಯವಾಗಿದೆ. ಯಾವೆಲ್ಲಾ ಅಭ್ಯಾಸಗಳು ಶ್ವಾಸಕೋಶಕ್ಕೆ ಹಾನಿಯುಂಟು ಮಾಡಲಿದೆ ಮಾಹಿತಿ ಇಲ್ಲಿದೆ
Updated on: Jan 29, 2022 | 10:11 AM

ಆರೋಗ್ಯವಾಗಿ ಉಸಿರಾಡುತ್ತಿರಲು ಶ್ವಾಸಕೋಶದ ರಕ್ಷಣೆ ಮುಖ್ಯವಾಗಿರುತ್ತದೆ. ಕೊರೊನಾ, ಆಹಾರ ಅಭ್ಯಾಸ ಎಲ್ಲದರಿಂದ ಶ್ವಾಸಕೋಶದ ಆರೋಗ್ಯ ಹದಗೆಡುತ್ತದೆ. ಆದ್ದರಿಂದ ಈ ಆಹಾರಗಳನ್ನು ತ್ಯಜಿಸಿದರೆ ಶ್ವಾಸಕೋಶವನ್ನು ಸುರಕ್ಷಿತವಾಗಿರುತ್ತದೆ.

ಅತಿಯಾದ ಉಪ್ಪಿನ ಸೇವನೆ ಅಧಿಕ ರಕ್ತದೊತ್ತಡವನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲದೆ ಶ್ವಾಸಕೋಶಕ್ಕೂ ಹಾನಿಯುಂಟು ಮಾಡುತ್ತದೆ.

ಸಿಗರೇಟ್ನಲ್ಲಿರುವ ನಿಕೋಟಿನ್ ಅಂಶ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುತ್ತದೆ. ಜತೆಗೆ ಉಸಿರಾಟದ ಸಮಸ್ಯೆಯನ್ನೂ ಉಂಟುಮಾಡುತ್ತದೆ.

ಅತಿಯಾದ ಸಕ್ಕರೆ ಇರುವ ಆಹಾರ ಪದಾರ್ಥಗಳ ಸೇವನೆಯಿಂದ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುತ್ತದೆ.

ಸಂಸ್ಕರಿಸಿದ ಮಾಂಸವು ಆರೋಗ್ಯಕ್ಕೆ ಹಾನಿಕಾರಕ. ಜತೆಗೆ ದೇಹದಲ್ಲಿ ಕೊಬ್ಬನ್ನು ಹೆಚ್ಚು ಮಾಡಿ ಶ್ವಾಸಕೋಶಕ್ಕೂ ಹಾನಿಯುಂಟು ಮಾಡುತ್ತದೆ.

ಎಣ್ಣೆಯಲ್ಲಿ ಕರಿದ ಆಹಾರ, ಜಂಕ್ ಫುಡ್,ಫಾಸ್ಟ್ ಫುಡ್ಗಳು ದೇಹದಲ್ಲಿ ಬೊಜ್ಜು ಬೆಳೆಯಲು ಕಾರಣವಾಗಿ ಉಸಿರಾಟದ ಸಮಸ್ಯೆಗೂ ಕಾರಣವಾಗುತ್ತದೆ.

ಆಲ್ಕೋಹಾಲ್ ಸೇವನೆ ಅಸ್ತಮಾದಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಮದ್ಯಪಾನ ದೇಹದ ಎಲ್ಲ ಅಂಗಗಳಿಗೂ ಹಾನಿಯುಂಟು ಮಾಡುತ್ತದೆ.

TV9 Kannada
Read More




