AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore Rains: ಬೆಂಗಳೂರಿನಲ್ಲಿ ಮಳೆ ಅವಾಂತರ ಒಂದೇ, ಎರಡೇ… ಇಲ್ಲಿವೆ ಫೋಟೊಸ್

ಬೆಂಗಳೂರು, ಅಕ್ಟೋಬರ್ 21: ಮುಳುಗಿದ ಬೈಕ್​ಗಳು, ನಿವಾಸಿಗಳು ಮನೆಯಲ್ಲೇ ಲಾಕ್​, ರಸ್ತೆ ತುಂಬಾ ನೀರಿನ ಹರಿವು, ಅದರಲ್ಲೇ ಬೈಕ್, ಆಟೋ ತಳ್ಳಿಕೊಂಡು ಸಾಗುತ್ತಿರುವ ಸವಾರರು! ಈ ದೃಶ್ಯಗಳೆಲ್ಲ ಕಂಡುಬಂದಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ. ಭಾನುವಾರ ರಾತ್ರಿ, ಸೋಮವಾರ ಬೆಳಗ್ಗೆ ಸುರಿದ ಭಾರಿ ಮಳೆ ಬೆಂಗಳೂರು ಜನರನ್ನು ಅಕ್ಷರಶಃ ಕಂಗಾಲಾಗಿಸಿತ್ತು.

ಗಣಪತಿ ಶರ್ಮಾ
|

Updated on: Oct 21, 2024 | 2:32 PM

Share
ಹೆಚ್​ಎಸ್​ಆರ್​ ಲೇಔಟ್​ನಲ್ಲಿ ಮಳೆ ಅವಾಂತರದಿಂದಾಗಿ ಶಾಲೆಗೆ ಜಲದಿಗ್ಬಂಧನ ಉಂಟಾಯಿತು. 10ಕ್ಕೂ ಹೆಚ್ಚು ಬಸ್​​ಗಳು ಮುಳುಗಡೆಯಾದವು. ಮಳೆಯಿಂದಾಗಿ ಫ್ರೀಡಂ ಶಾಲೆ ಸೇರಿದಂತೆ ಸುತ್ತ ಮುತ್ತ ಕೆರೆಯಂತಾಗಿತ್ತು. ಶಾಲೆ ಹೊರಗೆ ನಿಂತಿರುವ ಬಸ್​ಗಳು ಕೂಡ ನೀರುಪಾಲಾದವು.

1 / 5
ಜೆಜೆ ನಗರದ ವಿಎಸ್​ ಗಾರ್ಡನ್​​ನಲ್ಲಿಯೂ ನಿವಾಸಿಗಳ ಬದುಕೇ ನರಕಮಯವಾಯಿತು. ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ, ಕೊಳಚೆ ನೀರು ಹೊರಹಾಕುವುದೇ ದೊಡ್ಡ ಸವಾಲಾಗಿ ಪರಿಣಮಿಸಿತು.

2 / 5
ಕೋರಮಂಗಲದಲ್ಲಿ ಮುಖ್ಯರಸ್ತೆಗಳೇ ಹಳ್ಳ, ಕೊಳ್ಳಗಳಾಗಿವೆ. ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಇಷ್ಟೇ ಅಲ್ಲ ನೆಟ್​ಬಾಲ್ ಕ್ರೀಡಾಂಗಣ ಜಲಾವೃತ ಆಗಿದ್ದರಿಂದದ ಪಂದ್ಯಗಳನ್ನು ಮುಂದೂಡಿಕೆ ಮಾಡಲಾಗಿದೆ.

3 / 5
ಭಾರಿ ಮಳೆಗೆ ಸರ್ಜಾಪುರ-ದೊಮ್ಮಸಂದ್ರ ರಸ್ತೆ ಜಲಾವೃತಗೊಂಡಿತು. ದೊಮ್ಮಸಂದ್ರ ಸರ್ಕಲ್ ಬಳಿ ರಸ್ತೆ ಕೆರೆಯಂತಾಯಿತು. ಇದರಿಂದ ಕಿಲೋ ಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟ್ರಾಫಿಕ್​ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

4 / 5
ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರಗಳೇ ಆಗಿವೆ. ಹೀಗಾಗಿ ಮಳೆಹಾನಿ ಪ್ರದೇಶಕ್ಕೆ ವಿಪಕ್ಷ ಬಿಜೆಪಿ ನಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಲ್ಕ್​ ಬೋರ್ಡ್ ಜಂಕ್ಷನ್​​ಗೆ ಭೇಟಿ ನೀಡಿದ ವಿಪಕ್ಷ ನಾಯಕ ಅಶೋಕ್, ಅಲ್ಲಿನ ಸಮಸ್ಯೆ ಆಲಿಸಿದರು. ಅಶೋಕ್​ಗೆ ಶಾಸಕ ನಂದೀಶ್​ ರೆಡ್ಡಿ ಸಾಥ್ ನೀಡಿದರು.

5 / 5
Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ

ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ

ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್

ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!

ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್

ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ

ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ

ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ