- Kannada News Photo gallery Bhavya Gowda wanted to win Bigg Boss Kannada Finale Here is her Plus and minus
ಮೂರು ಬಾರಿ ಕ್ಯಾಪ್ಟನ್ ಆದರೂ ಇದೆ ವಂಚನೆ ಆರೋಪ; ಭವ್ಯಾ ಪ್ಲಸ್-ಮೈನಸ್ ಏನು?
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಭವ್ಯಾ ಗೌಡ ಅವರ ಪ್ರಯಾಣ ಏಳುಬೀಳುಗಳಿಂದ ಕೂಡಿದೆ. ಮೂರು ಬಾರಿ ಕ್ಯಾಪ್ಟನ್ ಆದರೂ ವಿವಾದಗಳಿಂದ ಮುಕ್ತರಾಗಿಲ್ಲ. ಅವರ ಡ್ರಾಮಾ, ತ್ರಿವಿಕ್ರಂ ಜೊತೆಗಿನ ಸಂಬಂಧ ಹಾಗೂ ಅಭಿಮಾನಿ ಬಳಗದ ಬೆಂಬಲ ಅವರ ಫೈನಲ್ ಸ್ಥಾನದ ಮೇಲೆ ಪರಿಣಾಮ ಬೀರುತ್ತದೆ. ಗೆಲ್ಲುವ ಸಾಧ್ಯಾ ಸಾಧ್ಯತೆಗಳ ಬಗ್ಗೆ ಇಲ್ಲಿದೆ ವಿವರ.
Updated on: Jan 23, 2025 | 1:10 PM

ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಗೌಡ ಅವರು ಫಿನಾಲೆ ವಾರ ತಲುಪಿದ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿದೆ. ಅವರು ಸಾಕಷ್ಟು ಬಾರಿ ಎಡವಿದರೂ ಮತ್ತೆ ಎದ್ದು ನಿಂತಿದ್ದಾರೆ. ಅವರು ಮೂರು ಬಾರಿ ಕ್ಯಾಪ್ಟನ್ ಆದರೂ ಅವರ ಬಗ್ಗೆ ಇರೋ ಆರೋಪಗಳು ಹಲವು.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆಯಲ್ಲಿ ಆರು ಸ್ಪರ್ಧಿಗಳು ಫಿನಾಲೆ ತಲುಪಿಸಿದ್ದಾರೆ. ಇವರ ಪೈಕಿ ಒಬ್ಬರು ಕಪ್ ಎತ್ತಲಿದ್ದಾರೆ. ಈ ರೇಸ್ನಲ್ಲಿ ಭವ್ಯಾ ಕೂಡ ಇದ್ದು ಕಪ್ ಗೆಲ್ಲುವ ಭರವಸೆಯಲ್ಲಿ ಅವರಿದ್ದಾರೆ. ಅವರು ಸಾಕಷ್ಟು ಏಳು ಬೀಳನ್ನು ಕಂಡಿದ್ದಾರೆ.

ಭವ್ಯಾ ಗೌಡ ಅವರು ಟಾಸ್ಕ್ ವಿಚಾರದಲ್ಲಿ ಭೇಷ್ ಎನಿಸಿಕೊಂಡಿದ್ದಾರೆ. ಅವರು ಈ ಸೀಸನ್ನಲ್ಲಿ ಮೂರು ಬಾರಿ ಕ್ಯಾಪ್ಟನ್ ಆದ ಏಕೈಕ ಸ್ಪರ್ಧಿ ಆಗಿದ್ದಾರೆ. ಆದರೆ, ಮೊದಲ ಬಾರಿಗೆ ಬೇರೆಯವರ ಸಹಾಯದಿಂದ ಕ್ಯಾಪ್ಟನ್ ಆದರು. ಮೂರನೇ ಬಾರಿ ಮೋಸ ಮಾಡಿ ಕ್ಯಾಪ್ಟನ್ ಆದರು.

ಭವ್ಯಾ ಅವರು ಎರಡು ಶೇಡ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ವಾರದ ದಿನಗಳಲ್ಲಿ ಹಾರಾಟ-ಚೀರಾಟ ನಡೆಸುವ ಅವರು ವೀಕೆಂಡ್ನಲ್ಲಿ ಸೈಲೆಂಟ್ ಆಗಿರುತ್ತಾರೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಅವರಿಗೆ ಸುದೀಪ್ನ ಎದುರಿಸೋ ತಾಕತ್ತು ಇಲ್ಲ ಎನ್ನುವ ಅಭಿಪ್ರಾಯ ಇದೆ.

ಸಾಕಷ್ಟು ವಿಚಾರಗಳಲ್ಲಿ ಅವರು ಡ್ರಾಮಾ ಮಾಡುತ್ತಾರೆ. ‘ಅವರು ತ್ರಿವಿಕ್ರಂನ ಸ್ವಾರ್ಥಕ್ಕಾಗಿ ಬಳಸಿಕೊಂಡರು’ ಎಂಬ ಆರೋಪ ಇದೆ. ಸ್ವತಃ ತ್ರಿವಿಕ್ರಂ ಅವರೇ ಈ ಆರೋಪ ಮಾಡಿದ್ದರು. ಇವುಗಳಿಂದ ಹೊರ ಬಂದರೆ ಮಾತ್ರ ಅವರಿಗೆ ಯಶಸ್ಸು ಸಾಧ್ಯ.

ಭವ್ಯಾ ಅವರು ಧಾರಾವಾಹಿ ಹಿನ್ನೆಲೆಯಿಂದ ಬಂದವರು. ‘ಗೀತಾ’ ಧಾರಾವಾಹಿ ಮೂಲಕ ಅವರು ಎಲ್ಲರಿಗೂ ಪರಿಚಯ ಆಗಿದ್ದರು. ಈಗ ಅವರ ಅಭಿಮಾನಿ ಬಳಗ ಹೆಚ್ಚಿದೆ. ಈ ಪೈಕಿ ಅವರಿಗೆ ವೋಟ್ ಮಾಡುವವರು ಎಷ್ಟು ಜನರ ಎನ್ನುವ ಪ್ರಶ್ನೆ ಮೂಡಿದೆ.



















