Disha Patani: ಬದಲಾಯ್ತು ದಿಶಾ ಪಟಾಣಿ ವೇಷ; ಬಿಕಿನಿ ಬದಿಗಿಟ್ಟು ಮೈ ತುಂಬ ಬಟ್ಟೆ ಧರಿಸಿದ್ದಕ್ಕೆ ನೆಟ್ಟಿಗರಿಗೆ ಅಚ್ಚರಿ
Disha Patani Viral Photos: ಇಷ್ಟು ದಿನ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದ ದಿಶಾ ಪಟಾಣಿ ಅವರು ಈಗ ಏಕಾಏಕಿ ಲುಕ್ ಬದಲಾಯಿಸಿಕೊಂಡಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ.
Updated on:Apr 21, 2023 | 5:49 PM

ನಟಿ ದಿಶಾ ಪಟಾಣಿ ಅವರು ಯಾವಾಗಲೂ ಗ್ಲಾಮರಸ್ ಆದ ಬಟ್ಟೆ ಧರಿಸಿಯೇ ಜನರನ್ನು ಸೆಳೆಯುತ್ತಾರೆ. ಆದರೆ ಈಗ ಅವರು ಏಕಾಏಕಿ ತಮ್ಮ ವೇಷ ಬದಲಿಸಿದ್ದಾರೆ.

ಸದಾ ಕಾಲ ಬಿಕಿನಿ ಧರಿಸಿ, ಬೀಚ್ನಲ್ಲಿ ಫೋಟೋಶೂಟ್ ಮಾಡುತ್ತಿದ್ದ ದಿಶಾ ಪಟಾಣಿ ಅವರು ಈಗ ಮೈ ತುಂಬ ಬಟ್ಟೆ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ಇತ್ತೀಚೆಗೆ ದಿಶಾ ಪಟಾಣಿ ಅವರು ವಾರಾಣಸಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಗಂಗಾ ಆರತಿ ಮಾಡಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಚಿತ್ರರಂಗದಲ್ಲಿ ದಿಶಾ ಪಟಾಣಿ ಅವರಿಗೆ ಸಖತ್ ಬೇಡಿಕೆ ಇದೆ. ಹಿಂದಿ ಚಿತ್ರರಂಗದಲ್ಲಿ ಅವರು ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ಅವರ ಕೈಯಲ್ಲಿ ಹಲವು ಆಫರ್ಗಳಿವೆ.

ದಿಶಾ ಪಟಾಣಿ ಅವರು ಈಗ ‘ಕಂಗುವ’ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಈ ಸಿನಿಮಾ ಮೂಲಕ ಅವರು ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಚಿಯಾನ್ ವಿಕ್ರಮ್ ಜೊತೆ ಅವರು ತೆರೆ ಹಂಚಿಕೊಳ್ಳಲಿದ್ದಾರೆ.
Published On - 5:49 pm, Fri, 21 April 23



















