- TV9 Kannada Photo gallery Countdown to New Year 2025 celebrations in Bengaluru: Youth flock to MG Road, Church Street, taja suddi
ಬೆಂಗಳೂರಿನಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಕ್ಷಣಗಣನೆ: ಎಂಜಿ ರಸ್ತೆ, ಚರ್ಚ್ಸ್ಟ್ರೀಟ್ನತ್ತ ಯುವ ಸಮೂಹ
ಬೆಂಗಳೂರಿನಲ್ಲಿ 2025ರ ಹೊಸ ವರ್ಷದ ಆಚರಣೆಗೆ ಜನರು ಭರ್ಜರಿಯಾಗಿ ಸಿದ್ಧರಾಗಿದ್ದಾರೆ. ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌ಗಳಲ್ಲಿ ಪಾರ್ಟಿಗಳು ಜೋರಾಗಿ ನಡೆಯುತ್ತಿವೆ. ಪಬ್‌ಗಳು ವಿಶೇಷ ಪ್ಯಾಕೇಜ್‌ಗಳನ್ನು ನೀಡುತ್ತಿದ್ದು, ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಲಕ್ಷಾಂತರ ಜನರು ಆಚರಣೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
Updated on:Dec 31, 2024 | 8:34 PM

ಇಳಿ ಸಂಜೆಯಿಂದಲೂ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಪಾರ್ಟಿಯ ಗುಂಗು ರಂಗೇರಿದೆ. ಜಸ್ಟ್ ಕೆಲವೇ ಕ್ಷಣಗಳಲ್ಲಿ ಇಡೀ ದೇಶ 2024ಕ್ಕೆ ಗುಡ್‌ಬೈ ಹೇಳಿ, 2025ಕ್ಕೆ ಹಾಯ್ ಹಾಯ್ ಹೇಳಲಿದೆ. 2025 ಅನ್ನ ಭರ್ಜರಿಯಾಗಿ ವೆಲ್‌ಕಮ್ ಮಾಡಲು ಜನರು ಸಜ್ಜಾಗಿದ್ದಾರೆ.

ಬೆಂಗಳೂರಿನಲ್ಲಿ ಈಗಾಗಲೇ ನ್ಯೂ ಇಯರ್ ಪಾರ್ಟಿ ಸ್ಟಾರ್ಟ್ ಆಗಿದ್ದು, ಮಧ್ಯರಾತ್ರಿ 12 ಗಂಟೆ ಯಾವಾಗ ಆಗುತ್ತೆ ಅಂತಾ ಎಲ್ಲರ ಚಿತ್ತ ಗಡಿಯಾರದ ಮೇಲೆ ನೆಟ್ಟಿದೆ. ಸಂಜೆ 7 ಗಂಟೆಯಾಗುತ್ತಿದ್ದಂತೆ ಜನರು ಎಂ.ಜಿ ರೋಡ್ ಬ್ರಿಗೇಡ್ ರೋಡ್‌ಗೆ ಆಗಮಿಸುತ್ತಿದ್ದಾರೆ. ಚರ್ಚ್‌ಸ್ಟ್ರೀಟ್‌ನಲ್ಲಿ ಜಮಾಯಿಸಿದ್ದಾರೆ.

ಮಾರತ್ತಹಳ್ಳಿಯ ಡಿವೈನ್ ಪಬ್ನಲ್ಲಿ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದ್ದು, ಪಬ್ನಲ್ಲಿ ಬಾರ್ ಸೆಂಟರ್, ಡಿಜೆ & ಲೈವ್ ಬ್ಯಾಂಡ್ ವ್ಯವಸ್ಥೆ ಮಾಡಲಾಗಿದೆ. ಡಿಜೆ, ಲೈವ್ ಬ್ಯಾಂಡ್ಗೆ ಪಾರ್ಟಿ ಪ್ರಿಯರು ಹೆಜ್ಜೆ ಹಾಕಲಿದ್ದಾರೆ. ಹೊಸ ವರ್ಷಾಚರಣೆಗೆ 2-3 ದಿನಗಳ ಹಿಂದೆಯೇ ಜನರು ಟೇಬಲ್ ಬುಕ್ ಮಾಡಿದ್ದಾರೆ.

ಬಣ್ಣ ಬಣ್ಣದ ಲೈಟಿಂಗ್ಸ್, ಬಲೂನ್ಗಳಿಂದ ಕಂಗೊಳಿಸುತ್ತಿರುವ ಪಬ್‌ಗಳು, ವಿಶೇಷ ಪ್ಯಾಕೇಜ್ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಅನಿಯಮಿತ ಡ್ರಿಂಕ್ಸ್ ಮತ್ತು ಫುಡ್ಗಳ ಮೂಲಕ ವಿಶೇಷ ಆಫರ್ ನೀಡಲಾಗಿದೆ. ಕಪಲ್ಸ್ಗೆ 5000 ರೂ., ಯುವಕರಿಗೆ 4,000 ರೂ., ಯುವತಿಯರಿಗೆ 2 ಸಾವಿರ ರೂ. ಪಾಸ್ ವಿತರಣೆ ಮಾಡಲಾಗುತ್ತಿದೆ.

ಸುಮಾರು 10ಲಕ್ಷ ಜನ ಬಂದು ಹೋಗುವ ನಿರೀಕ್ಷೆ ಇರೋದ್ರಿಂದ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದು, ಭದ್ರತೆಗೆ 11 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 7,500 ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಪಾರ್ಟಿ ಮಾಡುವುದಕ್ಕೆ ಮಧ್ಯರಾತ್ರಿ 1ಗಂಟೆವರೆಗೂ ಅವಕಾಶವಿದೆ.
Published On - 8:34 pm, Tue, 31 December 24

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್, ವೈಯಿಸ್ ಓವರ್, ಎಡಿಟಿಂಗ್ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.
Read More



