AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ashwin: 36ನೇ ಬಾರಿ… ನೂರನೇ ಟೆಸ್ಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದ ಅಶ್ವಿನ್

Ashwin Records: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸುವ ಮೂಲಕ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ದಾಖಲೆಗಳ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಬಾರಿ 5 ವಿಕೆಟ್​ಗಳನ್ನು ಕಬಳಿಸಿದ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.

TV9 Web
| Edited By: |

Updated on: Mar 09, 2024 | 12:46 PM

Share
ಧರ್ಮಶಾಲಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ರವಿಚಂದ್ರನ್ ಅಶ್ವಿನ್ (R Ashwin) ಐದು ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಐದು ವಿಕೆಟ್​ಗಳೊಂದಿಗೆ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ (Team India) ಪರ ಅತೀ ಹೆಚ್ಚು ಬಾರಿ 5 ವಿಕೆಟ್​ಗಳ ಕಬಳಿಸಿದ ದಾಖಲೆ ಬರೆದಿದ್ದಾರೆ.

1 / 6
ಅಂದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ಬಾರಿ ಐದು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆ ರವಿಚಂದ್ರನ್ ಅಶ್ವಿನ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ ಅವರ ಹೆಸರಿನಲ್ಲಿತ್ತು.

2 / 6
ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ 132 ಟೆಸ್ಟ್ ಪಂದ್ಯಗಳಲ್ಲಿ 35 ಬಾರಿ 5 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿ ರವಿಚಂದ್ರನ್ ಅಶ್ವಿನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

3 / 6
ಭಾರತದ ಪರ 100ನೇ ಟೆಸ್ಟ್ ಪಂದ್ಯಗಳನ್ನಾಡಿರುವ ರವಿಚಂದ್ರನ್ ಅಶ್ವಿನ್ ಒಟ್ಟು 36 ಬಾರಿ 5 ವಿಕೆಟ್​ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ನೂರನೇ ಪಂದ್ಯದ ಮೂಲಕ ಟೀಮ್ ಇಂಡಿಯಾ ಪರ ಅತ್ಯಧಿಕ ಬಾರಿ 5 ವಿಕೆಟ್​ ಕಬಳಿಸಿದ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಅಶ್ವಿನ್ ಯಶಸ್ವಿಯಾಗಿದ್ದಾರೆ.

4 / 6
ಇನ್ನು ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ಬಾರಿ 5 ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. 133 ಟೆಸ್ಟ್ ಪಂದ್ಯಗಳನ್ನಾಡಿರುವ ಮುರಳೀಧರನ್ ಒಟ್ಟು 67 ಬಾರಿ 5 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿಟ್ಟಿದ್ದಾರೆ.

5 / 6
ಇದೀಗ 36ನೇ ಬಾರಿ 5 ವಿಕೆಟ್ ಕಬಳಿಸಿರುವ ರವಿಚಂದ್ರನ್ ಅಶ್ವಿನ್ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿ 37 ಬಾರಿ 5 ವಿಕೆಟ್​ಗಳ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ಶೇನ್ ವಾರ್ನ್ ಇದ್ದು, ಮುಂಬರುವ ಟೆಸ್ಟ್ ಪಂದ್ಯಗಳ ಮೂಲಕ ಈ ದಾಖಲೆ ಮುರಿಯುವ ಅವಕಾಶ ರವಿಚಂದ್ರನ್ ಅಶ್ವಿನ್ ಮುಂದಿದೆ.

6 / 6
Follow Us
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!

ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು

ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ

ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ

ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ

ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​

ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!

ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!

‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು

ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?