AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ತಂಡದಿಂದ ದೂರ; ಈ ಐಪಿಎಲ್‌ನಲ್ಲಿ ಧೋನಿ ಆಡುವುದು ಅನುಮಾನ?

IPL 2026: ಐಪಿಎಲ್ 2026ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗಾಯದ ಸಮಸ್ಯೆ ಹಾಗೂ ಕಳಪೆ ಪ್ರದರ್ಶನದಿಂದ ಬಳಲುತ್ತಿದೆ. ಸತತ ಗೆಲುವಿನ ಲಯಕ್ಕೆ ಮರಳಿದ್ದರೂ, ಸ್ಟಾರ್ ಆಟಗಾರ ಎಂಎಸ್ ಧೋನಿ ಗಾಯದಿಂದಾಗಿ ದೆಹಲಿ ವಿರುದ್ಧದ ಪಂದ್ಯದಿಂದ ಹೊರಗುಳಿದಿರುವುದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಇದು ಸಿಎಸ್‌ಕೆ ಪ್ಲೇಆಫ್ ಕನಸುಗಳನ್ನು ಮತ್ತಷ್ಟು ಮಸುಕಾಗಿಸಿದೆ, ಉಳಿದ ಪಂದ್ಯಗಳಲ್ಲಿ ಅವರ ಆಟದ ಬಗ್ಗೆ ಅನುಮಾನ ಮೂಡಿಸಿದೆ.

ಪೃಥ್ವಿಶಂಕರ
|

Updated on: May 04, 2026 | 5:05 PM

Share
2026 ರ ಐಪಿಎಲ್‌ನಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನ ಏರಿಳಿತಗಳಿಂದ ಕೂಡಿದೆ. ಇದಕ್ಕೆ ಕಾರಣ ತಂಡದ ಸ್ಟಾರ್ ಆಟಗಾರರು ಗಾಯದಿಂದ ಟೂರ್ನಿಯಿಂದ ಹೊರಬಿದ್ದಿರುವುದು. ಇದರ ಜೊತೆಗೆ ತಂಡದಲ್ಲಿರುವವರ ಕಳಪೆ ಪ್ರದರ್ಶನ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಸಿಎಸ್​ಕೆ ಗೆಲುವಿನ ಲಯಕ್ಕೆ ಮರಳಿದ್ದು, ಸತತ ಎರಡು ಪಂದ್ಯಗಳನ್ನು ಗೆದ್ದಿದೆ. ಇದೀಗ ಸಿಎಸ್​ಕೆ ತಂಡಕ್ಕೆ ಡೆಲ್ಲಿ ಎದುರಾಳಿಯಾಗಿ ನಿಂತಿದೆ.

1 / 5
ಈ ಪಂದ್ಯದಲ್ಲಾದರೂ ಎಂಎಸ್ ಧೋನಿ ಸಿಎಸ್​ಕೆ ಪರ ಕಣಕ್ಕಿಳಿಯುತ್ತಾರಾ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ ಎದುರಾಗಿದೆ. ಏಕೆಂದರೆ ಗಾಯದಿಂದಾಗಿ ಈ ಅವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನಾಡದ ಧೋನಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಆಡುವುದಿಲ್ಲ. ಏಕೆಂದರೆ ಧೋನಿ ತಂಡದೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಿಲ್ಲ ಎಂದು ವರದಿಯಾಗಿದೆ.

2 / 5
ಮೇಲೆ ಹೇಳಿದಂತೆ ಐಪಿಎಲ್ 2026 ರ 48 ನೇ ಪಂದ್ಯವು ಮೇ 5 ರ ಮಂಗಳವಾರ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಈ ಪಂದ್ಯಕ್ಕಾಗಿ ಇಡೀ ಚೆನ್ನೈ ತಂಡ ದೆಹಲಿಗೆ ಆಗಮಿಸಿದೆ. ಆದರೆ ಕ್ರಿಕ್‌ಬಜ್ ವರದಿಯ ಪ್ರಕಾರ, ಎಂಎಸ್ ಧೋನಿ ಈ ಬಾರಿಯೂ ತಂಡದೊಂದಿಗೆ ಪ್ರಯಾಣಿಸಲಿಲ್ಲ. ವರದಿಗಳ ಪ್ರಕಾರ, ಧೋನಿ ಇನ್ನೂ ಚೆನ್ನೈನಲ್ಲಿದ್ದು, ಚೇತರಿಕೆಯ ಹಾದಿಯಲ್ಲಿದ್ದಾರೆ.

3 / 5
ಧೋನಿ ಇಲ್ಲದೆ ಸಿಎಸ್‌ಕೆ ಪಂದ್ಯಕ್ಕೆ ಪ್ರಯಾಣಿಸುತ್ತಿರುವುದು ಇದೇ ಮೊದಲಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಇತ್ತೀಚೆಗೆ, ಚೆನ್ನೈ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ, ತಂಡದ ಸಂಯೋಜನೆಗೆ ಅಡ್ಡಿಯಾಗುವುದನ್ನು ತಪ್ಪಿಸಲು ಮತ್ತು ಪಂದ್ಯದ ಸಮಯದಲ್ಲಿ ಪ್ರೇಕ್ಷಕರ ಗಮನವನ್ನು ತಮ್ಮತ್ತ ಸೆಳೆಯುವುದನ್ನು ತಪ್ಪಿಸಲು ಧೋನಿ ತಂಡದೊಂದಿಗೆ ಪ್ರಯಾಣಿಸುತ್ತಿಲ್ಲ ಎಂದು ಬಹಿರಂಗಪಡಿಸಿದ್ದರು. ಹೀಗಾಗಿ ಧೋನಿ ದೆಹಲಿಗೂ ತಂಡದೊಂದಿಗೆ ಪ್ರಯಾಣ ಬೆಳೆಸಿಲ್ಲ ಎಂದು ವರದಿಯಾಗಿದೆ.

4 / 5
ಐಪಿಎಲ್ ಆರಂಭಕ್ಕೂ ಮುನ್ನವೇ ಗಾಯಕ್ಕೆ ತುತ್ತಾದ ಧೋನಿ, ಮೂರ್ನಾಲ್ಕು ಪಂದ್ಯಗಳನ್ನು ಆಡುವುದಿಲ್ಲ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಸಿಎಸ್​ಕೆ ಇದುವರೆಗೆ 9 ಪಂದ್ಯಗಳನ್ನಾಡಿದೆ. ಹೀಗಿರುವಾಗ ಉಳಿದ ಪಂದ್ಯಗಳಲ್ಲಿ ಧೋನಿ ಆಡುವುದು ಅನುಮಾನವಾಗಿದೆ. ಸಿಎಸ್​ಕೆ ಪ್ರದರ್ಶನವನ್ನು ನೋಡಿದರೆ ಅದು ಪ್ಲೇಆಫ್​ಗೇರುವುದು ಅನುಮಾನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಧೋನಿ ಆಟವನ್ನು ಕಣ್ತುಂಬಿಕೊಳ್ಳಲು ಕಾದುಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆ ಎದುರಾಗುವ ಸಾಧ್ಯತೆಗಳಿವೆ.

5 / 5
Follow Us
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?

ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ

ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ

ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು

ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ

ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ

ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್

ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು

ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು

ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್