CSK ತಂಡಕ್ಕೆ ಬಿಗ್ ಶಾಕ್: ಸ್ಟಾರ್ ಆಟಗಾರ ಟೂರ್ನಿಯಿಂದಲೇ ಔಟ್
Chennai Super Kings: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈವರೆಗೆ 5 ಪಂದ್ಯಗಳನ್ನಾಡಿದೆ. ಈ ಐದು ಪಂದ್ಯಗಳಲ್ಲಿ ಮೂರು ಮ್ಯಾಚ್ಗಳಲ್ಲಿ ಸೋತಿರುವ ಸಿಎಸ್ಕೆ ಕೊನೆಯ ಎರಡು ಪಂದ್ಯಗಳಲ್ಲಿ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನ ಬೆನ್ನಲ್ಲೇ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತವೊಂದು ಎದುರಾಗಿದೆ.
Updated on: Apr 16, 2026 | 1:23 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಸೋಲು-ಗೆಲುವುಗಳ ಲೆಕ್ಕಾಚಾರದಲ್ಲೇ ತೊಡಗಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ಎಡಗೈ ವೇಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಹೌದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ವೇಗಿ ಖಲೀಲ್ ಅಹ್ಮದ್ ಬಲಗಾಲಿನ ಸ್ನಾಯು ಸೆಳೆತದ (Right Quadricep Injury) ಸಮಸ್ಯೆಗೀಡಾಗಿದ್ದಾರೆ. ಈ ಸಮಸ್ಯೆಯ ಅವರು ಮುಂದಿನ ಪಂದ್ಯಗಳಿಗೆ ಅವರು ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ಸಿಎಸ್ಕೆ ಮ್ಯಾನೇಜ್ಮೆಂಟ್ ತಿಳಿಸಿದೆ.

ಏಪ್ರಿಲ್ 14 ರಂದು ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ನಡೆದ ಪಂದ್ಯದ ವೇಳೆ ಖಲೀಲ್ ಈ ಗಾಯಕ್ಕೆ ತುತ್ತಾಗಿದ್ದರು. ಪಂದ್ಯದ ಮಧ್ಯದಲ್ಲೇ ನೋವಿನಿಂದಾಗಿ ಅವರು ಮೈದಾನ ತೊರೆಯಬೇಕಾಯಿತು. ವೈದ್ಯಕೀಯ ತಪಾಸಣೆಯ ನಂತರ, ಸ್ನಾಯು ಸೆಳೆತದ ಸಮಸ್ಯೆಯು ಗಂಭೀರವಾಗಿರುವುದು ದೃಢಪಟ್ಟಿದೆ.

ಏಪ್ರಿಲ್ 14 ರಂದು ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ನಡೆದ ಪಂದ್ಯದ ವೇಳೆ ಖಲೀಲ್ ಈ ಗಾಯಕ್ಕೆ ತುತ್ತಾಗಿದ್ದರು. ಪಂದ್ಯದ ಮಧ್ಯದಲ್ಲೇ ನೋವಿನಿಂದಾಗಿ ಅವರು ಮೈದಾನ ತೊರೆಯಬೇಕಾಯಿತು. ವೈದ್ಯಕೀಯ ತಪಾಸಣೆಯ ನಂತರ, ಸ್ನಾಯು ಸೆಳೆತದ ಸಮಸ್ಯೆಯು ಗಂಭೀರವಾಗಿರುವುದು ದೃಢಪಟ್ಟಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮಿ ಓವರ್ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌಧರಿ, ಅಕೇಲ್ ಹೊಸೈನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಝ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಹರ್, ಝಾಕ್ ಫೌಲ್ಕ್ಸ್, ಖಲೀಲ್ ಅಹ್ಮದ್ (ಔಟ್)




