AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

David Miller: ಕಿಲ್ಲರ್ ಮಿಲ್ಲರ್ ವಿಶ್ವ ದಾಖಲೆ

David Miller Record: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಮತ್ತು ವಿವಿಧ ಫ್ರಾಂಚೈಸಿ ಲೀಗ್​ಗಳ ಮೂಲಕ ಕೇವಲ 13 ಆಟಗಾರರು ಮಾತ್ರ ಟಿ20 ಕ್ರಿಕೆಟ್​ನಲ್ಲಿ 12 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್. ಇದೀಗ ಈ ಪಟ್ಟಿಗೆ ಸೇರ್ಪಡೆಯಾಗಿರುವ ಹೊಸ ಬ್ಯಾಟರ್ ಡೇವಿಡ್ ಮಿಲ್ಲರ್.

ಝಾಹಿರ್ ಯೂಸುಫ್
|

Updated on: Apr 29, 2026 | 7:02 AM

Share
ಟಿ20 ಕ್ರಿಕೆಟ್​ನಲ್ಲಿ ಡೇವಿಡ್ ಮಿಲ್ಲರ್ (David Miller) ಹೊಸ ಮೈಲುಗಲ್ಲು ದಾಟಿದ್ದಾರೆ. ಅದು ಸಹ ಸೋಲಿನ ನಡುವೆ. ಅಂದರೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮಿಲ್ಲರ್ 19 ರನ್ ಬಾರಿಸಿದ್ದರು.

1 / 5
ಈ 19 ರನ್​ಗಳೊಂದಿಗೆ ಡೇವಿಡ್ ಮಿಲ್ಲರ್ ಟಿ20 ಕ್ರಿಕೆಟ್​ನಲ್ಲಿ 12 ಸಾವಿರ ರನ್​ಗಳನ್ನು ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಸೌತ್ ಆಫ್ರಿಕಾದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಈ ಮೈಲುಗಲ್ಲು ದಾಟಿದ ವಿಶ್ವದ 13ನೇ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

2 / 5
ಇದಕ್ಕೂ ಮುನ್ನ ಸೌತ್ ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ ಹಾಗೂ ಫಾಫ್ ಡುಪ್ಲೆಸಿಸ್ ಮಾತ್ರ ಟಿ20 ಕ್ರಿಕೆಟ್​ನಲ್ಲಿ 12 ಸಾವಿರ ರನ್​ಗಳ ಗಡಿದಾಟಿದ್ದರು. ಈ ಪಟ್ಟಿಯಲ್ಲಿ 12454 ರನ್​ಗಳೊಂದಿಗೆ ಕ್ವಿಂಟನ್ ಡಿಕಾಕ್ ಮೊದಲ ಸ್ಥಾನದಲ್ಲಿದ್ದರೆ, 12041 ರನ್​ಗಳಿಸಿರುವ ಫಾಫ್ ಡುಪ್ಲೆಸಿಸ್ ದ್ವಿತೀಯ ಸ್ಥಾನದಲ್ಲಿದ್ದಾರೆ.

3 / 5
ಇದೀಗ 513 ಟಿ20 ಇನಿಂಗ್ಸ್​ಗಳ ಮೂಲಕ ಡೇವಿಡ್ ಮಿಲ್ಲರ್ 12008 ರನ್ ಕಲೆಹಾಕಿದ್ದಾರೆ. ಅಲ್ಲದೆ ಮುಂದಿನ ಪಂದ್ಯಗಳಲ್ಲಿ 34 ರನ್ ಗಳಿಸಿದರೆ ಫಾಪ್ ಡುಪ್ಲೆಸಿಸ್ (12041) ಅವರನ್ನು ಹಿಂದಿಕ್ಕಬಹುದು. ಹೀಗಾಗಿ ಈ ಬಾರಿಯ ಐಪಿಎಲ್​ ಮೂಲಕ ಡೇವಿಡ್ ಮಿಲ್ಲರ್ ಟಿ20 ರನ್ ಸರದಾರರ ಪಟ್ಟಿಯಲ್ಲಿ ಮತ್ತೊಂದು ಸ್ಥಾನ ಮೇಲೇರುವುದನ್ನು ಎದುರು ನೋಡಬಹುದು.

4 / 5
ಇನ್ನು ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರಿನಲ್ಲಿದೆ. 2005 ರಿಂದ 2022 ರವರೆಗೆ ವೆಸ್ಟ್ ಇಂಡೀಸ್ ಸೇರಿದಂತೆ ವಿವಿಧ ತಂಡಗಳ ಪರ ಕಣಕ್ಕಿಳಿದಿರುವ ಕ್ರಿಸ್ ಗೇಲ್ 455 ಇನಿಂಗ್ಸ್​ಗಳಿಂದ ಒಟ್ಟು 14562 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

5 / 5
Follow Us
SIR ಗೆ ಶಿಕ್ಷಕರ ನಿಯೋಜನೆ: ತರಗತಿಗಳು ಸ್ಥಗಿತ, ವಿದ್ಯಾರ್ಥಿಗಳ ಪ್ರತಿಭಟನೆ

ಮೈಸೂರು ದಸರಾದಲ್ಲಿ ಕಂಬಳಕ್ಕೆ ವಿರೋಧಿಸ್ತಿರೋ ಪ್ರತಿಭಟನಾಕಾರರು ಹೇಳಿದ್ದೇನು?

ಸಂಡೂರಿನ ಅಂತಾಪುರದಲ್ಲಿ ವಿಜಯನಗರ ಕಾಲದ ಅಪರೂಪದ ಜೈನ ದಾನಶಾಸನ ಪತ್ತೆ!

ಟೋಯಿಂಗ್ ಬಳಿಕವೂ ಮಾಲೀಕರು ಬರದಿದ್ರೆ ಹರಾಜು ಹಾಕ್ತೇವೆ: ಸಚಿವ ಕೃಷ್ಣಭೈರೇಗೌಡ

ರಾಯಚೂರಿನಲ್ಲಿ 760 ಕೆಜಿಗೂ ಅಧಿಕ ನಂದಿನಿ ಕೆನೆಭರಿತ ಹಾಲಿನ ಪುಡಿ ಪತ್ತೆ

ಚೆನ್ನಮ್ಮ ಆರೋಗ್ಯ ಈಗ ಹೇಗಿದೆ? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ

ಹಾರ್ಮೋಜ್ಗನ್ ಪ್ರಾಂತ್ಯದಲ್ಲಿ ಒಟ್ಟು 5-6 ಸೇತುವೆಗಳು ಧ್ವಂಸ

ಸೌದಿ ಅರೇಬಿಯಾದಲ್ಲಿ ಮಂಗಳೂರಿನ ವಿಟ್ಲದ ಯುವಕನ ಸಾಧನೆ!

ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ

ಬಂಟ್ವಾಳ ಕೊಲೆ ಆರೋಪಿ ಬಗ್ಗೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇಸ್