AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಈ ಮೂರು ವಿಕೆಟ್ ಪಡೆದ್ರೆ RCB ಅರ್ಧ ಪಂದ್ಯ ಗೆದ್ದಂತೆ..!

IPL 2026 RCB vs GT: ಇಂಡಿಯನ್ ಪ್ರೀಮಿಯರ್ ಲೀಗ್​ನ ಹೈವೋಲ್ಟೇಜ್ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ಧರ್ಮಶಾಲಾದ ಹೆಚ್​​ಪಿಸಿಎ ಮೈದಾನದಲ್ಲಿ ಇಂದು (ಮೇ 26) ನಡೆಯಲಿರುವ ಐಪಿಎಲ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ.

ಝಾಹಿರ್ ಯೂಸುಫ್
|

Updated on:May 26, 2026 | 2:12 PM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಪ್ಲೇಆಫ್ ಸುತ್ತಿನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ಗೆಲ್ಲಬೇಕಿದ್ದರೆ ಪವರ್​ಪ್ಲೇನಲ್ಲೇ ಮೂರು ವಿಕೆಟ್ ಕಬಳಿಸಬೇಕು. (PC: IPL)

1 / 6
ಒಂದು ವೇಳೆ ಗುಜರಾತ್ ಟೈಟಾನ್ಸ್ ತಂಡದ ಈ ಮೂವರು ಬ್ಯಾಟರ್​ಗಳ ವಿಕೆಟ್ ಮೊದಲ 6 ಓವರ್​​ಗಳಲ್ಲೇ ಸಿಕ್ಕರೆ ಆರ್​ಸಿಬಿ ತಂಡ ಅರ್ಧ ಪಂದ್ಯ ಗೆದ್ದಂತೆ. ಏಕೆಂದರೆ ಈ ಬಾರಿ ಗುಜರಾತ್ ಟೈಟಾನ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿರುವುದು ಈ ಮೂವರು ಬ್ಯಾಟರ್​ಗಳು ಮಾತ್ರ. ಅವರೆಂದರೆ... (PC: IPL)

2 / 6
ಸಾಯಿ ಸುದರ್ಶನ್: ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ದಾಂಡಿಗ ಸಾಯಿ ಸುದರ್ಶನ್ ಈ ಬಾರಿ 14 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 157.92ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿರುವ ಅವರು ಕಲೆಹಾಕಿರುವುದು ಬರೋಬ್ಬರಿ 638 ರನ್​ಗಳು. ಇದರ ನಡುವೆ 29 ಸಿಕ್ಸ್ ಹಾಗೂ 62 ಫೋರ್​ಗಳನ್ನು ಬಾರಿಸಿದ್ದಾರೆ. (PC: IPL)

3 / 6
ಶುಭ್​​ಮನ್ ಗಿಲ್: ಸಾಯಿ ಸುದರ್ಶನ್ ಜೊತೆಗೂಡಿ ಇನಿಂಗ್ಸ್ ಆರಂಭಿಸುತ್ತಿರುವ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ ಈ ಬಾರಿ 161.68 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿರುವುದು ವಿಶೇಷ. ಈ ಮೂಲಕ 14 ಇನಿಂಗ್ಸ್​ಗಳಿಂದ 616 ರನ್ ಕಲೆಹಾಕಿದ್ದಾರೆ. ಇದರ ನಡುವೆ ಗಿಲ್ ಬ್ಯಾಟ್​ನಿಂದ 30 ಸಿಕ್ಸ್ ಹಾಗೂ 57 ಫೋರ್​ಗಳು ಮೂಡಿಬಂದಿವೆ. (PC: IPL)

4 / 6
ಜೋಸ್ ಬಟ್ಲರ್: ಗುಜರಾತ್ ಟೈಟಾನ್ಸ್ ಪರ 14 ಇನಿಂಗ್ಸ್ ಆಡಿರುವ ಜೋಸ್ ಬಟ್ಲರ್ 155ರ ಸ್ಟ್ರೈಕ್ ರೇಟ್​ನಲ್ಲಿ ಒಟ್ಟು 469 ರನ್ ಕಲೆಹಾಕಿದ್ದಾರೆ. ಈ ವೇಳೆ 24 ಸಿಕ್ಸ್ ಹಾಗೂ 46 ಫೋರ್​ಗಳನ್ನು ಬಾರಿಸಿದ್ದಾರೆ. (PC: IPL)

5 / 6
ಈ ಮೂವರನ್ನು ಹೊರತುಪಡಿಸಿ ಗುಜರಾತ್ ಟೈಟಾನ್ಸ್ ತಂಡದ ಯಾವುದೇ ಬ್ಯಾಟರ್  350 ಕ್ಕಿಂತ ಹೆಚ್ಚಿನ ಸ್ಕೋರ್​ಗಳಿಸಿಲ್ಲ. ಅಂದರೆ ಗುಜರಾತ್ ಟೈಟಾನ್ಸ್ ತಂಡ ಬ್ಯಾಟಿಂಗ್ ಶಕ್ತಿ ಸಾಯಿ ಸುದರ್ಶನ್, ಜೋಸ್ ಬಟ್ಲರ್ ಹಾಗೂ ಶುಭ್​ಮನ್ ಗಿಲ್. ಈ ಮೂವರನ್ನು ಆರ್​ಸಿಬಿ ಬೇಗನೆ ಔಟ್ ಮಾಡಿದರೆ ಅರ್ಧ ಪಂದ್ಯ ಗೆದ್ದಂತೆ. (PC: IPL)

6 / 6

Published On - 2:10 pm, Tue, 26 May 26

Follow Us
ಗುಜರಾತ್​​ನಲ್ಲಿ ಮಳೆಯಿಂದ ಪ್ರವಾಹ, ಉಕ್ಕಿ ಹರಿಯುತ್ತಿದೆ ಡಾಂಗ್ ನದಿ

ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲು 6 ಕಿಮೀ ಹೊತ್ತು ಸಾಗಿದ ಶಾಲಾ ವಾರ್ಡನ್!

ಗಾಳಿಯಿಲ್ಲ, ಮಳೆಯಿಲ್ಲ ಮುರಿದುಬಿದ್ದ ಮರದ ಕೊಂಬೆ: ವಾಹನಗಳು ಜಖಂ

CM ಆರ್ಥಿಕ ಸಲಹೆಗಾರ ಹುದ್ದೆ ಬಗ್ಗೆ ರಾಯರೆಡ್ಡಿ ಸ್ಪೋಟಕ ಹೇಳಿಕೆ!

ಸಾಕ್ಷಿಗೆ ಬೆದರಿಕೆ ಹಾಕಿ ಅರೆಸ್ಟ್ ಆದ ದರ್ಶನ್ ಅಭಿಮಾನಿಗಳ ಹಿನ್ನೆಲೆ ಏನು?

ಡಿಕೆಶಿ ಸರ್ಕಾರಕ್ಕೆ 1 ತಿಂಗಳು: ಇದೊಂದು ತಿಂಗಳಲ್ಲಿ ಏನೆಲ್ಲಾ ಮಾಡಿದೆ?

ಮಗಳ ಜೊತೆಗೆ ಸಖತ್ ಆಗಿ ಸ್ಟೆಪ್ ಹಾಕಿದ ನಟ ಗಣೇಶ್: ವಿಡಿಯೋ

4 ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಖಾಲಿ ಖಾಲಿ, ರೈತರ ಬೆಳೆಗಳಿಗಿಲ್ಲ ನೀರು!

ಮಳಿಗೆ ಉದ್ಘಾಟಿಸಿದ ರಚಿತಾ ರಾಮ್, ನಟಿಯ ನೋಡಲು ಜನಸಂದಣಿ

ರಾಜಕೀಯದಲ್ಲೂ ಧರ್ಮ ಇಟ್ಟುಕೊಂಡು ಕೆಲಸ ಮಾಡಬೇಕು: ಡಿಕೆಶಿ