AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPLಗೆ ಗುಡ್ ಬೈ ಹೇಳಿದ ಹ್ಯಾರಿ ಬ್ರೂಕ್..!

Harry Brook: ಹ್ಯಾರಿ ಬ್ರೂಕ್​ ಈ ಹಿಂದೆ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿದ್ದರು. ಈ ವೇಳೆ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಇದಾದ ಬಳಿಕ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಆಯ್ಕೆಯಾಗಿದ್ದರು. ಇದಾಗ್ಯೂ ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿರಲಿಲ್ಲ. ಇದೀಗ ಇಂಗ್ಲೆಂಡ್ ಪರ ದೀರ್ಘಾವಧಿಯವರೆಗೆ ಆಡಲು ಫ್ರಾಂಚೈಸಿ ಲೀಗ್​ಗಳಿಂದ ಹಿಂದೆ ಸರಿಯುತ್ತಿರುವುದಾಗಿ ಹ್ಯಾರಿ ಬ್ರೂಕ್ ಸ್ಪಷ್ಟನೆ ನೀಡಿದ್ದಾರೆ.

ಝಾಹಿರ್ ಯೂಸುಫ್
|

Updated on: Jul 02, 2026 | 12:12 PM

Share
ಇಂಗ್ಲೆಂಡ್ ಟಿ20 ತಂಡದ ನಾಯಕ ಹ್ಯಾರಿ ಬ್ರೂಕ್ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೇರಿದಂತೆ ಯಾವುದೇ ಜಾಗತಿಕ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ದೇಶೀಯ ಟೂರ್ನಿಯಾದ 'ದಿ ಹಂಡ್ರೆಡ್' ಲೀಗ್ ಹೊರತುಪಡಿಸಿ, ಬೇರೆ ಯಾವುದೇ ಲೀಗ್‌ಗಳಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಬ್ರೂಕ್ ಸ್ಪಷ್ಟಪಡಿಸಿದ್ದಾರೆ. (PC: ECB)

1 / 5
ನಾನು ಇಂಗ್ಲೆಂಡ್ ಕ್ರಿಕೆಟ್‌ಗೆ ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಇಂಗ್ಲೆಂಡ್​ನಲ್ಲಿ ನಡೆಯುವ 'ದಿ ಹಂಡ್ರೆಡ್' ಹೊರತುಪಡಿಸಿ ನಾನು ಯಾವುದೇ ಫ್ರಾಂಚೈಸಿ ಕ್ರಿಕೆಟ್ ಆಡಲು ಬಯಸುವುದಿಲ್ಲ. ಇಂಗ್ಲೆಂಡ್ ರಾಷ್ಟ್ರೀಯ ತಂಡದ ಪರ ದೀರ್ಘಕಾಲ ಆಡುವುದು ಮತ್ತು ತಮ್ಮ ದೈಹಿಕ ಸಾಮರ್ಥ್ಯವನ್ನು ಕಾಯ್ದುಕೊಳ್ಳುವುದು ನನ್ನ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ಯಾವುದೇ ಫ್ರಾಂಚೈಸಿ ಲೀಗ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ  ಎಂದು ಹ್ಯಾರಿ ಬ್ರೂಕ್ ತಿಳಿಸಿದ್ದಾರೆ. (PC: ECB)

2 / 5
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆದ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಈ ಹಿಂದೆ ಹ್ಯಾರಿ ಬ್ರೂಕ್ ಕಣಕ್ಕಿಳಿದಿದ್ದರು. ಇದೀಗ ಈ ಎರಡೂ ಲೀಗ್​ಗಳಲ್ಲೂ ಇನ್ಮುಂದೆ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಫ್ರಾಂಚೈಸಿ ಕ್ರಿಕೆಟ್‌ನಿಂದ ಸಿಗುವ ಹಣಕ್ಕಿಂತ ಇಂಗ್ಲೆಂಡ್ ಪರ ಆಡುವುದೇ ತನಗೆ ಹೆಮ್ಮೆಯ ವಿಷಯ ಎಂದಿದ್ದಾರೆ. (PC: ECB)

3 / 5
ಇಂಟ್ರೆಸ್ಟಿಂಗ್ ವಿಷಯ ಎಂದರೆ ಹ್ಯಾರಿ ಬ್ರೂಕ್ ಮೇಲೆ ಈಗಾಗಲೇ ಐಪಿಎಲ್ ಬ್ಯಾನ್ ಇದೆ. 2025ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಬ್ರೂಕ್ ಅವರನ್ನು ₹6.25 ಕೋಟಿಗೆ ಖರೀದಿಸಿತ್ತು. ಆದರೆ ಟೂರ್ನಿ ಆರಂಭಕ್ಕೂ ಮುನ್ನ ಅವರು ಹಠಾತ್ ಆಗಿ ಹಿಂದೆ ಸರಿದಿದ್ದರು. ಹೀಗಾಗಿ ಅವರ ಮೇಲೆ 2 ವರ್ಷಗಳ ನಿಷೇಧ ಹೇರಲಾಗಿದೆ. ಈ ನಿಷೇಧದ ಕಾರಣ ಐಪಿಎಲ್ 2027ರ ಮಿನಿ ಹರಾಜಿನಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಹ್ಯಾರಿ ಬ್ರೂಕ್​ಗೆ ಅವಕಾಶವಿಲ್ಲ.  ((PC: DC)

4 / 5
ಇನ್ನು ಅವರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳಬೇಕಿದ್ದರೆ 2028ರ ಮೆಗಾ ಹರಾಜಿನವರೆಗೆ ಕಾಯಲೇಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಇನ್ಮುಂದೆ ನಾನು ಐಪಿಎಲ್ ಆಡುವುದಿಲ್ಲ ಎಂದು ಬ್ರೂಕ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಫ್ರಾಂಚೈಸಿ ಕ್ರಿಕೆಟ್‌ನಿಂದ ದೂರ ಉಳಿದು, ಇಂಗ್ಲೆಂಡ್​ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದೀರ್ಘಕಾಲದವರೆಗೆ ಆಡಲು ಯೋಜನೆ ಹಾಕಿಕೊಂಡಿರುವುದಾಗಿ ಹ್ಯಾರಿ ಬ್ರೂಕ್ ತಿಳಿಸಿದ್ದಾರೆ. (PC: ECB)

5 / 5
Follow Us