AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಅಡಿಲೇಡ್‌ನಲ್ಲಿ ಹೊಸ ಇತಿಹಾಸ ಬರೆಯುವ ತವಕದಲ್ಲಿ ಕಿಂಗ್ ಕೊಹ್ಲಿ

Virat Kohli: ಅಡಿಲೇಡ್​ನಲ್ಲಿ ನಡೆಯಲ್ಲಿರುವ ಹಗಲು-ರಾತ್ರಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ 43 ರನ್ ಗಳಿಸಿದರೆ, ಅಡಿಲೇಡ್ ಓವಲ್ ಮೈದಾನದಲ್ಲಿ 1000 ಅಂತರಾಷ್ಟ್ರೀಯ ರನ್ ಪೂರೈಸುತ್ತಾರೆ. ವಿಶೇಷವೆಂದರೆ ಅಡಿಲೇಡ್ ಓವಲ್ ಮೈದಾನದಲ್ಲಿ ಈ ಸಾಧನೆ ಮಾಡಿದ ಮೊದಲ ವಿದೇಶಿ ಆಟಗಾರ ವಿರಾಟ್ ಆಗಲಿದ್ದಾರೆ. ಅಂದರೆ ವಿರಾಟ್ ಬಿಟ್ಟರೆ ಯಾವ ವಿದೇಶಿ ಆಟಗಾರನೂ ಆಸ್ಟ್ರೇಲಿಯಾದ ಈ ನೆಲದಲ್ಲಿ ಇಷ್ಟು ರನ್ ಗಳಿಸಿಲ್ಲ.

ಪೃಥ್ವಿಶಂಕರ
|

Updated on: Nov 27, 2024 | 9:40 PM

Share
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಟೆಸ್ಟ್‌ಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯ ಅಡಿಲೇಡ್‌ನ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿದೆ. ಡಿಸೆಂಬರ್ 6 ರಂದು ನಡೆಯಲಿರುವ ಈ ಪಂದ್ಯ ಹಗಲು-ರಾತ್ರಿ ನಡೆಯಲಿದೆ. ಅಂದರೆ, ಈ ಪಂದ್ಯದಲ್ಲಿ ಕೆಂಪು ಚೆಂಡಿನ ಬದಲು ಗುಲಾಬಿ ಬಣ್ಣದ ಚೆಂಡನ್ನು ಬಳಸಲಾಗುವುದು.

1 / 6
ಇನ್ನು ಈ ಪಂದ್ಯ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ತುಂಬಾ ವಿಶೇಷವಾಗಿದ್ದು, ಈ ಪಂದ್ಯದಲ್ಲಿ ಕೊಹ್ಲಿಗೆ ದೊಡ್ಡ ದಾಖಲೆ ನಿರ್ಮಿಸುವ ಅವಕಾಶವಿದೆ. ಇದುವರೆಗೆ ಅಡಿಲೇಡ್ ನೆಲದಲ್ಲಿ ಯಾವುದೇ ಆಟಗಾರನು ಮಾಡಲು ಸಾಧ್ಯವಾಗದ ದಾಖಲೆಯನ್ನು ಕೊಹ್ಲಿ ಬರೆಯುವ ಸಾಧ್ಯತೆ ಇದೆ.

2 / 6
ಇದಕ್ಕೆ ಪೂರಕವಾಗಿ ಅಡಿಲೇಡ್ ಮೈದಾನ ಕೊಹ್ಲಿಯ ನೆಚ್ಚಿನ ಮೈದಾನವಾಗಿದ್ದು, ಈ ಪಿಚ್​ನಲ್ಲಿ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅಡಿಲೇಡ್ ಓವಲ್ ಮೈದಾನದಲ್ಲಿ ವಿರಾಟ್ ಇದುವರೆಗೆ 11 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 73.61 ಸರಾಸರಿಯಲ್ಲಿ 957 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕಗಳೂ ಸೇರಿವೆ.

3 / 6
ಈ ಹಗಲು-ರಾತ್ರಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ 43 ರನ್ ಗಳಿಸಿದರೆ, ಅಡಿಲೇಡ್ ಓವಲ್ ಮೈದಾನದಲ್ಲಿ 1000 ಅಂತರಾಷ್ಟ್ರೀಯ ರನ್ ಪೂರೈಸುತ್ತಾರೆ. ವಿಶೇಷವೆಂದರೆ ಅಡಿಲೇಡ್ ಓವಲ್ ಮೈದಾನದಲ್ಲಿ ಈ ಸಾಧನೆ ಮಾಡಿದ ಮೊದಲ ವಿದೇಶಿ ಆಟಗಾರ ವಿರಾಟ್ ಆಗಲಿದ್ದಾರೆ. ಅಂದರೆ ವಿರಾಟ್ ಬಿಟ್ಟರೆ ಯಾವ ವಿದೇಶಿ ಆಟಗಾರನೂ ಆಸ್ಟ್ರೇಲಿಯಾದ ಈ ನೆಲದಲ್ಲಿ ಇಷ್ಟು ರನ್ ಗಳಿಸಿಲ್ಲ.

4 / 6
ಕೊಹ್ಲಿ ಹೊರತುಪಡಿಸಿ ಬ್ರಿಯಾನ್ ಲಾರಾ ಈ ಮೈದಾನದಲ್ಲಿ 940 ರನ್ ಗಳಿಸಿದ್ದರು. ಆದರೆ, ನಾವು ಟೆಸ್ಟ್ ಸ್ವರೂಪದ ಬಗ್ಗೆ ಮಾತನಾಡುವುದಾದರೆ, ವಿರಾಟ್ ಕೊಹ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 4 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 63.62 ಸರಾಸರಿಯಲ್ಲಿ 509 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಮತ್ತು ಒಂದು ಅರ್ಧ ಶತಕ ಸೇರಿದೆ.

5 / 6
ಪರ್ತ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 5 ರನ್ ಗಳಿಸಿದ್ದ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ 143 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 100 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಅವರು 16 ತಿಂಗಳ ಹಿಂದೆ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸಿದ್ದರು. ಅಂದಿನಿಂದ ಕೊಹ್ಲಿ ಬ್ಯಾಟ್ ಟೆಸ್ಟ್‌ ಶತಕದ ಬರ ಎದುರಿಸುತ್ತಿತ್ತು.

6 / 6
Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ

ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್

ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ

ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು

ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ

ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ

ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ

ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ

ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​

ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ