AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಕ್ಸ್ ಬದಲಿಸಿದ ಶುಭ್​ಮನ್ ಗಿಲ್​ಗೆ ದಂಡದ ಭೀತಿ..!

India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ಲೀಡ್ಸ್​ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 359 ರನ್​ ಕಲೆಹಾಕಿದೆ. ಸದ್ಯ ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಅದರಂತೆ ದ್ವಿತೀಯ ದಿನದಾಟದಲ್ಲಿ ಇನಿಂಗ್ಸ್ ಆರಂಭಿಸಲಿದ್ದಾರೆ.

ಝಾಹಿರ್ ಯೂಸುಫ್
|

Updated on: Jun 21, 2025 | 1:00 PM

Share
ಭಾರತ ಟೆಸ್ಟ್ ತಂಡದ ನಾಯಕ ಶುಭ್​ಮನ್ ಗಿಲ್​ಗೆ (Shubman Gill) ದಂಡದ ಭೀತಿ ಎದುರಾಗಿದೆ. ಅದು ಕೂಡ ಸಾಕ್ಸ್ ಬದಲಿಸಿದಕ್ಕೆ ಎಂಬುದೇ ಅಚ್ಚರಿ. ಅಂದರೆ ಲೀಡ್ಸ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಪಂದ್ಯದ ವೇಳೆ ಶುಭ್​ಮನ್ ಗಿಲ್ ಬಿಳಿ ಸಾಕ್ಸ್ ಧರಿಸಲು ಮರೆತಿದ್ದಾರೆ. ಇದಕ್ಕಾಗಿ ಈಗ ಅವರು ದಂಡ ಕಟ್ಟಬೇಕಾಗಿ ಬರಬಹುದು.

1 / 5
ಐಸಿಸಿ, ನಿಯಮದ ಪ್ರಕಾರ ಟೆಸ್ಟ್ ಪಂದ್ಯಗಳನ್ನಾಡುವಾಗ ಬಿಳಿ ಅಥವಾ ತಿಳಿ ಬೂದು ಬಣ್ಣದ ಸಾಕ್ಸ್ ಧರಿಸುವುದು ಕಡ್ಡಾಯ. ಈ ನಿಯಮವನ್ನು 2023 ರಲ್ಲಿ ಜಾರಿಗೊಳಿಸಲಾಗಿದೆ. ಆದರೆ ಈ ನಿಯಮ ಗೊತ್ತಿಲ್ಲದೆ ಶುಭ್​ಮನ್ ಗಿಲ್ ಇಂಗ್ಲೆಂಡ್ ವಿರುದ್ಧ ಕಪ್ಪು ಬಣ್ಣದ ಸಾಕ್ಸ್ ಧರಿಸಿ ಕಣಕ್ಕಿಳಿದಿದ್ದಾರೆ.

2 / 5
ಇಲ್ಲಿ ಶುಭ್​ಮನ್ ಗಿಲ್ ಧರಿಸಿರುವ ಸಾಕ್ಸ್ ಬಣ್ಣ ಬಹಿರಂಗವಾಗಿರುವುದು ಕೂಡ ಅವರು ಮಾಡಿದ ಎಡವಟ್ಟಿನಿಂದ ಎಂಬುದು ವಿಶೇಷ. ಪಂದ್ಯದ ನಡುವೆ ಪ್ಯಾಡ್ ಸರಿ ಮಾಡಿದಾಗ ಶುಭ್​ಮನ್ ಗಿಲ್ ಅವರ ಪ್ಯಾಂಟ್ ಮೇಲೇಕ್ಕೇರಿದ್ದು, ಇದರಿಂದ ಅವರು ಕಪ್ಪು ಬಣ್ಣದ ಸಾಕ್ಸ್ ಧರಿಸಿರುವುದು ಕಾಣಿಸಿಕೊಂಡಿದೆ. 

3 / 5
ಈ ಬಗ್ಗೆ ಮ್ಯಾಚ್ ರೆಫರಿ ರಿಚಿ ರಿಚರ್ಡ್‌ಸನ್ ಶುಭ್​ಮನ್ ಗಿಲ್ ಅವರನ್ನು ವಿಚಾರಿಸಲಿದ್ದು, ಈ ವೇಳೆ ಡ್ರೆಸ್ ಕೋಡ್ ಉಲ್ಲಂಘನೆ ಮಾಡಿರುವುದು ಕಂಡು ಬಂದರೆ ಗಿಲ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅದರಂತೆ ಉದ್ದೇಶಪೂರ್ವಕ ಹಂತ 1 ಅಪರಾಧವೆಂದು ಪರಿಗಣಿಸಿ ಶುಭ್​ಮನ್ ಗಿಲ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 10 ರಿಂದ 20 ರಷ್ಟು ದಂಡ ವಿಧಿಸಬಹುದು.

4 / 5
ಇನ್ನು ಈ ಪಂದ್ಯದಲ್ಲಿ ಇಂಗ್ಲೆಂಡ್​ ಬೌಲರ್​ಗಳನ್ನು ದಿಟ್ಟವಾಗಿ ಎದುರಿಸಿದ ಗಿಲ್ 175 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 16 ಫೋರ್​ಗಳೊಂದಿಗೆ ಅಜೇಯ 127 ರನ್ ಕಲೆಹಾಕಿದ್ದಾರೆ. ಶುಭ್​ಮನ್ ಗಿಲ್ (127) ಹಾಗೂ ಯಶಸ್ವಿ ಜೈಸ್ವಾಲ್ (101) ಅವರ ಶತಕಗಳ ನೆರವಿನಿಂದ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 359 ರನ್ ಕಲೆಹಾಕಿದೆ. ಇನ್ನು ದ್ವಿತೀಯ ದಿನದಾಟದಲ್ಲಿ ಬ್ಯಾಟಿಂಗ್​​ಗೆ ಬರಲಿಯುವ ಗಿಲ್ ತಪ್ಪು ತಿದ್ದಿಕೊಂಡು ತನ್ನ ಕಪ್ಪು ಸಾಕ್ಸ್ ಅನ್ನು ಬದಲಿಸಲಿದ್ದಾರಾ ಕಾದು ನೋಡಬೇಕಿದೆ.

5 / 5
Follow Us
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್

ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?

ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್

ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ

ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ

'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್

ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!

ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!

ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ

ಚಿಕ್ಕಮಗಳೂರಲ್ಲಿ ಬಾಲಕಿ ನಾಪತ್ತೆ ಕೇಸ್​: 3 ದಿನ ಕಳೆದರೂ ಸಿಕ್ಕಿಲ್ಲ ಸುಳಿವು