AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಲಾರ್ಡ್ಸ್‌ನಲ್ಲಿ ಶತಕ ಬಾರಿಸದಿದ್ದರೂ ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂಧಾನ

Smriti Mandhana's Lord's Masterclass: ಲಾರ್ಡ್ಸ್ ಟೆಸ್ಟ್‌ನಲ್ಲಿ ಸ್ಮೃತಿ ಮಂಧಾನ ಅದ್ಭುತ ಪ್ರದರ್ಶನ ನೀಡಿದ್ದಾರೆ. ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿದ ಅವರು, ಲಾರ್ಡ್ಸ್‌ನಲ್ಲಿ ಅತಿ ವೇಗದ ಟೆಸ್ಟ್ ಅರ್ಧಶತಕ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಸಚಿನ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಲಾರ್ಡ್ಸ್‌ನಲ್ಲಿ ಟೆಸ್ಟ್ ಶತಕ ಅಥವಾ ಅರ್ಧಶತಕ ಗಳಿಸದಿದ್ದರೂ, ಮಂಧಾನ ಕೇವಲ ಒಂದು ಪಂದ್ಯದಲ್ಲಿ ಅವರಿಬ್ಬರಿಗಿಂತ ಹೆಚ್ಚು ರನ್ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಪೃಥ್ವಿಶಂಕರ
|

Updated on: Jul 12, 2026 | 7:30 PM

Share
ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಏಕೈಕ ಮಹಿಳಾ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ದಿನದಿಂದಲೂ ಪ್ರಾಬಲ್ಯ ಸಾಧಿಸಿದೆ. ಇಂಗ್ಲೆಂಡ್ ವಿರುದ್ಧದ ಈ ಟೆಸ್ಟ್ ಪಂದ್ಯದಲ್ಲಿ, ಭಾರತೀಯ ಆಟಗಾರ್ತಿಯರು ಎರಡೂ ರಂಗಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದರು. ಅದರಲ್ಲೂ ಬ್ಯಾಟಿಂಗ್‌ ವಿಭಾಗದಲ್ಲಿ ತಂಡದ ಬೆನ್ನೇಲುಬಾಗಿ ನಿಂತ ಉಪನಾಯಕಿ ಸ್ಮೃತಿ ಮಂಧಾನ ಎರಡನೇ ಇನ್ನಿಂಗ್ಸ್​ನಲ್ಲೂ ಅರ್ಧಶತಕದ ಇನ್ನಿಂಗ್ಸ್ ಆಡಿದರು (PC- BCCI Women x).

1 / 6
ಮೊದಲ ಇನ್ನಿಂಗ್ಸ್​ನಲ್ಲಿ 83 ರನ್​ಗಳ ಇನ್ನಿಂಗ್ಸ್ ಆಡಿದ್ದ ಸ್ಮೃತಿ ಕೇವಲ 51 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಲಾರ್ಡ್ಸ್‌ ಮೈದಾನದಲ್ಲಿ ಮೊಟ್ಟ ಮೊದಲ ಟೆಸ್ಟ್ ಅರ್ಧಶತಕ ಬಾರಿಸಿದ ಮೊದಲ ಬ್ಯಾಟರ್ ಹಾಗೂ ಅತಿ ವೇಗದ ಅರ್ಧಶತಕದ ಬಾರಿಸಿದ ಆಟಗಾರ್ತಿ ಎಂಬ ದಾಖಲೆಯನ್ನು ನಿರ್ಮಿಸಿದರು. ಆದರೆ ಕೇವಲ 17 ರನ್​ಗಳಿಂದ ಲಾರ್ಡ್ಸ್‌ನಲ್ಲಿ ಶತಕ ಬಾರಿಸಿದ ಮೊದಲ ಮಹಿಳಾ ಆಟಗಾರ್ತಿ ಎಂಬ ದಾಖಲೆ ನಿರ್ಮಿಸುವಲ್ಲಿ ವಿಫಲರಾದರು (PC- BCCI Women x).

2 / 6
ಎರಡನೇ ಇನ್ನಿಂಗ್ಸ್​ನಲ್ಲೂ ಸ್ಮೃತಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಹೀಗಾಗಿ ಎರಡನೇ ಇನ್ನಿಂಗ್ಸ್​ನಲ್ಲೂ ಸ್ಮೃತಿ ಅರ್ಧಶತಕದ ಗಡಿ ದಾಟಿ ಶತಕದತ್ತ ಮುನ್ನುಗ್ಗುತ್ತಿದ್ದರು. ಆದರೆ ಮೊದಲ ಇನ್ನಿಂಗ್ಸ್​ನಂತೆ ಎರಡನೇ ಇನ್ನಿಂಗ್ಸ್​ನಲ್ಲೂ ಸ್ಮೃತಿಗೆ ಶತಕದ ಗಡಿ ದಾಟಲು ಸಾಧ್ಯವಾಗಲಿಲ್ಲ. ಈ ಇನ್ನಿಂಗ್ಸ್​ನಲ್ಲಿ ಸ್ಮೃತಿ 70 ರನ್​ ಬಾರಿಸಿದರು. ಇದರ ಜೊತೆಗೆ ಯಾಸ್ತಿಕಾ ಅವರೊಂದಿಗೆ ಎರಡನೇ ವಿಕೆಟ್‌ಗೆ 73 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು (PC- BCCI Women x).

3 / 6
ಎರಡನೇ ದಿನದಾಟದಂತ್ಯಕ್ಕೆ 69 ರನ್‌ ಬಾರಿಸಿ ಅಜೇಯರಾಗಿ ಉಳಿದಿದ್ದ ಸ್ಮೃತಿ ಮೂರನೇ ದಿನದಾಟದಂದು ತಮ್ಮ ಖಾತೆಗೆ ಕೇವಲ 1 ರನ್ ಸೇರಿಸಲಷ್ಟೇ ಶಕ್ತರಾದರು. ಅಂತಿಮವಾಗಿ ಸ್ಮೃತಿ ತಮ್ಮ ಇನ್ನಿಂಗ್ಸ್​ನಲ್ಲಿ 130 ಎಸೆತಗಳನ್ನು ಎದುರಿಸಿ 9 ಬೌಂಡರಿಗಳು ಮತ್ತು 1 ಸಿಕ್ಸ್ ಸಹಿತ 70 ರನ್ ಬಾರಿಸಿ ಔಟಾದರು. ಹೀಗಾಗಿ ಸ್ಮೃತಿ ಎರಡನೇ ಇನ್ನಿಂಗ್ಸ್​ನಲ್ಲೂ ಶತಕ ವಂಚಿತರಾದರು (PC- BCCI Women x).

4 / 6
Smriti (4)

ಸ್ಮೃತಿ ಲಾರ್ಡ್ಸ್‌ನಲ್ಲಿ ಶತಕ ಬಾರಿಸದೆ ಇರಬಹುದು. ಆದರೆ ಭಾರತದ ಇಬ್ಬರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಗೆ ಮಾಡಲು ಸಾಧ್ಯವಾಗದ ಸಾಧನೆಯನ್ನು ಸ್ಮೃತಿ ಮಾಡಿದ್ದಾರೆ. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಲಾರ್ಡ್ಸ್‌ನಲ್ಲಿ ಟೆಸ್ಟ್ ಶತಕ ಗಳಿಸಲಿಲ್ಲ, ಆದರೆ ಆಶ್ಚರ್ಯಕರವೆಂದರೆ, ಸಚಿನ್ ಅಥವಾ ವಿರಾಟ್ ಇಬ್ಬರೂ ಈ ಮೈದಾನದಲ್ಲಿ ಒಂದೇ ಒಂದು ಟೆಸ್ಟ್ ಅರ್ಧಶತಕವನ್ನೂ ಬಾರಿಸಲಿಲ್ಲ (PC- BCCI Women x).

5 / 6
ಲಾರ್ಡ್ಸ್‌ನಲ್ಲಿ ಆಡಿದ ಐದು ಟೆಸ್ಟ್ ಪಂದ್ಯಗಳ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ ಸಚಿನ್ ಕೇವಲ 195 ರನ್ ಗಳಿಸಿದರೆ, ಮತ್ತೊಂದೆಡೆ ಕೊಹ್ಲಿಗೆ, ಈ ಒಂದು ಪಂದ್ಯದಲ್ಲಿ ಮಂಧಾನ ಗಳಿಸಿದಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ. ಲಾರ್ಡ್ಸ್‌ನಲ್ಲಿ ಆಡಿದ ಮೂರು ಟೆಸ್ಟ್ ಪಂದ್ಯಗಳ ಆರು ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಕೇವಲ 127 ರನ್ ಗಳಿಸಿದರೆ, ಮಂಧಾನ ಕೇವಲ ಒಂದು ಪಂದ್ಯದಲ್ಲಿ 153 ರನ್ ಕಲೆಹಾಕಿದರು (PC- Mint).

6 / 6
Follow Us
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ

ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ

ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?

ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು

ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ

ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ

GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!

ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​

5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು

ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು