ಟೀಮ್ ಇಂಡಿಯಾದ ಹೊಸ ಜೆರ್ಸಿಯನ್ನು ಅಡಿಡಾಸ್ ಕಂಪೆನಿ ಅನಾವರಣಗೊಳಿಸಿದೆ. ಭಾರತದ ತಂಡದ ಹೊಸ ಕಿಟ್ ಪ್ರಾಯೋಜಕರಾಗಿರುವ ಅಡಿಡಾಸ್ ಕಂಪೆನಿಯು ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್ಗೆ ವಿಭಿನ್ನ ಜೆರ್ಸಿಯನ್ನು ವಿನ್ಯಾಸಗೊಳಿಸಿರುವುದು ವಿಶೇಷ.
1 / 7
ಅದರಂತೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡದ ಜೆರ್ಸಿ ಮೇಲೆ ಇನ್ಮುಂದೆ ನೀಲಿ ಬಣ್ಣದಲ್ಲಿ ಇಂಡಿಯಾ ಎಂಬ ಬರಹ ಕಾಣಿಸಿಕೊಳ್ಳಲಿದೆ. ಅಲ್ಲದೆ ಭುಜ ಭಾಗದಲ್ಲಿ ಅಡಿಡಾಸ್ ಕಂಪೆನಿಯ ಲೋಗೋವನ್ನು ಪ್ರತಿನಿಧಿಸುವ ಪಟ್ಟಿಗಳನ್ನು ನೀಡಲಾಗಿದೆ.
2 / 7
ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ವಿತ್ ಔಟ್ ಕಾಲರ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಈ ಜೆರ್ಸಿಯನ್ನು ಕಡು ನೀಲಿ ಬಣ್ಣದಲ್ಲಿ ವಿನ್ಯಾಸಗೊಳಿಸಿರುವುದು ವಿಶೇಷ.
3 / 7
ಇನ್ನು ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡವು ತಿಳಿ ನೀಲಿ ಜೆರ್ಸಿಯನ್ನು ಧರಿಸಲಿದೆ. ಈ ಜೆರ್ಸಿಯ ಭುಜ ಭಾಗದಲ್ಲಿ ಅಡಿಡಾಸ್ ಕಂಪೆನಿಯ ಲೋಗೋವನ್ನು ಪ್ರತಿನಿಧಿಸುವ ಬಿಳಿ ಪಟ್ಟಿಗಳನ್ನು ನೀಡಲಾಗಿದೆ.
4 / 7
ಅದರಂತೆ ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾ ಈ 3 ಬಣ್ಣದ ಜೆರ್ಸಿಗಳಲ್ಲಿ ಕಣಕ್ಕಿಳಿಯಲಿದೆ. ಇದಾಗ್ಯೂ ಏಕದಿನ ವಿಶ್ವಕಪ್ಗೆ ಭಾರತ ತಂಡದ ಜೆರ್ಸಿ ವಿನ್ಯಾಸ ಮತ್ತೊಮ್ಮೆ ಬದಲಾಗಲಿದೆ.
5 / 7
ಸದ್ಯ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಓವಲ್ ಮೈದಾನದಲ್ಲಿ ಬುಧವಾರದಿಂದ ಶುರುವಾಗಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಲಿದೆ. ಹೀಗಾಗಿ 2013 ರ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಉತ್ತಮ ಅವಕಾಶ ಟೀಮ್ ಇಂಡಿಯಾ ಮುಂದಿದೆ.