AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಕನ್ನಡಿಗನ ಕ್ರಿಕೆಟ್ ಬದುಕನ್ನೇ ಹಾಳುಗೆಡವಿದ ರಾಜಸ್ಥಾನ್ ಫ್ರಾಂಚೈಸಿ..!

Devdutt Padikkal: 2020 ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ ಕನ್ನಡಿಗ ದೇವದತ್ ಪಡಿಕ್ಕಲ್ ತಾನು ಆಡಿದ ಮೊದಲ ಆವೃತ್ತಿಯಲ್ಲೇ ಅದ್ಭುತ ಆಟದ ಮೂಲಕ ಭಾರತ ಕ್ರಿಕೆಟ್​ನ ಗಮನ ಸೆಳೆದಿದ್ದರು.

ಪೃಥ್ವಿಶಂಕರ
|

Updated on:Apr 06, 2023 | 4:24 PM

ಐಪಿಎಲ್ ಆರಂಭವಾದಗಿನಿಂದಲೂ ಕ್ರಿಕೆಟ್ ಲೋಕಕ್ಕೆ ಹಲವು ಯುವ ಪ್ರತಿಭೆಗಳು ಸಿಕ್ಕಿದ್ದಾರೆ. ಅದರಲ್ಲೂ ಭಾರತ ಕ್ರಿಕೆಟ್​ಗೆ ವಿಶ್ವವೇ ಮೆಚ್ಚುವ ಆಟಗಾರರು ಸಿಕ್ಕಿದ್ದಾರೆ. ಅವರಲ್ಲಿ ಕಿಂಗ್ ಕೊಹ್ಲಿ, ರೋಹಿತ್ ಶರ್ಮಾರಿಂದ ಹಿಡಿದು ಈಗಿನ ಯುವ ಪ್ರತಿಭೆಗಳಾದ ಶುಭ್​ಮನ್ ಗಿಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಇಂತಹ ಇನ್ನು ಹಲವು ಆಟಗಾರರು ಸೇರಿದ್ದಾರೆ. ಆದರೆ ದುರಾದೃಷ್ಟವಶಾತ್ ಈ ಆಟಗಾರರ ಪಟ್ಟಿಗೆ ಸೇರಬೇಕಾದ ಅವನೊಬ್ಬ ಕ್ರಿಕೆಟಿಗನ ಬದುಕು ಆರಂಭವಾಗುವ ಮೊದಲೇ ಅಂತ್ಯವಾಗುವ ಸಾಧ್ಯತೆಗಳು ಹೆಚ್ಚಾಗಿವೆ.

1 / 9
2020 ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ ಕನ್ನಡಿಗ ದೇವದತ್ ಪಡಿಕ್ಕಲ್ ತಾನು ಆಡಿದ ಮೊದಲ ಆವೃತ್ತಿಯಲ್ಲೇ ಅದ್ಭುತ ಆಟದ ಮೂಲಕ ಭಾರತ ಕ್ರಿಕೆಟ್​ನ ಗಮನ ಸೆಳೆದಿದ್ದರು. ಆರ್​ಸಿಬಿ ಪರ ಐಪಿಎಲ್​ ಲೋಕಕ್ಕೆ ಕಾಲಿಟ್ಟಿದ್ದ ಪಡಿಕಲ್, ಈ ತಂಡದ ಪರ ಆಡುವವರೆಗೂ ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದರು. ಆದರೆ ಫ್ರಾಂಚೈಸಿ ಬದಲಾಗುತ್ತಿದ್ದಂತೆ ಈ ಆಟಗಾರನ ಕ್ರಿಕೆಟ್ ಬದುಕು ಬೇರೆ ದಾರಿಯನ್ನೇ ಹಿಡಿದಿದೆ.

2 / 9
2020 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಡಿಕ್ಕಲ್ ಅವರನ್ನು ಮೂಲ ಬೆಲೆ 20 ಲಕ್ಷ ರೂಪಾಯಿಗೆ ಖರೀದಿಸಿತ್ತು. ಮೊದಲ ಸೀಸನ್​ನಲ್ಲೇ ಅಬ್ಬರಿಸಿದ್ದ ದೇವದತ್, ಆಡಿದ 15 ಪಂದ್ಯಗಳಲ್ಲಿ 5 ಅರ್ಧ ಶತಕ ಸೇರಿದಂತೆ 473 ರನ್ ಬಾರಿಸಿದ್ದರು.

3 / 9
ಆ ಬಳಿಕ ಮುಂದಿನ ಸೀಸನ್​ಲ್ಲೂ ಆರ್​ಸಿಬಿ ಪರ 14 ಪಂದ್ಯಗಳನ್ನಾಡಿದ್ದ ಪಡಿಕ್ಕಲ್, ಶತಕ ಸೇರಿದಂತೆ 411 ರನ್ ಸಿಡಿಸಿದ್ದರು. ಹೀಗಾಗಿ ಈ ಸೀಸನ್​ ಬಳಿಕ ತಂಡ ಬದಲಾಯಿಸಿದ ಪಡಿಕ್ಕಲ್​ಗೆ ಐಪಿಎಲ್​ ಹರಾಜಿನಲ್ಲಿ ಕೋಟಿ ಕೋಟಿ ನೀಡಿ ರಾಜಸ್ಥಾನ್ ಫ್ರಾಂಚೈಸ್ ಖರೀದಿಸಿತು.

4 / 9
2022 ರಲ್ಲಿ ಐಪಿಎಲ್ ಹರಾಜಿಗೆ ಎಂಟ್ರಿಕೊಟ್ಟಿದ್ದ ಪಡಿಕ್ಕಲ್​ ಅವರನ್ನು ಖರೀದಿಸಲು ಆರ್‌ಸಿಬಿ, ಮುಂಬೈ ಮತ್ತು ರಾಜಸ್ಥಾನ ತಂಡಗಳು ಬಾರಿ ಪೈಪೋಟಿ ನೀಡಿದ್ದವು. ಆದರೆ ಅಂತಿಮವಾಗಿ ರೂ. 7.75 ಕೋಟಿ ನೀಡಿ ಖರೀದಿಸುವಲ್ಲಿ ರಾಜಸ್ಥಾನ್ ಯಶಸ್ವಿಯಾಗಿತ್ತು.

5 / 9
ದುಬಾರಿ ಹಣ ಪಡೆದು ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಂಡ ಪಡಿಕ್ಕಲ್‌ಗೆ ಹೊಸ ಪಾತ್ರವನ್ನು ನೀಡಲಾಯಿತು. ಇಲ್ಲಿಂದಲೇ ಪಡಿಕ್ಕಲ್ ಕ್ರಿಕೆಟ್ ಬದುಕು ಕುಸಿಯಲಾರಂಭಿಸಿತು. ಆರ್​ಸಿಬಿ ಪರ ಓಪನಿಂಗ್ ಮಾಡುತ್ತಿದ್ದ ಪಡಿಕ್ಕಲ್​ಗೆ ಈ ತಂಡದಲ್ಲಿ ಆರಂಭಿಕನ ಬದಲು 3 ಮತ್ತು 4 ನೇ ಕ್ರಮಾಂಕದ ಜವಾಬ್ದಾರಿಯನ್ನು ನೀಡಲಾಯಿತು.

6 / 9
2022ರಲ್ಲಿ ರಾಜಸ್ಥಾನ್ ಪರ 17 ಪಂದ್ಯಗಳನ್ನಾಡಿದ ಪಡಿಕ್ಕಲ್ 122ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿ 376 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅವರ ಬ್ಯಾಟ್‌ನಿಂದ ಕೇವಲ 1 ಅರ್ಧಶತಕ ಮಾತ್ರ ಹೊರಹೊಮ್ಮಿತು. ಇದೀಗ  ಈ ಸೀಸನ್​ನಲ್ಲೂ ಪಡಿಕ್ಕಲ್​ಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ನೀಡಲಾಗುತ್ತಿದೆ.

7 / 9
ಹೈದರಾಬಾದ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಪಡಿಕ್ಕಲ್ 5 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು 2ನೇ ಪಂದ್ಯದಲ್ಲೂ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದ ಪಡಿಕ್ಕಲ್, ಪಂಜಾಬ್ ಕಿಂಗ್ಸ್ ವಿರುದ್ಧ ಬರೋಬ್ಬರಿ 26 ಎಸೆತಗಳನ್ನು ಎದುರಿಸಿ 80.77ರ ಸ್ಟ್ರೈಕ್ ರೇಟ್​ನಲ್ಲಿ ಕೇವಲ 21 ರನ್‌ ಬಾರಿಸಿದ್ದರು.

8 / 9
ಗುವಾಹಟಿಯಂತಹ ಬ್ಯಾಟಿಂಗ್ ಸ್ನೇಹಿ ಪಿಚ್​ನಲ್ಲೂ ಪಡಿಕ್ಕಲ್ ಅವರ ಬ್ಯಾಟ್ ಮೌನವಾಗಿದಿದ್ದು, ಬ್ಯಾಟಿಂಗ್ ಕ್ರಮಾಂಕದ ಬದಲಾವಣೆಯ ಅಡ್ಡ ಪರಿಣಾಮ ಈ ಆಟಗಾರನ ಮೇಲೆ ಆಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಜಸ್ಥಾನ್ ರಾಯಲ್ಸ್ ತಂಡ ಪಡಿಕ್ಕಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲೇ ಆಡಿಸಿದರೆ ಈ ಆಟಗಾರನ ಆಟ ಇನ್ನಷ್ಟು ಹದಗೆಡುವುದಂತೂ ಖಚಿತ.

9 / 9

Published On - 4:23 pm, Thu, 6 April 23

Follow us
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ

ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ

‘ಅವಕಾಶ ಸಿಕ್ಕರೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಆಗಲು ಸಿದ್ಧ’; ವಿನೋದ್

ಕ್ರೀಡಾ ಸ್ಫೂರ್ತಿ ಅಲ್ಲ... ರಿಷಭ್ ಪಂತ್​ ಮಾಡಿದ್ದು ನಾಟಕ: ಇಲ್ಲಿದೆ ವಿಡಿಯೋ

VIDEO: ನಿಜಕ್ಕೂ ಇದು ನೋ ಬಾಲಾ? ಇಲ್ಲಿದೆ ಉತ್ತರ 

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್

VIDEO: ಮಂಕಡ್ ರನೌಟ್​ಗೆ ಅಪೀಲ್​ ಮಾಡುತ್ತಿದ್ದಂತೆ, ವಿರಾಟ್ ಕೊಹ್ಲಿ ಆಕ್ರೋಶ

ಪರೀಕ್ಷಾರ್ಥ ಹಾರಾಟ ವೇಳೆ ಸಮುದ್ರಕ್ಕೆ ಅಪ್ಪಳಿಸಿದ ಸ್ಪೇಸ್​ಎಕ್ಸ್​ನ ರಾಕೆಟ್

VIDEO: ದಿಗ್ವೇಶ್ ಮಹಾ ಎಡವಟ್ಟು... ಇದೇ ಕಾರಣಕ್ಕೆ ಅಂಪೈರ್ ಔಟ್ ನೀಡಿಲ್ಲ