AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: 2 ವರ್ಷದಿಂದ RCB ತಂಡದಲ್ಲಿದ್ದರೂ ಒಂದೇ ಒಂದು ಚಾನ್ಸ್​ ನೀಡಿಲ್ಲ..!

IPL 2023 Kannada: RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್.

TV9 Web
| Edited By: |

Updated on: Apr 01, 2023 | 7:30 PM

Share
IPL 2023: ಮಾರ್ಚ್ 10, 2021...ಆರ್​ಸಿಬಿ ತಂಡದಲ್ಲಿದ್ದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜೋಶ್ ಫಿಲಿಪೆ ಗಾಯಗೊಂಡಿದ್ದರು. ಹೀಗಾಗಿ ಅವರು ಐಪಿಎಲ್ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದರು. ಅತ್ತ ನ್ಯೂಜಿಲೆಂಡ್ ಟಿ20 ಲೀಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಫಿನ್ ಅಲೆನ್​ಗೆ ಅದೃಷ್ಟ ಖುಲಾಯಿಸಿತು. ಜೋಶ್ ಫಿಲಿಪೆ ಸ್ಥಾನದಲ್ಲಿ ನ್ಯೂಜಿಲೆಂಡ್​ನ ಯುವ ಆಟಗಾರ ಆರ್​ಸಿಬಿ ತಂಡಕ್ಕೆ ಆಯ್ಕೆಯಾದರು.

1 / 8
ಇದು ನಡೆದು ಇದೀಗ 3 ವರ್ಷಗಳೇ ಕಳೆದಿವೆ. ಅಂದರೆ 3 ಸೀಸನ್​ ಐಪಿಎಲ್ ಮುಗಿದಿದೆ. ಇದಾಗ್ಯೂ ಫಿನ್ ಅಲೆನ್​ಗೆ ಒಂದೇ ಒಂದು ಪಂದ್ಯವಾಡಲು ಆರ್​ಸಿಬಿ ಅವಕಾಶ ನೀಡಿಲ್ಲ ಎಂಬುದೇ ಅಚ್ಚರಿ. ಅತ್ತ ಆರ್​ಸಿಬಿ ಫ್ರಾಂಚೈಸಿ ಕಳೆದೆರಡು ವರ್ಷಗಳಿಂದ ಅಲೆನ್ ಅವರನ್ನು ತಂಡದಿಂದ ಕೈ ಬಿಟ್ಟಿಲ್ಲ, ಇತ್ತ ಚಾನ್ಸ್​ ಅನ್ನೂ ಕೂಡ ನೀಡುತ್ತಿಲ್ಲ.

2 / 8
ಈ 3 ವರ್ಷಗಳ ನಡುವೆ ಫಿನ್ ಅಲೆನ್ ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ಪರ ಪದಾರ್ಪಣೆ ಮಾಡಿದ್ದಾರೆ. ವಿವಿಧ ಲೀಗ್​ಗಳಲ್ಲೂ ಅಬ್ಬರಿಸಿದ್ದಾರೆ. ಅಲ್ಲದೆ ಕಿವೀಸ್ ತಂಡದ ಆರಂಭಿಕನಾಗಿ ಸ್ಪೋಟಕ ಇನಿಂಗ್ಸ್ ಆಡಿದ್ದಾರೆ. ಅಲ್ಲದೆ 28 ಪಂದ್ಯಗಳಲ್ಲಿ 160 ರ ಸ್ಟ್ರೈಕ್ ರೇಟ್​ನಲ್ಲಿ 616 ರನ್​ ಬಾರಿಸಿದ್ದಾರೆ.

3 / 8
ಆದರೆ ಐಪಿಎಲ್​ಗೆ ಆಗಮಿಸಿದರೆ ಫಿನ್ ಅಲೆನ್​ ಬೆಂಚ್ ಕಾದಿದ್ದೇ ಬಂತು. ಇದೀಗ ಆರ್​ಸಿಬಿ ಪರ ಮೂರು ವರ್ಷವನ್ನು ಪೂರೈಸಿ ಮತ್ತೆ ನ್ಯೂಜಿಲೆಂಡ್​ಗೆ ಮರಳಿದ್ದಾರೆ.

4 / 8
ಅಚ್ಚರಿ ಎಂದರೆ ಈ ಬಾರಿ ಹಲವು ಆಟಗಾರರು ವಿಫಲರಾದರೂ ಒಂದೇ ಒಂದು ಪಂದ್ಯದಲ್ಲಿ ಅಲೆನ್​ಗೆ ಚಾನ್ಸ್​ ನೀಡಿಲ್ಲ ಎಂಬುದು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಆರ್​​ಸಿಬಿ ಸತತ ವೈಫಲ್ಯ ಅನುಭವಿಸಿದರೂ ಟೀಮ್ ಬ್ಯಾಟಿಂಗ್​ ಲೈನಪ್​ನಲ್ಲಿ ಮಹತ್ವದ ಬದಲಾವಣೆ ಮಾಡಿಲ್ಲ. ಅಲ್ಲದೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಅಲೆನ್​ ಅವರನ್ನು ಕಣಕ್ಕಿಳಿಸಲು ಅವಕಾಶ ಇದ್ದರೂ, ಅಂತಹ ಪ್ರಯೋಗಕ್ಕೂ ಆರ್​ಸಿಬಿ ಮುಂದಾಗಿಲ್ಲ.

5 / 8
ಒಂದು ವೇಳೆ ಫಿನ್ ಅಲೆನ್​ಗೆ ಅವಕಾಶ ನೀಡಿದರೆ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಅಂದರೆ ಫಾಫ್ ಡುಪ್ಲೆಸಿಸ್ ಹಾಗೂ ಫಿನ್ ಅಲೆನ್ ಇನಿಂಗ್ಸ್ ಆರಂಭಿಸಲಿದ್ದಾರೆ. ಈ ಹಿಂದಿನಂತೆ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಬಹುದು.

6 / 8
ಇನ್ನು 3 ಸೀಸನ್​ಗಳಲ್ಲಿ RCB ಒಟ್ಟು 45 ಪಂದ್ಯಗಳನ್ನಾಡಿದೆ. ಈ 45 ಮ್ಯಾಚ್​ಗಳಲ್ಲೂ ಅಲೆನ್ ಬೆಂಚ್ ಕಾದಿದ್ದೇ ಬಂತು. ಇನ್ನು ಮುಂದಿನ ಸೀಸನ್​ನಲ್ಲೂ ಆರ್​ಸಿಬಿ ಫಿನ್ ಅಲೆನ್ ಅವರನ್ನು ತಂಡದಲ್ಲೇ ಉಳಿಸಿಕೊಂಡರೆ ಬೆಂಚ್ ಕಾಯುವುದರಲ್ಲಿ ಅರ್ಧಶತಕ ಬಾರಿಸಿದರೂ ಅಚ್ಚರಿಪಡಬೇಕಿಲ್ಲ.

7 / 8
RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.

8 / 8
ಶಿವರಾತ್ರಿಗೆ ಮಾದಪ್ಪನ ಸನ್ನಿಧಿಗೆ ತೆರಳುವ ಭಕ್ತರೇ ಎಚ್ಚರ

ಧನುಸ್ಸು ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?

ವೃಶ್ಚಿಕ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?

ಸಾವಿರಾರು ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

ತುಲಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?

ಮೈಸೂರು ಅರಮನೆ ತ್ರಿನೇಶ್ವರನಿಗೆ 11 ಕೆಜಿಯ ಚಿನ್ನದ ಮುಖವಾಡ! ಏನಿದರ ವಿಶೇಷ?

ನಿರ್ಬಂಧದ ಮದ್ಯೆಯೂ ನಂದಿ ಗಿರಿಧಾಮಕ್ಕೆ ಬಂದ ಪ್ರೇಮಿಗಳು, ನಿರಾಸೆಯಿಂದ ವಾಪಸ್

ಬಿಲ್ವಪತ್ರೆಯ ಮಹತ್ವ, ಶಿವ ಬಿಲ್ವಪ್ರಿಯ ಯಾಕೆ?
ಬಿಲ್ವಪತ್ರೆಯ ಮಹತ್ವ, ಶಿವ ಬಿಲ್ವಪ್ರಿಯ ಯಾಕೆ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಶುಭ
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಶುಭ
ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ