AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಐಪಿಎಲ್​ ಆಡಿದ​ ಜಿಂಬಾಬ್ವೆ ಆಟಗಾರರು ಯಾರು ಗೊತ್ತಾ?

IPL 2023 Kannada: ಈ ಪಟ್ಟಿಯಲ್ಲಿರುವ ನಾಲ್ಕನೇ ಆಟಗಾರ ಸಿಕಂದರ್ ರಾಝ. ಜಿಂಬಾಬ್ವೆ ತಂಡದ ಸ್ಟಾರ್ ಆಲ್​ರೌಂಡರ್ ಅನ್ನು ಈ ಬಾರಿ ಹರಾಜಿನಲ್ಲಿ 50 ಲಕ್ಷ ರೂ.ಗೆ ಪಂಜಾಬ್ ಕಿಂಗ್ಸ್​ ಫ್ರಾಂಚೈಸಿ ಖರೀದಿಸಿತ್ತು.

TV9 Web
| Edited By: |

Updated on: Apr 01, 2023 | 6:31 PM

Share
IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಿ 15 ವರ್ಷಗಳೇ ಕಳೆದಿವೆ. ಐಸಿಸಿ ಸ್ಥಾನಮಾನ ಹೊಂದಿರುವ ಬಹುತೇಕ ದೇಶಗಳ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಜಿಂಬಾಬ್ವೆ ತಂಡದಿಂದ ಇದುವರೆಗೆ 4 ಆಟಗಾರರು ಐಪಿಎಲ್​ನ ಭಾಗವಾಗಿದ್ದಾರೆ.

1 / 7
ಈ ಪಟ್ಟಿಯಲ್ಲಿರುವ ನಾಲ್ಕನೇ ಆಟಗಾರ ಸಿಕಂದರ್ ರಾಝ. ಜಿಂಬಾಬ್ವೆ ತಂಡದ ಸ್ಟಾರ್ ಆಲ್​ರೌಂಡರ್ ಅನ್ನು ಈ ಬಾರಿ ಹರಾಜಿನಲ್ಲಿ 50 ಲಕ್ಷ ರೂ. ಮೂಲ ಬೆಲೆಗೆ ಪಂಜಾಬ್ ಕಿಂಗ್ಸ್​ ಫ್ರಾಂಚೈಸಿ ಖರೀದಿಸಿತು. ಅಲ್ಲದೆ ಕೆಕೆಆರ್ ವಿರುದ್ಧದ ಪಂದ್ಯದ ಮೂಲಕ ರಾಝ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದಾರೆ.

2 / 7
ಐಪಿಎಲ್​ನಲ್ಲಿ ಚೊಚ್ಚಲ ಪಂದ್ಯವಾಡಿದ ಸಿಕಂದರ್ ರಾಝ 13 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 16 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ವಿಶೇಷ ಎಂದರೆ ಇದುವರೆಗೆ ಐಪಿಎಲ್​ನಲ್ಲಿ 4 ಆಟಗಾರರು ಕಾಣಿಸಿಕೊಂಡರೂ, ಕಣಕ್ಕಿಳಿದಿರುವುದು ಮೂವರು ಆಟಗಾರರು ಮಾತ್ರ. ಹಾಗಿದ್ರೆ ಐಪಿಎಲ್​ಗೆ ಆಯ್ಕೆಯಾದ ಆ 4 ಆಟಗಾರರು ಯಾರೆಲ್ಲಾ ಎಂದು ನೋಡೋಣ...

3 / 7
ತಾತೆಂಡ ತೈಬು: ಐಪಿಎಲ್​ಗೆ ಆಯ್ಕೆಯಾದ ಮೊದಲ ಜಿಂಬಾಬ್ವೆ ಆಟಗಾರ ತಾತೆಂಡ ತೈಬು. 2008 ರಲ್ಲಿ ಕೆಕೆಆರ್ ಪರ 3 ಪಂದ್ಯಗಳನ್ನಾಡಿದ್ದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ತಾತೆಂಡ ತೈಬು ಕೇವಲ 31 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

4 / 7
ರೇ ಪ್ರೈಸ್: ಜಿಂಬಾಬ್ವೆ ತಂಡದ ವೇಗಿ ರೇ ಪ್ರೈಸ್ 2011 ರಲ್ಲಿ ಮುಂಬೈ ಇಂಡಿಯನ್ಸ್ ಪರ ಕೇವಲ 1 ಪಂದ್ಯವಾಡಿದ್ದರು. ಕೆಕೆಆರ್ ವಿರುದ್ಧದ ಈ ಪಂದ್ಯದಲ್ಲಿ 3 ಓವರ್ ಎಸೆದಿದ್ದ ರೇ 33 ರನ್ ನೀಡಿದರೂ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ.

5 / 7
ಬ್ರೆಂಡನ್ ಟೇಲರ್: 2014 ರಲ್ಲಿ ಜಿಂಬಾಬ್ವೆ ತಂಡದ ಆಲ್​ರೌಂಡರ್ ಬ್ರೆಂಡನ್ ಟೇಲರ್ ಅವರನ್ನು ಸನ್​ರೈಸರ್ಸ್ ಹೈದರಾಬಾದ್ ತಂಡವು ಆಯ್ಕೆ ಮಾಡಿಕೊಂಡಿತು. ಇದಾಗ್ಯೂ ಟೇಲರ್​ಗೆ ಐಪಿಎಲ್ ಪಂದ್ಯವಾಡುವ ಅವಕಾಶ ದೊರೆತಿರಲಿಲ್ಲ.

6 / 7
ಸಿಕಂದರ್ ರಾಝ: ಇದೀಗ 9 ವರ್ಷಗಳ ಬಳಿಕ ಜಿಂಬಾಬ್ವೆ ತಂಡದ ಆಟಗಾರ ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯುವ ಮೂಲಕ ರಾಝ ಐಪಿಎಲ್​ ಪಂದ್ಯವಾಡಿದ ಮೂರನೇ ಜಿಂಬಾಬ್ವೆ ಆಟಗಾರ ಎನಿಸಿಕೊಂಡಿದ್ದಾರೆ.

7 / 7
Follow Us
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ

ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ

ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ

ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ

ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?

‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ

ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ