AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಐಪಿಎಲ್​ನಲ್ಲಿ 9 ತಂಡಗಳ ಪರ ಕಣಕ್ಕಿಳಿದ ಆಟಗಾರ ಯಾರು ಗೊತ್ತಾ?

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲೇ 9 ತಂಡಗಳ ಪರ ಆಡಿದ್ದು ಏಕೈಕ ಆಟಗಾರ. ಅದು ಕೂಡ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಎಂಬುದು ವಿಶೇಷ. ಈ ಮೂಲಕ ಐಪಿಎಲ್​ನಲ್ಲಿ ವಿಶೇಷ ದಾಖಲೆ ನಿರ್ಮಿಸಿರುವ ಆಸೀಸ್ ಕ್ರಿಕೆಟಿಗ ಇದೀಗ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿ, ಕಾಮೆಂಟೇಟರ್ ಆಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.

TV9 Web
| Edited By: |

Updated on: Mar 31, 2024 | 11:53 AM

Share
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಅತ್ಯಧಿಕ ತಂಡಗಳ ಪರ ಕಣಕ್ಕಿಳಿದ ಆಟಗಾರ ಯಾರು? ಈ ಪ್ರಶ್ನೆಗೆ ಉತ್ತರ ಆರೋನ್ ಫಿಂಚ್. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಐಪಿಎಲ್​ನಲ್ಲಿ 9 ತಂಡಗಳ ಪರ ಕಣಕ್ಕಿಳಿಯುವ ಮೂಲಕ ದಾಖಲೆ ಬರೆದಿಟ್ಟಿದ್ದಾರೆ. 2023 ರಲ್ಲಿ ಬರೆದ ಈ ದಾಖಲೆ ಈ ವರ್ಷ ಕೂಡ ಮುಂದುವರೆದಿದೆ. ಹಾಗಿದ್ರೆ ಫಿಂಚ್ ಯಾವೆಲ್ಲಾ ತಂಡಗಳ ಪರ ಆಡಿದ್ದರು ಎಂದು ನೋಡೋಣ...

1 / 11
ರಾಜಸ್ಥಾನ್ ರಾಯಲ್ಸ್ (2010): ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಣಕ್ಕಿಳಿಯುವ ಮೂಲಕ ಆರೋನ್ ಫಿಂಚ್ 2010ರಲ್ಲಿ ಐಪಿಎಲ್​ಗೆ ಪಾದಾರ್ಪಣೆ ಮಾಡಿದ್ದರು. ಅಲ್ಲದೆ ಚೊಚ್ಚಲ ಸೀಸನ್​ನಲ್ಲಿ ಕೇವಲ 1 ಪಂದ್ಯವನ್ನಾಡಿದ್ದರು.​

2 / 11
ಡೆಲ್ಲಿ ಡೇರ್​ ಡೇವಿಲ್ಸ್ (2011-12): ಒಂದೇ ವರ್ಷಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದಿಂದ ಹೊರಬಿದ್ದ ಫಿಂಚ್ ಆ ಬಳಿಕ 2 ವರ್ಷಗಳ ಕಾಲ ಡೆಲ್ಲಿ ಡೇರ್ ಡೇವಿಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ  ಡಿಡಿ ಪರ ಒಟ್ಟು 8 ಪಂದ್ಯಗಳನ್ನಾಡಿದ್ದರು.

3 / 11
ಪುಣೆ ವಾರಿಯರ್ಸ್​ (2013): ನಾಲ್ಕನೇ ವರ್ಷದಲ್ಲಿ ಪುಣೆ ವಾರಿಯರ್ಸ್ ತಂಡಕ್ಕೆ ಆಯ್ಕೆಯಾದ ಆರೋನ್ ಫಿಂಚ್ ಒಟ್ಟು 14 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಪುಣೆ ತಂಡದ ನಾಯಕತ್ವವನ್ನೂ ಸಹ ವಹಿಸಿಕೊಂಡಿದ್ದರು.

4 / 11
ಸನ್​ರೈಸರ್ಸ್​ ಹೈದರಾಬಾದ್ (2014): 2014 ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದ ಫಿಂಚ್, ಒಟ್ಟು 13 ಪಂದ್ಯಗಳನ್ನಾಡಿದ್ದರು.

5 / 11
ಮುಂಬೈ ಇಂಡಿಯನ್ಸ್​ (2015): ಸನ್​ರೈಸರ್ಸ್ ಹೈದರಾಬಾದ್ ತಂಡದಿಂದ ಹೊರಬಿದ್ದ ಬಳಿಕ 2015 ರಲ್ಲಿ ಫಿಂಚ್​ಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ಲಭಿಸಿತು. ಮುಂಬೈ ಪರ 3 ಪಂದ್ಯಗಳನ್ನಾಡಿದ್ದರು.

6 / 11
ಗುಜರಾತ್ ಲಯನ್ಸ್ (2016-17) 2016 ಮತ್ತು 2017 ರಲ್ಲಿ ಗುಜರಾತ್ ಲಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಆರೋನ್ ಫಿಂಚ್ ಒಟ್ಟು 16 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.

7 / 11
ಕಿಂಗ್ಸ್ ಇಲೆವೆನ್ ಪಂಜಾಬ್ (2018): ಗುಜರಾತ್ ಲಯನ್ಸ್ ತಂಡ ಐಪಿಎಲ್​ನಿಂದ ಮರೆಯಾಗುತ್ತಿದ್ದಂತೆ ಆರೋನ್ ಫಿಂಚ್ ಅವರಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್​) ಅವಕಾಶ ನೀಡಿತು. ಅದರಂತೆ 2018 ರಲ್ಲಿ ಪಂಜಾಬ್ ಪರ 10 ಪಂದ್ಯಗಳನ್ನಾಡಿದ್ದರು.

8 / 11
ರಾಯಲ್ ಚಾಲೆಂಜರ್ಸ್ ಬೆಂಗಳೂರು (2020): 2019 ರ ಐಪಿಎಲ್​ನಲ್ಲಿ ಕಾಣಿಸಿಕೊಳ್ಳದ ಆರೋನ್ ಫಿಂಚ್ 2020 ರಲ್ಲಿ ಮತ್ತೆ ಹರಾಜಿಗಾಗಿ ಹೆಸರು ನೀಡಿದ್ದರು. ಈ ವೇಳೆ ಆರ್​ಸಿಬಿ ತಂಡವು ಫಿಂಚ್ ಅವರನ್ನು ಖರೀದಿಸಿತು. ಅಲ್ಲದೆ ಆರ್​ಸಿಬಿ ಪರ ಫಿಂಚ್ 12 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.

9 / 11
ಕೊಲ್ಕತ್ತಾ ನೈಟ್ ರೈಡರ್ಸ್​ (2022): ಐಪಿಎಲ್ 2021 ರಲ್ಲಿ ಆರೋನ್ ಫಿಂಚ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದಾಗ್ಯೂ 2022 ರಲ್ಲಿ ಕೆಕೆಆರ್ ತಂಡಕ್ಕೆ ಬದಲಿ ಆಟಗಾರನಾಗಿ ಎಂಟ್ರಿ ಕೊಟ್ಟ ಫಿಂಚ್ 5 ಪಂದ್ಯಗಳನ್ನಾಡಿದ್ದರು.

10 / 11
ಈ ಮೂಲಕ ಐಪಿಎಲ್​ನಲ್ಲಿ 9 ತಂಡಗಳ ಪರ ಕಣಕ್ಕಿಳಿಯುವ ಮೂಲಕ ಆರೋನ್ ಫಿಂಚ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಫಿಂಚ್ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

11 / 11
ಚೆಂಡಿಲ್ಲದೆ ಸ್ಟಂಪ್ ಔಟ್: ಪಾಕ್ ವಿಕೆಟ್ ಕೀಪರ್​ನ ಮೋಸದಾಟ ಬಯಲು!

ಈ ವಿಷಯ ಗೊತ್ತಾದ್ರೆ ಚರ್ಕವರ್ತಿಯನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ; ಮಂಜು

ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್

ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?

ಇಂದು ಈ ರಾಶಿಯವರಿಗೆ ಧನ ಯೋಗ!
ಇಂದು ಈ ರಾಶಿಯವರಿಗೆ ಧನ ಯೋಗ!
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ

ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್

ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್