AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ‘ಪವರ್​’ಫುಲ್ ದಾಖಲೆ ಬರೆದ RCB

IPL 2024 RCB vs GT: ಐಪಿಎಲ್ 2024ರ 52ನೇ ಪಂದ್ಯದಲ್ಲಿ ಆರ್​ಸಿಬಿ ತಂಡ ಜಯ ಸಾಧಿಸಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 147 ರನ್​ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ತಂಡವು 13.4 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ 4 ವಿಕೆಟ್​ಗಳ ಜಯ ಸಾಧಿಸಿದೆ.

TV9 Web
| Edited By: |

Updated on: May 05, 2024 | 7:38 AM

Share
ಐಪಿಎಲ್​ನ​ (IPL 2024) 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪವರ್​ಪ್ಲೇನಲ್ಲಿ ಪವರ್​ಫುಲ್ ದಾಖಲೆ ಬರೆದಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು.

1 / 6
ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಆರ್​ಸಿಬಿ ದಾಳಿಗೆ ತತ್ತರಿಸಿತು. ಪರಿಣಾಮ 19.3 ಓವರ್​ಗಳಲ್ಲಿ ಕೇವಲ 147 ರನ್​ಗಳಿಸಿ ಆಲೌಟ್ ಆಯಿತು. 148 ರನ್​ಗಳ ಸುಲಭ ಗುರಿ ಪಡೆದ ಆರ್​ಸಿಬಿ ತಂಡಕ್ಕೆ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಸ್ಪೋಟಕ ಆರಂಭ ಒದಗಿಸಿದ್ದರು.

2 / 6
ಮೊದಲ ಓವರ್​ನಿಂದಲೇ ಬಿರುಸಿನ ಆಟಕ್ಕೆ ಒತ್ತು ನೀಡಿದ ಕಿಂಗ್ ಕೊಹ್ಲಿ ಸಿಕ್ಸ್​ನೊಂದಿಗೆ ಆರ್​ಸಿಬಿ ತಂಡದ ಸ್ಕೋರ್ ಖಾತೆ ತೆರೆದಿದ್ದರು. ಮತ್ತೊಂದೆಡೆ ಫಾಫ್ ಡುಪ್ಲೆಸಿಸ್ ಕೂಡ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಗುಜರಾತ್ ಟೈಟಾನ್ಸ್ ತಂಡದ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ಈ ಜೋಡಿ 3.1 ಓವರ್​ಗಳಲ್ಲಿ ತಂಡದ ಮೊತ್ತವನ್ನು 50ರ ಗಡಿದಾಟಿಸಿದರು.

3 / 6
ಆ ಬಳಿಕ ಕೂಡ ಆರ್ಭಟ ಮುಂದುವರೆಸಿದ ಫಾಫ್ ಡುಪ್ಲೆಸಿಸ್ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಪವರ್​​ಪ್ಲೇ ಮುಕ್ತಾಯದ ವೇಳೆಗೆ ಆರ್​ಸಿಬಿ ಬರೋಬ್ಬರಿ 92 ರನ್​ ಕಲೆಹಾಕಿತು. ಈ ರನ್​ಗಳೊಂದಿಗೆ ಹೊಸ ದಾಖಲೆ ಬರೆಯುವಲ್ಲಿ ವಿರಾಟ್ ಕೊಹ್ಲಿ ಹಾಗೂ ಫಾಫ್ ಜೋಡಿ ಯಶಸ್ವಿಯಾದರು.

4 / 6
ಅಂದರೆ ಇದು ಪವರ್​ಪ್ಲೇನಲ್ಲಿ ಆರ್​ಸಿಬಿ ತಂಡ ಕಲೆಹಾಕಿದ ಗರಿಷ್ಠ ಸ್ಕೋರ್. ಇದಕ್ಕೂ ಮುನ್ನ ಆರ್​ಸಿಬಿ ತಂಡ ಮೊದಲ ಓವರ್​ನಲ್ಲಿ 79 ರನ್​ಗಳಿಸಿದ್ದು ದಾಖಲೆಯಾಗಿತ್ತು. 2011 ರಲ್ಲಿ ಕೊಚ್ಚಿ ಟಸ್ಕರ್ಸ್​ ಕೇರಳ ಹಾಗೂ 2024 ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಆರ್​ಸಿಬಿ ಪವರ್​ಪ್ಲೇನಲ್ಲಿ 79 ರನ್ ಬಾರಿಸಿದ್ದರು.

5 / 6
ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧ ಮೊದಲ 6 ಓವರ್​ಗಳಲ್ಲೇ 92 ರನ್ ಸಿಡಿಸುವ ಮೂಲಕ ಆರ್​ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಆರ್​ಸಿಬಿ ತಂಡಕ್ಕೆ ಪವರ್​ಫುಲ್ ಆರಂಭ ಒದಗಿಸಿ ಹೊಸ ಅಧ್ಯಾಯವನ್ನು ಬರೆದಿದ್ದಾರೆ.

6 / 6
Follow Us
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು

ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ

‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ

ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು

‘ಆಕಾಶ್’ ಸಿನಿಮಾ ಮರು ಬಿಡುಗಡೆ: ಹೀಗಿತ್ತು ನೋಡಿ ಅಭಿಮಾನಿಗಳ ಸಂಭ್ರಮ

ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ

‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ

ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಕಿಡಿ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?

Video: ಬಾಲಕಿ ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಫೋಟ

ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ