IPL 2025: ಬ್ಯಾನ್ ಬ್ಯಾನ್ ಬ್ಯಾನ್… ಐಪಿಎಲ್ ಆಟಗಾರರಿಗೆ ಬ್ಯಾನ್ ಭೀತಿ
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್-18 ಇಂದಿನಿಂದ (ಮಾ.22) ಶುರುವಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದೊಂದಿಗೆ ಐಪಿಎಲ್ನಲ್ಲಿ ಡಿಮೆರಿಟ್ ಪಾಯಿಂಟ್ಸ್ ನಿಯಮ ಕೂಡ ಜಾರಿಯಾಗಲಿದೆ.
Updated on:Mar 22, 2025 | 9:06 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬಿಸಿಸಿಐ ಡಿಮೆರಿಟ್ ಪಾಯಿಂಟ್ ನಿಯಮವನ್ನು ಪರಿಚಯಿಸಿದೆ. ಈ ನಿಯಮವು ಈ ಬಾರಿಯ ಐಪಿಎಲ್ನ ಮೊದಲ ಪಂದ್ಯದೊಂದಿಗೆ ಜಾರಿಯಾಗಲಿದೆ. ಅಂದರೆ ಇಲ್ಲಿ ಅನುಚಿತವಾಗಿ ವರ್ತಿಸುವ ಅಥವಾ ಇನ್ನಿತರೆ ತಪ್ಪುಗಳನ್ನು ಮಾಡುವ ಆಟಗಾರರಿಗೆ ಡಿಮೆರಿಟ್ ಪಾಯಿಂಟ್ ನೀಡಲಿದ್ದಾರೆ. ಈ ನಿಯಮದ ಜಾರಿಯಿಂದಾಗಿ ಆಟಗಾರರು ನಿಷೇಧಕ್ಕೆ ಒಳಗಾಗಬಹುದು.

ಏಕೆಂದರೆ ಈ ನಿಯಮವು 3 ವರ್ಷಗಳ ಅವಧಿವರೆಗೆ ಚಾಲ್ತಿಯಲ್ಲಿರಲಿದೆ. ಅಂದರೆ ಆಟಗಾರನೊಬ್ಬ ತಪ್ಪು ಮಾಡಿ ಡಿಮೆರಿಟ್ ಪಾಯಿಂಟ್ ಪಡೆದರೆ, ಆ ಡಿಮೆರಿಟ್ ಅಂಕ ಮೂರು ವರ್ಷಗಳವರೆಗೆ ಮುಂದುವರೆಯಲಿದೆ. ಈ ಮೂರು ವರ್ಷಗಳ ಅವಧಿಯಲ್ಲಿ ಇಂತಹ ತಪ್ಪುಗಳನ್ನು ಪುನರಾವರ್ತಿಸಿದರೆ ಮತ್ತಷ್ಟು ಡಿಮೆರಿಟ್ ಅಂಕಗಳನ್ನು ಪಡೆದು ನಿಷೇಧಕ್ಕೊಳಗಾಗಬಹುದು. ಇದಕ್ಕಾಗಿ 4 ಹಂತಗಳ ಡಿಮೆರಿಟ್ ಪಾಯಿಂಟ್ ವ್ಯವಸ್ಥೆಯನ್ನು ಪರಿಚಯಿಸಿದೆ. ಅದರಂತೆ...

ನಿಯಮ 1: ಆಟಗಾರನೊಬ್ಬ ಮೂರು ವರ್ಷದೊಳಗೆ 4 ರಿಂದ 7 ಡಿಮೆರಿಟ್ ಪಾಯಿಂಟ್ಸ್ ಪಡೆದರೆ ಆತ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಲಿದ್ದಾನೆ.

ನಿಯಮ 2: ಮೂರು ವರ್ಷದೊಳಗೆ ಆಟಗಾರನು 8 ರಿಂದ 11 ಡಿಮೆರಿಟ್ ಪಾಯಿಂಟ್ ಪಡೆದುಕೊಂಡರೆ 2 ಪಂದ್ಯಗಳಿಂದ ಬ್ಯಾನ್ ಮಾಡಲಾಗುತ್ತದೆ.

ನಿಯಮ 3: ಮೂರು ವರ್ಷದ ಅವಧಿಯಲ್ಲಿ ಆಟಗಾರನೊಬ್ಬ 12 ರಿಂದ 15 ಡಿಮೆರಿಟ್ ಅಂಕಗಳನ್ನು ಪಡೆದರೆ, ಮೂರು ಪಂದ್ಯಗಳಿಗೆ ನಿಷೇಧಕ್ಕೊಳಗಾಗಲಿದ್ದಾನೆ.

ನಿಯಮ 4: ಮೂರು ವರ್ಷಗಳಲ್ಲಿ ಆಟಗಾರನೊಬ್ಬನು 16 ಅಥವಾ ಅದಕ್ಕಿಂತ ಹೆಚ್ಚಿನ ಡಿಮೆರಿಟ್ ಪಾಯಿಂಟ್ಸ್ ಪಡೆದುಕೊಂಡರೆ ಆತನನ್ನು 5 ಪಂದ್ಯಗಳಿಂದ ಬ್ಯಾನ್ ಮಾಡಲಾಗುತ್ತದೆ.

ಈ ನಿಯಮಗಳ ಮೂಲಕ ಮೈದಾನದಲ್ಲಿ ಆಟಗಾರರ ಆಕ್ರಮಣಕಾರಿ ಹಾಗೂ ಅನುಚಿತ ವರ್ತನೆಗೆ ಮತ್ತು ನಾಯಕನ ಸ್ಲೋ ಓವರ್ ರೇಟ್ ತಪ್ಪುಗಳಿಗೆ ಕಡಿವಾಣ ಹಾಕಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅದರಂತೆ ಈ ಬಾರಿಯ ಐಪಿಎಲ್ನಲ್ಲಿ ಆಟಗಾರರಲ್ಲಿ ಹೆಚ್ಚಿನ ಶಿಸ್ತು ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.
Published On - 9:05 am, Sat, 22 March 25

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More