AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ 3 ಬೇಡಿಕೆ ಮುಂದಿಟ್ಟ ಫ್ರಾಂಚೈಸಿಗಳು

IPL 2025: ಐಪಿಎಲ್ ಮೆಗಾ ಹರಾಜು ಮೊತ್ತವನ್ನು 120 ಕೋಟಿ ರೂ.ಗೆ ಏರಿಸಲು ಬಿಸಿಸಿಐ ಚಿಂತಿಸಿದೆ. ಅಂದರೆ ಕಳೆದ ಬಾರಿಗಿಂತ 20 ಕೋಟಿ ರೂ. ಹೆಚ್ಚಳವಾಗಲಿದೆ. ಇನ್ನು ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಕೆಲ ನಿಯಮಗಳಲ್ಲಿ ಬದಲಾವಣೆ ತರುವಂತೆ ಐಪಿಎಲ್ ಫ್ರಾಂಚೈಸಿಗಳು ಆಗ್ರಹಿಸಿದೆ. ಆ ನಿಯಮಗಳಾವುವು ಎಂದು ನೋಡುವುದಾದರೆ...

ಝಾಹಿರ್ ಯೂಸುಫ್
|

Updated on:Jul 25, 2024 | 11:16 AM

Share
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರ ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ಬೆನ್ನಲ್ಲೇ ಐಪಿಎಲ್ ಮೆಗಾ ಹರಾಜಿನ ನಿಯಮದಲ್ಲಿ ಕೆಲ ಬದಲಾವಣೆಗಳನ್ನು ಮಾಡುವಂತೆ ಫ್ರಾಂಚೈಸಿಗಳು ಮನವಿ ಮಾಡಿದ್ದಾರೆ. ಇಲ್ಲಿ ಬಹುತೇಕ ಫ್ರಾಂಚೈಸಿಗಳು ಮೂರು ಮಾರ್ಪಾಡುಗಳನ್ನು ಮಾಡುವಂತೆ ಆಗ್ರಹಿಸಿದ್ದಾರೆ. ಆ ನಿಯಮಗಳಾವುವು ಎಂದು ನೋಡುವುದಾದರೆ...

1 / 5
5 ವರ್ಷಕ್ಕೆ ಮೆಗಾ ಹರಾಜು: ಐಪಿಎಲ್ ಮೆಗಾ ಹರಾಜನ್ನು ಐದು ವರ್ಷಗಳಿಗೆ ಒಮ್ಮೆ ನಡೆಸುವಂತೆ ಬಹುತೇಕ ಫ್ರಾಂಚೈಸಿಗಳು ಮನವಿ ಮಾಡಿದ್ದಾರೆ. ಈ ಹಿಂದೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ಆಯೋಜಿಸಲಾಗುತ್ತಿತ್ತು. ಈ ನಿಯಮವನ್ನು ಬದಲಿಸಿ 5 ವರ್ಷಗಳಿಗೆ ಮೆಗಾ ಹರಾಜು ನಡೆಸಲು ಆಗ್ರಹಿಸಿದ್ದಾರೆ. ಅಂದರೆ ಈ ಬಾರಿ ಮೆಗಾ ಹರಾಜು ನಡೆದರೆ, ಮುಂದಿನ ಮೆಗಾ ಹರಾಜು 2029 ರಲ್ಲಿ ನಡೆಯಲಿದೆ. ಇದರ ನಡುವೆ ಮಿನಿ ಹರಾಜು ಮಾತ್ರ ನಡೆಯಲಿದೆ.

2 / 5
ರಿಟೈನ್ ಆಟಗಾರರ ಸಂಖ್ಯೆ: ಮೆಗಾ ಹರಾಜಿಗೂ ಮುನ್ನ 4 ರಿಂದ 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡುವಂತೆ ಕೆಲ ಫ್ರಾಂಚೈಸಿಗಳು ಮನವಿ ಮಾಡಿದೆ. ಈ ಹಿಂದಿನ ಮೆಗಾ ಹರಾಜಿಗೂ ಮುನ್ನ ಗರಿಷ್ಠ 4 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ ಈ ಬಾರಿ ಅದನ್ನು 4 ರಿಂದ 6 ಕ್ಕೆ ಏರಿಸಲು ಕೆಲ ಫ್ರಾಂಚೈಸಿಗಳು ವಿನಂತಿಸಿದೆ.

3 / 5
ಆರ್​ಟಿಎಂ ಆಯ್ಕೆ: ಮೆಗಾ ಹರಾಜಿಗೂ ಮುನ್ನ 8 ಆಟಗಾರರ ಮೇಲೆ ಆರ್​ಟಿಎಂ ಬಳಸಿಕೊಳ್ಳಲು ಅವಕಾಶ ನೀಡುವಂತೆ ಕೆಲ ಫ್ರಾಂಚೈಸಿಗಳು ಆಗ್ರಹಿಸಿದೆ. ಆರ್​ಟಿಎಂ ಎಂದರೆ ರೈಟ್​ ಟು ಮ್ಯಾಚ್ ಆಯ್ಕೆ. ಅಂದರೆ ತಮಗೆ ಬೇಕಾದ ಆಟಗಾರರನ್ನು ಆರ್​ಟಿಎಂ ಆಯ್ಕೆ ಬಳಸಿ ಹರಾಜಿಗೆ ಬಿಡುಗಡೆ ಮಾಡುವುದು. ಹೀಗೆ ಹರಾಜಿಗೆ ಬಿಡುಗಡೆ ಮಾಡಿದ ಆಟಗಾರರನ್ನು ಇತರೆ ತಂಡ ಖರೀದಿಸಿದರೂ, ಆ ಮೊತ್ತವನ್ನು ತಾವೇ ಪಾವತಿಸುತ್ತೇವೆ ಎಂದು ತಿಳಿಸಿ ಬಿಡುಗಡೆ ಮಾಡಿದ ತಂಡವೇ ಮತ್ತೆ ಖರೀದಿಸುವುದು. ಕೆಕೆಆರ್ ಸೇರಿದಂತೆ ಕೆಲ ಫ್ರಾಂಚೈಸಿ ರಿಟೈನ್ ಆಯ್ಕೆ ನೀಡುವುದರ ಬದಲು ಆರ್​ಟಿಎಂ ಆಯ್ಕೆ ನೀಡುವಂತೆ ಮನವಿ ಮಾಡಿದ್ದಾರೆ.

4 / 5
ಇದೀಗ ಐಪಿಎಲ್ ಫ್ರಾಂಚೈಸಿಗಳು ಈ ಮೂರು ಬೇಡಿಕೆಗಳನ್ನು ಬಿಸಿಸಿಐ ಮುಂದಿಟ್ಟಿದೆ. ಈ ಬಗ್ಗೆ ಚರ್ಚಿಸಲು ಈ ತಿಂಗಳಾಂತ್ಯದಲ್ಲಿ ಐಪಿಎಲ್ ಮಾಲೀಕರೊಂದಿಗೆ ಸಭೆ ಕರೆಯಲಾಗಿದ್ದು, ಈ ಸಭೆಯ ಬಳಿಕ ಮೆಗಾ ಹರಾಜಿನ ಅಂತಿಮ ರೂಪುರೇಷೆಗಳು ಹೊರಬೀಳಲಿದೆ.

5 / 5

Published On - 8:31 am, Thu, 25 July 24

Follow Us
ಆ ಶಾಸಕರಿಂದಲೇ ಅಡ್ಡಮತದಾನ? ಸಿಟಿ ರವಿ ಏನಂದ್ರು ನೋಡಿ

ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!

ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ

ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ

‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ

ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ

ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ

ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ