AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಎಲ್ ರಾಹುಲ್ ನಮ್ಮ ತಂಡದ ಅವಿಭಾಜ್ಯ ಅಂಗ, ಆದರೆ…?’: ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ

IPL 2025: ರಾಹುಲ್​ರನ್ನು ತಂಡದಲ್ಲಿ ಉಳಿಸಿಕೊಳ್ಳುವ ಬಗ್ಗೆ ಸ್ಪಷ್ಟ ಉತ್ತರ ನೀಡಿದ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ಅವರನ್ನು ನಾಯಕನನ್ನಾಗಿ ಉಳಿಸಿಕೊಳ್ಳುವ ಬಗ್ಗೆ ಯಾವುದೇ ಉತ್ತರ ನೀಡಲಿಲ್ಲ. ಇದರರ್ಥ ರಾಹುಲ್​ರನ್ನು ಸಾಮಾನ್ಯ ಆಟಗಾರನಾಗಿ ತಂಡದಲ್ಲಿ ಉಳಿಸಿಕೊಂಡು ನಾಯಕತ್ವವನ್ನು ಬೇರೆಯವರಿಗೆ ನೀಡುವ ಯೋಚನೆ ಮಾಲೀಕರಿಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.

ಪೃಥ್ವಿಶಂಕರ
|

Updated on: Aug 28, 2024 | 6:01 PM

Share
2025 ರ ಐಪಿಎಲ್​ಗೂ ಮುನ್ನ ತಂಡದ ಬಲ ತುಂಬುವ ಸಲುವಾಗಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ, ಟೀಂ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್ ಅವರನ್ನು ತಂಡದ ಮೆಂಟರ್ ಆಗಿ ನೇಮಿಸಿದೆ. ಈ ಹಿಂದೆ ಈ ಹುದ್ದೆಯನ್ನು ಗೌತಮ್ ಗಂಭೀರ್ ನಿಭಾಯಿಸುತ್ತಿದ್ದರು. ಆದರೆ ಗಂಭೀರ್ ಇತ್ತೀಚೆಗಷ್ಟೇ ಟೀಂ ಇಂಡಿಯಾದ ಮುಖ್ಯ  ಕೋಚ್ ಆಗಿ ಅಧಿಕಾರಾವಹಿಸಿಕೊಂಡಿದ್ದಾರೆ. ಹೀಗಾಗಿ ಗಂಭೀರ್ ಸ್ಥಾನಕ್ಕೆ ಇದೀಗ ಜಹೀರ್ ಖಾನ್ ಬಂದಿದ್ದಾರೆ.

1 / 6
ಈ ನಡುವೆ ಹಲವು ದಿನಗಳಿಂದ ಹರಿದಾಡುತ್ತಿರುವ ಕೆಎಲ್ ರಾಹುಲ್ ಅವರಿಗೆ ಸಂಬಂಧಿಸಿದ ವದಂತಿಗಳಿಗೆ ತೆರೆ ಎಳೆದಿರುವ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯ ಮಾಲೀಕ ಸಂಜೀವ್ ಗೋಯೆಂಕಾ, ‘ಕೆಎಲ್ ರಾಹುಲ್ ನಮ್ಮ ತಂಡದ ಅವಿಭಾಜ್ಯ ಅಂಗ ಎಂದು ಹೇಳಿದ್ದಾರೆ. ಈ ಮೂಲಕ ರಾಹುಲ್​ರನ್ನು ತಮ್ಮ ತಂಡದಲ್ಲೇ ಉಳಿಸಿಕೊಳ್ಳಲು ಸಂಜೀವ್ ಮುಂದಾಗಿರುವುದು ಇದರಿಂದ ಖಚಿತವಾಗಿದೆ.

2 / 6
ವಾಸ್ತವವಾಗಿ ಕಳೆದ ಐಪಿಎಲ್ ವೇಳೆ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ತಂಡದ ಕಳಪೆ ಪ್ರದರ್ಶನಕ್ಕೆ ಮಾಲೀಕ ಸಂಜೀವ್ ಗೋಯೆಂಕಾ, ತಂಡದ ನಾಯಕ ಕೆಎಲ್ ರಾಹುಲ್​ರನ್ನು ಬಹಿರಂಗವಾಗಿಯೇ ನಿಂಧಿಸಿದ್ದರು. ಆ ಬಳಿಕ ರಾಹುಲ್ ಮುಂದಿನ ಆವೃತ್ತಿಯಲ್ಲಿ ಈ ತಂಡದ ಪರ ಆಡುವುದು ಅನುಮಾನ ಎಂದು ಹೇಳಲಾಗುತ್ತಿತ್ತು.

3 / 6
ಈ ವದಂತಿಗೆ ವೇಗ ಸಿಕ್ಕಿದ ಕೂಡಲೇ ಸಂಜೀವ್ ಗೋಯೆಂಕಾ, ರಾಹುಲ್​ರನ್ನು ತಮ್ಮ ಕಛೇರಿಗೆ ಕರೆಸಿಕೊಂಡು ಮನಸ್ತಾಪ ಶಮನಗೊಳಿಸಲು ಪ್ರಯತ್ನಿಸಿದ್ದರು. ಇದೀಗ ಆ ಮೀಟಿಂಗ್ ಬಳಿಕ ರಾಹುಲ್ ತಂಡದಲ್ಲೇ ಉಳಿಯುತ್ತಾರಾ, ಉಳಿದರೂ ನಾಯಕನಾಗಿ ಮುಂದುವರೆಯುತ್ತಾರಾ ಎಂಬೆಲ್ಲ ಪ್ರಶ್ನೆಗಳಿಗೆ ಸಂಜೀವ್ ಉತ್ತರಿಸಿದ್ದಾರೆ.

4 / 6
ಈ ಬಗ್ಗೆ ಮಾತನಾಡಿರುವ ಸಂಜೀವ್, ‘ನಾನು ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಕೆಎಲ್ ರಾಹುಲ್ ನಮ್ಮ ಕುಟುಂಬದ ಸದಸ್ಯ ಎಂದು ಹೇಳಲ್ಲಷ್ಟೇ ಬಯಸುತ್ತೇನೆ. ಎಂದಿದ್ದಾರೆ. ಆದರೆ ರಾಹುಲ್ ನಾಯಕರಾಗಿಯೇ ಮುಂದುವರಿಯುತ್ತಾರಾ ಎಂದು ಕೇಳಿದ ಪ್ರಶ್ನೆಗೆ ಅಡ್ಡ ಗೋಡೆಯ ಮೇಲೆ ದೀಪವಿಟ್ಟ ಅವರು, ಐಪಿಎಲ್ 2025 ರಲ್ಲಿ ನಾಯಕತ್ವವನ್ನು ನಿರ್ಧರಿಸಲು ಇನ್ನೂ ಸಮಯವಿದೆ ಎಂದು ಹೇಳಿದರು. ಇದರರ್ಥ ರಾಹುಲ್ ನಾಯಕತ್ವ ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂಬುದು ಖಚಿತವಾಗಿದೆ.

5 / 6
ಏಕೆಂದರೆ ರಾಹುಲ್​ರನ್ನು ತಂಡದಲ್ಲಿ ಉಳಿಸಿಕೊಳ್ಳುವ ಬಗ್ಗೆ ಸ್ಪಷ್ಟ ಉತ್ತರ ನೀಡಿದ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ಅವರನ್ನು ನಾಯಕನನ್ನಾಗಿ ಉಳಿಸಿಕೊಳ್ಳುವ ಬಗ್ಗೆ ಯಾವುದೇ ಉತ್ತರ ನೀಡಲಿಲ್ಲ. ಇದರರ್ಥ ರಾಹುಲ್​ರನ್ನು ಸಾಮಾನ್ಯ ಆಟಗಾರನಾಗಿ ತಂಡದಲ್ಲಿ ಉಳಿಸಿಕೊಂಡು ನಾಯಕತ್ವವನ್ನು ಬೇರೆಯವರಿಗೆ ನೀಡುವ ಯೋಚನೆ ಮಾಲೀಕರಿಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.

6 / 6