AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಮೂವರು ಭಾರತೀಯರು: 10 ತಂಡಗಳ ಕೋಚ್ ಫೈನಲ್

IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಆವೃತ್ತಿಗಾಗಿ ಡಿಸೆಂಬರ್ 16 ರಂದು ಮಿನಿ ಹರಾಜು ನಡೆಯಲಿದೆ. ಅಬುಧಾಬಿಯಲ್ಲಿ ನಡೆಯಲಿರುವ ಈ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳು ತಮ್ಮ ತಂಡಗಳ ಮುಖ್ಯ ತರಬೇತುದಾರರನ್ನು ನೇಮಕ ಮಾಡಿಕೊಂಡಿದೆ. ಅದರಂತೆ ಮುಂಬರುವ ಐಪಿಎಲ್​ನಲ್ಲಿ ಕೋಚ್ ಹುದ್ದೆಯಲ್ಲಿ ಕಾಣಿಸಿಕೊಳ್ಳಲಿರುವ ಮಾಜಿ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

ಝಾಹಿರ್ ಯೂಸುಫ್
|

Updated on:Nov 18, 2025 | 12:54 PM

Share
ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಸೀಸನ್-19 ರ ಮಿನಿ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳು ತಮ್ಮ ತಂಡಗಳ ಕೋಚ್​ಗಳನ್ನು ಫೈನಲ್ ಮಾಡಿಕೊಂಡಿದೆ. ವಿಶೇಷ ಎಂದರೆ ಈ ಹತ್ತು ಕೋಚ್​ಗಳಲ್ಲಿ ಕೇವಲ ಮೂವರು ಭಾರತೀಯರು ಮಾತ್ರ ಪ್ರಧಾನ ಹುದ್ದೆ ಅಲಂಕರಿಸಿದ್ದಾರೆ. ಹಾಗಿದ್ರೆ ಈ ಬಾರಿಯ ಐಪಿಎಲ್​ನಲ್ಲಿ ಕೋಚ್​ಗಳಾಗಿ ಕಾಣಿಸಿಕೊಳ್ಳುವವರು ಯಾರು ಎಂಬುದನ್ನು ನೋಡೋಣ...

1 / 11
ಮುಂಬೈ ಇಂಡಿಯನ್ಸ್: ಶ್ರೀಲಂಕಾದ ಮಾಜಿ ಆಟಗಾರ ಮಹೇಂದ್ರ ಜಯವರ್ಧನೆ ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದರು. ಈ ಬಾರಿ ಕೂಡ ಅವರನ್ನೇ ಹೆಡ್ ಕೋಚ್ ಆಗಿ ಮುಂದುವರೆಸಲು ಮುಂಬೈ ಇಂಡಿಯನ್ಸ್ ನಿರ್ಧರಿಸಿದೆ.

2 / 11
ಚೆನ್ನೈ ಸೂಪರ್ ಕಿಂಗ್ಸ್​: ಸಿಎಸ್​ಕೆ ತಂಡದ ತರಬೇತಿಯ ಉಸ್ತುವಾರಿ ಈ ಬಾರಿ ಕೂಡ ನ್ಯೂಝಿಲೆಂಡ್ ತಂಡದ ಮಾಜಿ ಆಟಗಾರ ಸ್ಟೀಫನ್ ಫ್ಲೇಮಿಂಗ್ ಕೈಯಲ್ಲಿದೆ. ಕಳೆದ ಕೆಲ ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಯಶಸ್ವಿ ಪಥದತ್ತ ಮುನ್ನಡೆಸಿರುವ ಫ್ಲೆಮಿಂಗ್ ಸಿಎಸ್​ಕೆ ತಂಡದ ಬೆನ್ನೆಲುಬು ಎಂದರೆ ತಪ್ಪಾಗಲಾರದು.

3 / 11
ಸನ್​ರೈಸರ್ಸ್ ಹೈದರಾಬಾದ್: ಎಸ್​ಆರ್​ಹೆಚ್​ ತಂಡದ ಕೋಚ್ ಆಗಿ ನ್ಯೂಝಿಲೆಂಡ್ ತಂಡದ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದ ವೆಟ್ಟೋರಿ ಇದೀಗ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

4 / 11
ಗುಜರಾತ್ ಟೈಟಾನ್ಸ್: ಗುಜರಾತ್ ಟೈಟಾನ್ಸ್ ತಂಡ ತಮ್ಮ ಕೋಚ್ ಅನ್ನು ಬದಲಿಸಿಲ್ಲ. ಟೀಮ್ ಇಂಡಿಯಾದ ಮಾಜಿ ಆಟಗಾರ ಆಶಿಶ್ ನೆಹ್ರಾ ಮುಖ್ಯ ಕೋಚ್ ಆಗಿ ಈ ಬಾರಿ ಕೂಡ ಮುಂದುವರೆದಿದ್ದಾರೆ.

5 / 11
ಲಕ್ನೋ ಸೂಪರ್ ಜೈಂಟ್ಸ್​: ಲಕ್ನೋ ತಂಡದ ಹೊಸ ಕೋಚ್ ಆಗಿ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಜಸ್ಟಿನ್ ಲ್ಯಾಂಗರ್ ಆಯ್ಕೆಯಾಗಿದ್ದಾರೆ. ಅದರಂತೆ ಲ್ಯಾಂಗರ್- ರಿಷಭ್ ಪಂತ್ ಜೋಡಿಯು ಎಲ್​​ಎಸ್​ಜಿ ತಂಡದ ಪ್ಲ್ಯಾನ್​ಗಳನ್ನು ರೂಪಿಸಲಿದ್ದಾರೆ.

6 / 11
ರಾಜಸ್ಥಾನ್ ರಾಯಲ್ಸ್: ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ್ ಸಂಗಾಕ್ಕರ ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಬಾರಿ ರಾಹುಲ್ ದ್ರಾವಿಡ್ ಆರ್​​ಆರ್​ ತಂಡ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.

7 / 11
ಕೊಲ್ಕತ್ತಾ ನೈಟ್​ ರೈಡರ್ಸ್: ಕೆಕೆಆರ್ ತಂಡದ ಕೋಚ್ ಸ್ಥಾನದಿಂದ ಚಂದ್ರಕಾಂತ್ ಪಂಡಿತ್ ನಿರ್ಗಮಿಸಿದ್ದು, ಅವರ ಸ್ಥಾನಕ್ಕೆ ಅಭಿಷೇಕ್ ನಾಯರ್ ನೇಮಕವಾಗಿದ್ದಾರೆ. ಅದರಂತೆ ಈ ಬಾರಿ ಅಭಿಷೇಕ್ ನಾಯರ್ ಪ್ಲ್ಯಾನಿಂಗ್​ನೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ಕಣಕ್ಕಿಳಿಯಲಿದೆ.

8 / 11
ಡೆಲ್ಲಿ ಕ್ಯಾಪಿಟಲ್ಸ್: ಟೀಮ್ ಇಂಡಿಯಾದ ಮಾಜಿ ಆಟಗಾರ ಹೆಮಾಂಗ್ ಬದಾನಿ ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮುಖ್ಯ ಕೋಚ್ ನೇಮಕವಾಗಿದ್ದರು. ಈ ಬಾರಿ ಕೂಡ ಬದಾನಿ ಅವರನ್ನೇ ಹೆಡ್ ಕೋಚ್ ಹುದ್ದೆಯಲ್ಲಿ ಮುಂದುವರೆಸಲು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನಿರ್ಧರಿಸಿದೆ.

9 / 11
ಪಂಜಾಬ್ ಕಿಂಗ್ಸ್: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಈ ಬಾರಿ ಕೂಡ ಅವರನ್ನೇ ಮುಂದುವರೆಸಲು ಪಂಜಾಬ್ ಕಿಂಗ್ಸ್​ ನಿರ್ಧರಿಸಿದೆ.

10 / 11
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಹಾಲಿ ಚಾಂಪಿಯನ್ ಆರ್​ಸಿಬಿ ತಂಡದ ಮುಖ್ಯ ಕೋಚ್ ಆಗಿ ಝಿಂಬಾಬ್ವೆ ತಂಡದ ಮಾಜಿ ಆಟಗಾರ ಆ್ಯಂಡಿ ಫ್ಲವರ್ ಮುಂದುವರೆಯಲಿದ್ದಾರೆ. ಕಳೆದ ಸೀಸನ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಕಾರಣ ಆರ್​ಸಿಬಿ ತನ್ನ ಸಿಬ್ಬಂದಿ ವರ್ಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

11 / 11

Published On - 12:53 pm, Tue, 18 November 25

Follow Us
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ

ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ

‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ

ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?

ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ

ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ

ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ

ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ

ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ