AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಮೊದಲು ಹರಾಜಾಗಲಿರುವ 6 ಆಟಗಾರರು ಇವರೇ..!

IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (ಐಪಿಎಲ್ 2026) ಮಿನಿ ಹರಾಜು ಡಿಸೆಂಬರ್ 16 ರಂದು ನಡೆಯಲಿದೆ. ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ಜರುಗಲಿರುವ ಈ ಹರಾಜಿನಲ್ಲಿ 359 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಇವರಲ್ಲಿ ಗರಿಷ್ಠ 77 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ. ಏಕೆಂದರೆ 10 ಫ್ರಾಂಚೈಸಿಗಳಲ್ಲಿ ಒಟ್ಟು 77 ಸ್ಥಾನಗಳು ಮಾತ್ರ ಖಾಲಿಯಿದ್ದು, ಈ ಸ್ಥಾನಗಳಿಗಾಗಿ ಬಿಡ್ಡಿಂಗ್ ನಡೆಯಲಿದೆ.

ಝಾಹಿರ್ ಯೂಸುಫ್
|

Updated on: Dec 15, 2025 | 11:03 AM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಹರಾಜಿಗಾಗಿ ಕೌಂಟ್ ಡೌನ್ ಶುರುವಾಗಿದೆ. ಮಂಗಳವಾರ (ಡಿ.16) ನಡೆಯಲಿರುವ ಹರಾಜಿನಲ್ಲಿ 359 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಈ 359 ಆಟಗಾರರಲ್ಲಿ 6 ಮಂದಿಗಾಗಿ ಮೊದಲ ಸುತ್ತಿನಲ್ಲಿ ಬಿಡ್ಡಿಂಗ್ ನಡೆಯಲಿದೆ. ಅದರಂತೆ ಮೊದಲ ಸೆಟ್​ನಲ್ಲಿ ಕಾಣಿಸಿಕೊಳ್ಳಲಿರುವ 6 ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

1 / 7
ಡೆವೊನ್ ಕಾನ್ವೆ: ನ್ಯೂಝಿಲೆಂಡ್ ತಂಡದ ಎಡಗೈ ದಾಂಡಿಗ ಡೆವೊನ್ ಕಾನ್ವೆ ಕಳೆದ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು. ಇದಾಗ್ಯೂ ಅವರನ್ನು ಈ ಬಾರಿ ಸಿಎಸ್​ಕೆ ರಿಟೈನ್ ಮಾಡಿಕೊಂಡಿಲ್ಲ. ಅದರಂತೆ ಇದೀಗ 2 ಕೋಟಿ ರೂ. ಮೂಲ ಬೆಲೆ ಘೋಷಿರುವ ಕಾನ್ವೆ ಮೊದಲ ಸುತ್ತಿನಲ್ಲೇ ಹರಾಜಾಗಲಿದ್ದಾರೆ.

2 / 7
ಜೇಕ್​ ಫ್ರೇಸರ್ ಮೆಕ್​ಗುರ್ಕ್​: ಆಸ್ಟ್ರೇಲಿಯಾದ ಯುವ ಸ್ಫೋಟಕ ದಾಂಡಿಗ ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದರು. ಈ ಬಾರಿ ಡಿಸಿ ಬಳಗದಿಂದ ರಿಲೀಸ್ ಆಗಿರುವ ಜೇಕ್ ಫ್ರೇಸರ್ ಮೆಕ್​ಗುರ್ಕ್ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿದ್ದು, ಮೊದಲ ಸೆಟ್​ನಲ್ಲೇ ಯುವ ದಾಂಡಿಗನಿಗಾಗಿ ಬಿಡ್ಡಿಂಗ್ ನಡೆಯಲಿದೆ.

3 / 7
ಕ್ಯಾಮರೋನ್ ಗ್ರೀನ್: ಆಸ್ಟ್ರೇಲಿಯಾ ತಂಡದ ಆಲ್​ರೌಂಡರ್ ಕ್ಯಾಮರೋನ್ ಗ್ರೀನ್ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಫಿಟ್​ನೆಸ್ ಸಮಸ್ಯೆಯ ಕಾರಣ ಕಳೆದ ಸೀಸನ್​ನಿಂದ ಹೊರಗುಳಿದಿದ್ದ ಗ್ರೀನ್ ಅವರ ಖರೀದಿಗೆ ಮೊದಲ ಸುತ್ತಿನಲ್ಲೇ ಭರ್ಜರಿ ಪೈಪೋಟಿ ಕಂಡು ಬರಲಿದೆ.

4 / 7
ಸರ್ಫರಾಝ್ ಖಾನ್: ಭಾರತದ ಬಲಗೈ ದಾಂಡಿಗ ಸರ್ಫರಾಝ್ ಖಾನ್ ಕಳೆದ ಸೀಸನ್​ನಲ್ಲಿ ಅನ್​ಸೋಲ್ಡ್ ಆಗಿದ್ದರು. ಆದರೆ ಈ ಬಾರಿ ಮೊದಲ ಸುತ್ತಿನಲ್ಲೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ 75 ಲಕ್ಷ ರೂ. ಮೂಲ ಬೆಲೆ ಘೋಷಿಸಿರುವ ಸರ್ಫರಾಝ್​ಗಾಗಿ ಮೊದಲ ಸುತ್ತಿನಲ್ಲೇ ಬಿಡ್ಡಿಂಗ್ ನಡೆಯಲಿದೆ.

5 / 7
ಡೇವಿಡ್ ಮಿಲ್ಲರ್: ಸೌತ್ ಆಫ್ರಿಕಾ ತಂಡದ ಸ್ಫೋಟಕ ದಾಂಡಿಗ ಡೇವಿಡ್ ಮಿಲ್ಲರ್ ಐಪಿಎಲ್ 2025 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಎಲ್​ಎಸ್​ಜಿ ಅವರನ್ನು ರಿಟೈನ್ ಮಾಡಿಕೊಂಡಿಲ್ಲ. ಹೀಗಾಗಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಮಿಲ್ಲರ್ ಸಹ ಮೊದಲ ಸುತ್ತಿನ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

6 / 7
ಪೃಥ್ವಿ ಶಾ: ಟೀಮ್ ಇಂಡಿಯಾ ದಾಂಡಿಗ ಪೃಥ್ವಿ ಶಾ ಕಳೆದ ಸೀಸನ್​ನಲ್ಲಿ ಬಿಕರಿಯಾಗದೇ ಉಳಿದಿದ್ದರು. ಈ ಬಾರಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ಪೃಥ್ವಿ ಶಾ ಕೂಡ ಮೊದಲ ಸುತ್ತಿನ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

7 / 7
Follow Us
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!

ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು

ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ

ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ

ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ

ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​

ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!

ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!

‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು

ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?