AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್ ತಂಡದ ಸ್ಟಾರ್ ಆಲ್‌ರೌಂಡರ್​ಗೆ ಗಾಳ ಹಾಕಿದ ಸಿಎಸ್​ಕೆ; ಒಪ್ಪಂದಕ್ಕೆ ಒಲ್ಲೆ ಎಂದ ಟೈಟಾನ್ಸ್

IPL 2026: 2025ರ ಐಪಿಎಲ್ ವೈಫಲ್ಯದ ನಂತರ, 2026ರ ಮೆಗಾ ಹರಾಜಿಗೂ ಮುನ್ನ ಸಿಎಸ್‌ಕೆ ಬಲಿಷ್ಠ ತಂಡ ಕಟ್ಟಲು ಪ್ರಯತ್ನಿಸುತ್ತಿದೆ. ರಾಜಸ್ಥಾನ್‌ನ ಸಂಜು ಸ್ಯಾಮ್ಸನ್ ಮತ್ತು ಗುಜರಾತ್ ಟೈಟಾನ್ಸ್‌ನ ವಾಷಿಂಗ್ಟನ್ ಸುಂದರ್ ಅವರನ್ನು ಟ್ರೇಡ್ ಮಾಡಿಕೊಳ್ಳಲು ಸಿಎಸ್‌ಕೆ ಆಸಕ್ತಿ ವಹಿಸಿದೆ. ಸ್ಯಾಮ್ಸನ್‌ಗಾಗಿ ಜಡೇಜಾ, ಸ್ಯಾಮ್ ಕರನ್ ಬಿಟ್ಟುಕೊಡಲು ಸಿದ್ಧವಿದ್ದರೂ, ಸುಂದರ್ ಟ್ರೇಡ್ ಪ್ರಸ್ತಾಪವನ್ನು ಗುಜರಾತ್ ತಿರಸ್ಕರಿಸಿದೆ. ಧೋನಿ ನಿವೃತ್ತಿಗೂ ಮುನ್ನ ತಂಡವನ್ನು ಬಲಪಡಿಸುವುದು ಸಿಎಸ್‌ಕೆ ಗುರಿ.

ಪೃಥ್ವಿಶಂಕರ
|

Updated on: Nov 10, 2025 | 6:03 PM

Share
 2025 ರ ಐಪಿಎಲ್​ಗೂ ಮುನ್ನ ನಡೆದಿದ್ದ ಮೆಗಾ ಹರಾಜಿನಲ್ಲಿ ಒಂದೊಳ್ಳೆ ತಂಡ ಕಟ್ಟದೆ ಇಡೀ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್​ಕಿಂಗ್ಸ್ ತಂಡ ಲೀಗ್ ಹಂತದಲ್ಲೇ ಹೊರಬಿದಿತ್ತು. ಹೀಗಾಗಿ ಈ ಬಾರಿಯಾದರೂ ಉತ್ತಮ ತಂಡವನ್ನು ಕಟ್ಟುವ ಇರಾದೆಯಲ್ಲಿರುವ ಸಿಎಸ್​ಕೆ ಫ್ರಾಂಚೈಸಿ, 2026 ಮಿನಿ ಹರಾಜಿಗೂ ಮುನ್ನ ಕೆಲವು ಆಟಗಾರರನ್ನು ಬೇರೆ ತಂಡದಿಂದ ಟ್ರೇಡ್ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.

1 / 6
ಅದರಂತೆ ವರದಿಗಳ ಪ್ರಕಾರ ಸಿಎಸ್​ಕೆ, ರಾಜಸ್ಥಾನ್ ರಾಯಲ್ಸ್‌ನ ಸಂಜು ಸ್ಯಾಮ್ಸನ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡುತ್ತಿದೆ. ಸಂಜುಗಾಗಿ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರನ್ನು ಬಿಟ್ಟುಕೊಡಲು ಸಿಎಸ್​ಕೆ ಮುಂದಾಗಿದೆ. ಆದಾಗ್ಯೂ, ಚೆನ್ನೈ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್ ಮಾತ್ರವಲ್ಲದೆ ಗುಜರಾತ್ ಟೈಟಾನ್ಸ್‌ನ ಆಟಗಾರನ ಮೇಲೂ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ.

2 / 6
ಚೆನ್ನೈ ಸೂಪರ್ ಕಿಂಗ್ಸ್ ಈಗ ಭವಿಷ್ಯದ ಮೇಲೆ ಕಣ್ಣಿಟ್ಟು ತಂಡವನ್ನು ನಿರ್ಮಿಸುವ ಕೆಲಸ ಮಾಡುತ್ತಿದೆ. ಎಂಎಸ್ ಧೋನಿ ನಿವೃತ್ತಿಯಾಗುವ ಮೊದಲು ಬಲಿಷ್ಠ ತಂಡವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಸಿಎಸ್​ಕೆ ಫ್ರಾಂಚೈಸಿ, ಗುಜರಾತ್ ಟೈಟಾನ್ಸ್​ನ ಸ್ಟಾರ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಟ್ರೇಡಿಂಗ್ ಮೂಲಕ ತಂಡಕ್ಕೆ ಸೇರಿಸಿಕೊಳ್ಳಲು ನೋಡುತ್ತಿದೆ. ಆದಾಗ್ಯೂ, ಗುಜರಾತ್ ಟೈಟಾನ್ಸ್ ಸಿಎಸ್‌ಕೆಯ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂದು ವರದಿಯಾಗಿದೆ.

3 / 6
ವಾಷಿಂಗ್ಟನ್ ಸುಂದರ್ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಮೂರು ಸ್ವರೂಪಗಳಲ್ಲಿ ಭಾರತೀಯ ತಂಡಕ್ಕಾಗಿ ಆಡುತ್ತಾರೆ. ಇದರ ಜೊತೆಗೆ ಐಪಿಎಲ್‌ನಲ್ಲಿಯೂ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್‌ನಿಂದ ಬಿಡುಗಡೆಯಾದ ನಂತರ, ಅವರನ್ನು ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಟೈಟಾನ್ಸ್ 3.2 ಕೋಟಿ ರೂ. ನೀಡಿ ಖರೀದಿಸಿತ್ತು. ಅಲ್ಲದೆ ಉತ್ತಮ ಫಾರ್ಮ್​ನಲ್ಲಿರುವ ಅವರನ್ನು ಬಿಟ್ಟುಕೊಡುವ ಮನಸ್ಥಿತಿಯಲ್ಲಿ ಟೈಟಾನ್ ಇಲ್ಲ.

4 / 6
2017 ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್‌ ತಂಡದೊಂದಿಗೆ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ ವಾಷಿಂಗ್ಟನ್ ಸುಂದರ್, ನಂತರ ಮುಂದಿನ ನಾಲ್ಕು ವರ್ಷಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಳೆದರು. ನಂತರ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿತ್ತು.

5 / 6
ವಾಷಿಂಗ್ಟನ್ ಸುಂದರ್ ಇದುವರೆಗೆ ಐಪಿಎಲ್‌ನಲ್ಲಿ 66 ಪಂದ್ಯಗಳನ್ನು ಆಡಿದ್ದು, 7.69 ರ ಎಕಾನಮಿ ದರದಲ್ಲಿ 39 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಪವರ್‌ಪ್ಲೇನಲ್ಲಿಯೂ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಬ್ಯಾಟಿಂಗ್‌ನಲ್ಲಿ ಇಲ್ಲಿಯವರೆಗೆ 511 ರನ್‌ ಬಾರಿಸಿದ್ದಾರೆ. ಕಳೆದ ಸೀಸನ್​ನಲ್ಲಿ ಉತ್ತಮವಾಗಿ ಆಡಿದ್ದ ಸುಂದರ್ ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ 166.25 ರ ಸ್ಟ್ರೈಕ್ ರೇಟ್‌ನಲ್ಲಿ 133 ರನ್‌ ಬಾರಿಸಿದ್ದರು.

6 / 6