AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಆರ್​ಸಿಬಿಗೆ ಬಂತು ಆನೆ ಬಲ; ಬೆಂಗಳೂರಿಗೆ ಬಂದ ಜೋಶ್ ಹೇಜಲ್​ವುಡ್

Josh Hazlewood Joins RCB Squad: 2026ರ ಐಪಿಎಲ್ ವೇಳಾಪಟ್ಟಿ ಪ್ರಕಟಗೊಂಡಿದ್ದು, ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಬೆಂಗಳೂರಿನಲ್ಲಿ ನಡೆಯಲಿದೆ. ಗಾಯದಿಂದ ಚೇತರಿಸಿಕೊಂಡು ಆರ್​ಸಿಬಿ ಸೇರಿರುವ ಜೋಶ್ ಹೇಜಲ್​ವುಡ್ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದು ಆರ್​ಸಿಬಿ ಬೌಲಿಂಗ್ ವಿಭಾಗಕ್ಕೆ ಸವಾಲಾಗಿ ಪರಿಣಮಿಸಿದ್ದು, ಹೇಜಲ್​ವುಡ್ ಸ್ಥಾನದಲ್ಲಿ ನ್ಯೂಜಿಲೆಂಡ್ ವೇಗಿ ಜಾಕೋಬ್ ಡಫಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಪೃಥ್ವಿಶಂಕರ
|

Updated on: Mar 26, 2026 | 10:05 PM

Share
2026 ರ ಐಪಿಎಲ್​ನ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಪ್ರಕಟಿಸಿದೆ. ಅದರಂತೆ ಲೀಗ್​ನ ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ನಡುವೆ ನಡೆಯಲಿದೆ. ಈ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಮಾರ್ಚ್​ 28 ರಂದು ನಡೆಯುವ ಈ ಪಂದ್ಯಕ್ಕೆ ಉಭಯ ತಂಡಗಳು ಸಿದ್ಧವಾಗಿದ್ದು, ಇದರ ನಡುವೆ ಆರ್​ಸಿಬಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.

1 / 6
ಎಲ್ಲರಿಗೂ ತಿಳಿದಿರುವಂತೆ 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಬಾರಿಗೆ ಟ್ರೋಫಿ ಎತ್ತಿಹಿಡಿಯಲು ಪ್ರಮುಖ ಕಾರಣ, ತಂಡದ ಬಲಿಷ್ಠ ಬೌಲಿಂಗ್. ಅನುಭವಿಗಳಿಂದ ಕೂಡಿದ್ದ ಈ ವಿಭಾಗ ಆರ್​ಸಿಬಿ ಗೆಲುವಿನ ಪ್ರಮುಖ ಪಾತ್ರವಹಿಸಿತ್ತು. ಆದಾಗ್ಯೂ 2026 ರ ಸೀಸನ್ ಆರಂಭಕ್ಕೂ ಮುನ್ನ ಪ್ರಮುಖ ವೇಗಿಯ ಅಲಭ್ಯತೆ ತಂಡದ ತಲೆನೋವು ಹೆಚ್ಚಿಸಿತ್ತು.

2 / 6
ವಾಸ್ತವವಾಗಿ ಆಸ್ಟ್ರೇಲಿಯಾದ ಅನುಭವಿ ವೇಗದ ಬೌಲರ್ ಜೋಶ್ ಹೇಜಲ್​ವುಡ್, ಇಂಜುರಿಯಿಂದ ಚೇತರಿಸಿಕೊಳ್ಳದ ಕಾರಣ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೂಡಿಕೊಂಡಿರಲಿಲ್ಲ. ಈ ಮೊದಲು ವರದಿಯಾದಂತೆ ಹೇಜಲ್​ವುಡ್, ಐಪಿಎಲ್​ನ ಆರಂಭಿಕ ಪಂದ್ಯಗಳನ್ನು ಆಡುವುದು ಅನುಮಾನ ಎನ್ನಲಾಗಿತ್ತು. ಆದರೀಗ ಮೊದಲ ಪಂದ್ಯಕ್ಕೂ ಮುನ್ನ ಹೇಜಲ್​ವುಡ್ ತಂಡವನ್ನು ಸೇರಿಕೊಂಡಿದ್ದಾರೆ.

3 / 6
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ಹೇಜಲ್​ವುಡ್ ಆಗಮನವನ್ನು ಖಚಿತಪಡಿಸಿದೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೇಜಲ್​ವುಡ್ ತಂಡ ಕೂಡಿಕೊಂಡಿರುವ ಬಗ್ಗೆ ಫ್ರಾಂಚೈಸಿ ಸುಳಿವು ನೀಡಿದೆ. ಆದಾಗ್ಯೂ ಇದೀಗ ತಂಡವನ್ನು ಕೂಡಿಕೊಂಡಿರುವ ಹೇಜಲ್​ವುಡ್ ಮೊದಲ ಎರಡು ಪಂದ್ಯಗಳಲ್ಲಿ ಆಡುವುದು ಕಷ್ಟಕರವಾಗಿದೆ.

4 / 6
ಗಾಯದಿಂದಾಗಿ ಬಹಳ ದಿನಗಳಿಂದ ಕ್ರಿಕೆಟ್​ನಿಂದ ದೂರ ಉಳಿದಿರುವ ಹೇಜಲ್​ವುಡ್, ಆಶಸ್ ಟೆಸ್ಟ್ ಸರಣಿ ಮತ್ತು ಟಿ20 ವಿಶ್ವಕಪ್​ನಿಂದಲೂ ಹೊರಗುಳಿದಿದ್ದರು. ಆದರೀಗ ಚೇತರಿಸಿಕೊಂಡಿರುವ ಹೇಜಲ್​ವುಡ್ ಐಪಿಎಲ್​ನ ಮುಂದಿನ ಪಂದ್ಯಗಳಲ್ಲಿ ಆಡುವುದು ಖಚಿತ. ಆದರೆ ಮೊದಲೆರಡು ಪಂದ್ಯಗಳಲ್ಲಿ ಹೇಜಲ್​ವುಡ್ ಸ್ಥಾನವನ್ನು ತುಂಬುವವರು ಯಾರು ಎಂಬ ಪ್ರಶ್ನೆ ಮೂಡಿದೆ.

5 / 6
ಪ್ರಸ್ತುತ ತಂಡದಲ್ಲಿ ಹೇಜಲ್​ವುಡ್ ಬದಲಿಗೆ ನ್ಯೂಜಿಲೆಂಡ್ ವೇಗಿ ಜಾಕೋಬ್ ಡಫಿ ಇದ್ದಾರೆ. ಹೀಗಾಗಿ ಹೇಜಲ್​ವುಡ್ ಪ್ಲೇಯಿಂಗ್​ 11ನಲ್ಲಿ ಸ್ಥಾನ ಪಡೆಯುವವರೆಗೆ ಡಫಿ ತಂಡದಲ್ಲಿ ಆಡುವ ಸಾಧ್ಯತೆಗಳಿವೆ. ಆದಾಗ್ಯೂ ಹೇಜಲ್​ವುಡ್ ಜೊತೆಗೆ ಯಶ್ ದಯಾಳ್ ಕೂಡ ತಂಡದಲ್ಲಿ ಇಲ್ಲದಿರುವುದು ಆರ್​ಸಿಬಿಯ ಬೌಲಿಂಗ್ ವಿಭಾಗದ ಶಕ್ತಿಯನ್ನು ಕೊಂಚ ತಗ್ಗಿಸಿದೆ ಎನ್ನಬಹುದು. ಹೀಗಿರುವಾಗ ಮೊದಲ ಪಂದ್ಯದಲ್ಲಿ ತಂಡ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

6 / 6
Follow Us
1ನೇ ತರಗತಿ ಪ್ರವೇಶ: ವಯಸ್ಸಿನ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರ್ಕಾರ

ಸುಬ್ಬ, ಸುಬ್ಬಿ ಕಥೆ ಅಂತ ಹೇಳಿದ್ದು ಯಾಕೆ? ಅನುಮಾನ ಪರಿಹರಿಸಿದ ಪ್ರಥಮ್

1000 ಲೀಟರ್ ಟ್ಯಾಂಕ್ ಹಿಡಿದು ಪೆಟ್ರೋಲ್​ ಬಂಕ್​ಗೆ ಬಂದ ‘ಬಾಹುಬಲಿ’

ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನನ್ನ ಕೊಂದ ಬಾಲಕ!

ಬಾಗಲಕೋಟೆ ಬೈ ಎಲೆಕ್ಷನ್: ಒಗ್ಗಟ್ಟು ಪ್ರದರ್ಶಿಸಿದ ಮುಸ್ಲಿಮರ ನಡೆ ಏನು?

ಮೀಸಲು ವ್ಯವಸ್ಥೆ ಇಲ್ಲದ ಆಸ್ಪತ್ರೆಯಲ್ಲೇಕೆ ನಿಮ್ಮ ತಾಯಿಗೆ ಚಿಕಿತ್ಸೆ?

ಗುಡ್​ ನ್ಯೂಸ್: ಎಲ್‌ಪಿಜಿ ಹೊತ್ತು ಕತಾರ್​​ನಿಂದ ಮಂಗಳೂರಿಗೆ ಬಂದ ಹಡಗು

ಬಸ್ ಮೇಲೆ ಅಂಡರ್ ವಲ್ಡ್ ದಾವೂದ್ ದಿ ರಿಯಲ್ ಡಾನ್ ಎಂದು ಬರಹ

ನಿಮ್ಮ ಹಲ್ಲುಗಳ ವಯಸ್ಸು ನಿಮ್ಮ ವಯಸ್ಸಿಗಿಂತ ಹೆಚ್ಚಾಗಿದೆಯೇ?

Video: ಬಾಲಕಿಯ ಮೇಲೆ ಬೀದಿ ನಾಯಿಯಿಂದ ಮಾರಣಾಂತಿಕ ದಾಳಿ