AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: 1 ರನ್​​ ಬಾರಿಸಲು ರಿಷಭ್ ಪಂತ್ ಪಡೆದ ಸಂಬಳ ಬರೋಬ್ಬರಿ 9 ಲಕ್ಷ ರೂ..!

Rishabh Pant salary: ಸತತ ಮೂರನೇ ಬಾರಿಗೆ ಪ್ಲೇಆಫ್‌ ತಲುಪುವಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿಫಲವಾಗಿದೆ. ನಾಯಕ ರಿಷಭ್ ಪಂತ್ ಅವರ ಬ್ಯಾಟಿಂಗ್ ವೈಫಲ್ಯ ತಂಡಕ್ಕೆ ದೊಡ್ಡ ಹೊಡೆತ ನೀಡಿತು. 28.05 ಕೋಟಿ ರೂ. ವೇತನ ಪಡೆದ ಪಂತ್ ಕೇವಲ 312 ರನ್ ಗಳಿಸಿ, ಪ್ರತಿ ರನ್‌ಗೆ ₹9 ಲಕ್ಷ ವೆಚ್ಚ ಮಾಡಿಸಿದ್ದಾರೆ. ಅವರ ಕಳಪೆ ಪ್ರದರ್ಶನ ಮತ್ತು ನಾಯಕತ್ವದಿಂದ ತಂಡ ಪುನರ್ರಚನೆಯ ನಿರೀಕ್ಷೆಗಳಿವೆ.

ಪೃಥ್ವಿಶಂಕರ
|

Updated on:May 28, 2026 | 8:45 PM

Share
ಸತತ ಮೂರನೇ ಐಪಿಎಲ್ ಸೀಸನ್‌ನಲ್ಲಿಯೂ ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಈ ಆವೃತ್ತಿಯಲ್ಲಿಯೂ ಲಕ್ನೋ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ 10 ನೇ ಸ್ಥಾನ ಪಡೆದುಕೊಂಡಿತು. ತಂಡದ ಈ ಕಳಪೆ ಸಾಧನೆಗೆ ಸ್ಟಾರ್ ಆಟಗಾರರ ವೈಫಲ್ಯವೇ ಪ್ರಮುಖ ಕಾರಣವಾಗಿತ್ತು. ಅದರಲ್ಲೂ ತಂಡದ ನಾಯಕ ರಿಷಭ್ ಪಂತ್ ಅವರ ಬ್ಯಾಟಿಂಗ್‌ ವೈಫಲ್ಯ ತಂಡಕ್ಕೆ ದೊಡ್ಡ ಹೊಡೆತ ನೀಡಿತು (PC- PTI).

1 / 6
ವಾಸ್ತವವಾಗಿ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಅವರನ್ನು 27 ಕೋಟಿ ರೂ.ಗಳ ದಾಖಲೆಯ ಬೆಲೆಗೆ ಲಕ್ನೋ ಖರೀದಿಸಿತು. ಇದರ ಜೊತೆಗೆ ಪಂತ್ ಆಡಿದ 14 ಪಂದ್ಯಗಳಿಗೆ ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ.ಗಳ ಹೆಚ್ಚುವರಿ ಪಂದ್ಯ ಶುಲ್ಕವನ್ನು ಸಹ ಪಡೆದರು. ಇದರರ್ಥ ರಿಷಭ್ ಪಂತ್ ಈ ಬಾರಿಯ ಐಪಿಎಲ್​ನಿಂದ ತೆರಿಗೆ ಮತ್ತು ದಂಡವನ್ನು ಹೊರತುಪಡಿಸಿ ಒಟ್ಟು 28.05 ಕೋಟಿ ರೂ. ವೇತನ ಪಡೆದಿದ್ದಾರೆ(PC- PTI).

2 / 6
ಆದರೆ ಪಡೆದಕೊಂಡ ವೇತನಕ್ಕೆ ನ್ಯಾಯ ಒದಗಿಸಿವಂತಹ ಪ್ರದರ್ಶನ ಪಂತ್ ಕಡೆಯಿಂದ ಮೂಡಿಬರಲಿಲ್ಲ. ಕೇವಲ 138.05 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಪಂತ್ ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಟೂರ್ನಮೆಂಟ್‌ನ ಆರಂಭದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 50 ಎಸೆತಗಳಲ್ಲಿ 68 ರನ್​ಗಳ ಇನ್ನಿಂಗ್ಸ್ ಆಡಿದನ್ನು ಹೊರತುಪಡಿಸಿ, ಪಂತ್ ಬೇರೆ ಯಾವುದೇ ಪಂದ್ಯದಲ್ಲಿ 50 ರನ್‌ಗಳ ಗಡಿ ದಾಟಲು ಸಾಧ್ಯವಾಗಿಲ್ಲ (PC- PTI).

3 / 6
ಒಟ್ಟು 14 ಪಂದ್ಯಗಳಲ್ಲಿ 13 ಇನ್ನಿಂಗ್ಸ್‌ಗಳನ್ನು ಆಡಿದ ಪಂತ್, 28.36 ರ ಸರಾಸರಿಯಲ್ಲಿ ಕೇವಲ 312 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ನಾಯಕನಾಗಿ, ಅವರು 3 ನೇ ಕ್ರಮಾಂಕ, 4 ನೇ ಕ್ರಮಾಂಕ ಮತ್ತು ಆರಂಭಿಕ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಮಾಡಿದರಾದರೂ ಯಶಸ್ಸು ಪಡೆಯಲಿಲ್ಲ. ವಿಕೆಟ್ ಕೀಪರ್ ಆಗಿ, ಅವರು ಈ ಆವೃತ್ತಿಯಲ್ಲಿ ಹಿಡಿದಿದ್ದು 10 ಕ್ಯಾಚ್‌ಗಳನ್ನು ಮಾತ್ರ (PC- PTI).

4 / 6
ಹೀಗಾಗಿ ಈ ಆವೃತ್ತಿಯಲ್ಲಿ ರಿಷಭ್ ಪಂತ್ ಪಡೆದ ಒಟ್ಟು ಸಂಭಾವನೆಯನ್ನು ಅವರು ಬಾರಿಸಿದ ಒಟ್ಟು ರನ್‌ಗಳಿಂದ (312 ರನ್‌ಗಳು) ಭಾಗಿಸಿದರೆ, ಫಲಿತಾಂಶವು ಲಕ್ನೋ ನಿರ್ವಹಣೆಗೆ ದಿಗ್ಭ್ರಮೆಗೊಳಿಸುವ ಅಂಕಿ ಅಂಶವಾಗಿದೆ. ಈ ಆವೃತ್ತಿಯಲ್ಲಿ ರಿಷಭ್ ಪಂತ್ ಗಳಿಸಿದ ಪ್ರತಿಯೊಂದು ರನ್‌ಗೆ ಲಕ್ನೋ ಸೂಪರ್ ಜಾಯಿಂಟ್ಸ್ 8,99,038 ರೂ. (ಸುಮಾರು ರೂ. 9 ಲಕ್ಷ) ವೇತನ ನೀಡಿದೆ (PC- PTI).

5 / 6
ಪಂತ್ ಅವರ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಸಂಜೀವ್ ಗೋಯೆಂಕಾ ಅವರಿಗೆ ವಿಶ್ವಾಸವಿದ್ದರೂ, ಲಕ್ನೋ ನಿರ್ದೇಶಕ ಟಾಮ್ ಮೂಡಿ ಈಗಾಗಲೇ ಅವರ ಕಳಪೆ ನಾಯಕತ್ವ ಮತ್ತು ಯುದ್ಧತಂತ್ರದ ವೈಫಲ್ಯಗಳ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಮತ್ತು ತಂಡದಲ್ಲಿ ಪುನರ್ರಚನೆಯ ಅಗತ್ಯದ ಬಗ್ಗೆ ಸುಳಿವು ನೀಡಿದ್ದಾರೆ. ಮುಂಬರುವ ಐಪಿಎಲ್ 2027 ರ ಆವೃತ್ತಿಯ ಮುಂಚಿತವಾಗಿ ಪಂತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಯಾವುದೇ ಒತ್ತಡವಿಲ್ಲದೆ ಆಟಗಾರನಾಗಿ ಆಡುವಂತೆ ಸೂಚಿಸಬಹುದು (PC- PTI).

6 / 6

Published On - 8:45 pm, Thu, 28 May 26

pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us