AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಲೀಗ್ ಹಂತದ ಅರ್ಧದಷ್ಟು ಪಂದ್ಯಗಳಿಗೆ ಧೋನಿ ಅಲಭ್ಯ

MS Dhoni Injury Blow: 2026ರ ಐಪಿಎಲ್‌ಗೆ CSK ತಂಡಕ್ಕೆ ಎಂಎಸ್ ಧೋನಿ ಗಾಯದ ರೂಪದಲ್ಲಿ ದೊಡ್ಡ ಆಘಾತ ಎದುರಾಗಿದೆ. ಆರಂಭದಲ್ಲಿ ಎರಡು ವಾರಗಳೆಂದು ಹೇಳಲಾಗಿದ್ದರೂ, ಈಗ ಧೋನಿ ಮೂರು ವಾರಗಳ ಕಾಲ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ, ಅಂದರೆ ಸುಮಾರು ಆರು ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಅವರ ಅನುಪಸ್ಥಿತಿಯು ಚೆನ್ನೈಗೆ ದೊಡ್ಡ ಸವಾಲಾಗಿದ್ದು, ಈ ಇತಿಹಾಸದಲ್ಲಿ ಧೋನಿ ಇಲ್ಲದೆ ಆಡುವುದು ಇದೇ ಮೊದಲು. ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಂಜು ಸ್ಯಾಮ್ಸನ್ ಹೊತ್ತುಕೊಳ್ಳಲಿದ್ದಾರೆ.

ಪೃಥ್ವಿಶಂಕರ
|

Updated on: Mar 29, 2026 | 6:11 PM

Share
2026 ರ ಐಪಿಎಲ್​ಗೆ ಅದ್ಧೂರಿ ಆರಂಭ ಸಿಕ್ಕಿದೆ. ಮೊದಲ ಪಂದ್ಯವೇ ಅಭಿಮಾನಿಗಳಿಗೆ ಬರಪೂರ ಮನರಂಜನೆ ನೀಡಿದೆ. ಇದೆಲ್ಲದರ ನಡುವೆ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಐಕಾನ್ ಮತ್ತು ಮಾಜಿ ನಾಯಕ ಎಂಎಸ್ ಧೋನಿ ಕಾಲಿನ ಗಾಯದಿಂದಾಗಿ ಪಂದ್ಯಾವಳಿಯ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದಾರೆ.

1 / 5
ಫ್ರಾಂಚೈಸಿಯ ಅಧಿಕೃತ ಹೇಳಿಕೆಯ ಪ್ರಕಾರ, ಧೋನಿ ಪುನರ್ವಸತಿಗೆ ಒಳಗಾಗುತ್ತಿದ್ದ್ದು, ಮೊದಲ ಎರಡು ವಾರಗಳವರೆಗೆ ಐಪಿಎಲ್​ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇದರರ್ಥ ಧೋನಿ ಕನಿಷ್ಠ ಮೂರು ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಆದಾಗ್ಯೂ, ಧೋನಿಯ ಗಾಯದ ಕುರಿತು ಮತ್ತೊಂದು ಅಪ್‌ಡೇಟ್ ಈಗ ಹೊರಹೊಮ್ಮಿದ್ದು, ಅಭಿಮಾನಿಗಳಿಗೆ ಆತಂಕ ಎದುರಾಗಿದೆ.

2 / 5
ಮಾಧ್ಯಮ ವರದಿಗಳ ಪ್ರಕಾರ, ಎಂಎಸ್ ಧೋನಿ ಚೇತರಿಸಿಕೊಳ್ಳಲು ಎರಡು ವಾರಗಳಲ್ಲ, ಕನಿಷ್ಠ ಮೂರು ವಾರಗಳಾದರೂ ಬೇಕಾಗಬಹುದು. ಅಂದರೆ ಏಪ್ರಿಲ್ ಅಂತ್ಯದವರೆಗೆ ಧೋನಿ ಚೇತರಿಕೆಗೆ ಕಾಲಾವಕಾಶ ಬೇಕಾಗಬಹುದು. ಈ ವರದ ನಿಜವಾದರೆ ಧೋನಿ ಕನಿಷ್ಠ ಆರು ಪಂದ್ಯಗಳಿಗೆ ಗೈರಾಗಬಹುದು. ಪ್ರಸ್ತುತ ತಂಡದಿಂದ ಹೊರಗುಳಿದಿರುವ ಧೋನಿ, ಚೆನ್ನೈನಲ್ಲಿ ಪುನರ್ವಸತಿಗೆ ಒಳಗಾಗುತ್ತಿದ್ದಾರೆ ಎಂದು ವರದಿಯಾಗಿದೆ.

3 / 5
ಧೋನಿ ಅನುಪಸ್ಥಿತಿಯು ಸಿಎಸ್‌ಕೆ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಕಳೆದ ಕೆಲವು ಆವೃತ್ತಿಗಳಲ್ಲಿ ಅವರು ತಂಡದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಆದಾಗ್ಯೂ, ವಯಸ್ಸು ಮತ್ತು ಆಗಾಗ್ಗೆ ಗಾಯಗಳಿಂದಾಗಿ, ಅವರ ಪ್ರದರ್ಶನವು ಮೊದಲಿನಂತೆ ಪ್ರಭಾವಶಾಲಿಯಾಗಿಲ್ಲ. ಇದೀಗ ಧೋನಿ ಇಲ್ಲದೆಯೇ ಸಿಎಸ್​ಕೆ ಆರಂಭಿಕ ಪಂದ್ಯಗಳನ್ನು ಆಡಬೇಕಾಗುತ್ತದೆ. ಇದಲ್ಲದೆ, ಐಪಿಎಲ್ ಇತಿಹಾಸದಲ್ಲಿ ಧೋನಿ ಅಥವಾ ಸುರೇಶ್ ರೈನಾ ಇಬ್ಬರೂ ಸಿಎಸ್‌ಕೆ ತಂಡದ ಆಡುವ XI ನಲ್ಲಿ ಇಲ್ಲದಿರುವುದು ಇದೇ ಮೊದಲು. ಕಳೆದ 16 ಆವೃತ್ತಿಗಳಲ್ಲಿ ಇದು ಹಿಂದೆಂದೂ ಸಂಭವಿಸಿರಲಿಲ್ಲ.

4 / 5
ಆದಾಗ್ಯೂ, ಸಂಜು ಸ್ಯಾಮ್ಸನ್ ಸೇರ್ಪಡೆಯಿಂದ ವಿಕೆಟ್ ಕೀಪಿಂಗ್ ಜವಾಬ್ದಾರಿ ಅವರ ಹೆಗಲಿಗೇರಲಿದೆ. ಇತ್ತೀಚೆಗೆ, ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಅವರು ಧೋನಿ ಎಲ್ಲಾ ಪಂದ್ಯಗಳನ್ನು ಆಡುವ ಸಾಧ್ಯತೆಯಿಲ್ಲ ಎಂದು ಹೇಳಿದ್ದರು. ಅಲ್ಲದೆ ಸಂಜು ನಂಬರ್ 1 ವಿಕೆಟ್ ಕೀಪರ್ ಆಗಿರುತ್ತಾರೆ ಎಂದಿದ್ದರು. ಪರಿಣಾಮವಾಗಿ, ಧೋನಿ ಅನುಪಸ್ಥಿತಿಯಲ್ಲಿ, ಸಂಜು ಸ್ಯಾಮ್ಸನ್ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

5 / 5
Follow Us
ರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ವಧು, ವರನ ಕಡೆಯವರು: ಆಗಿದ್ದೇನು?

‘ಧುರಂಧರ್ 2’, ‘ಕೇರಳ ಸ್ಟೋರಿ’ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ರಹಾನೆ ಅಬ್ಬರಕ್ಕೆ ಹೌಹಾರಿದ ಮುಂಬೈ ಬೌಲರ್ಸ್
ರಹಾನೆ ಅಬ್ಬರಕ್ಕೆ ಹೌಹಾರಿದ ಮುಂಬೈ ಬೌಲರ್ಸ್
ಜಿಎಂ ಸಿದ್ದೇಶ್ವರ್, ರೇಣುಕಾಚಾರ್ಯರನ್ನು ಒಗ್ಗೂಡಿಸಿದ ವಿಜಯೇಂದ್ರ

ಇರಾನ್ ಮೇಲೆ ವಿಧ್ವಂಸಕ ದಾಳಿಗೆ ಸಜ್ಜಾಗಿರುವ B-52 ಬಾಂಬರ್!

ತಾಯಿ, ಅಕ್ಕನ ಕತ್ತು ಸೀಳಿ ಯುವಕ ಆತ್ಮಹತ್ಯೆಗೆ ಯತ್ನ: ಅಸಲಿಗೆ ಆಗಿದ್ದೇನು?

ಆರ್​​ಸಿಬಿ ಮ್ಯಾಚ್ ಸುಸೂತ್ರ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ರಾಮ ಮಂದಿರದಲ್ಲಿ ಹನುಮ ಭಕ್ತಿ;ಮಂಗಳಾರತಿವರೆಗೂ ಕಾದು ಪ್ರಾರ್ಥನೆಗೈದ ಕೋತಿ

ಬಿಜೆಪಿ ಎಲ್ಡಿಎಫ್​, ಯುಡಿಎಫ್ ಹಗರಣಗಳನ್ನು ಬಯಲು ಮಾಡುತ್ತೆ: ಪ್ರಧಾನಿ ಮೋದಿ

ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ, ಬೇಧಿ!