AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2027: RCB ರಿಲೀಸ್ ಮಾಡಲಿರುವ ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ

IPL 2026: 24 ಸದಸ್ಯರುಗಳನ್ನು ಒಳಗೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ 15 ಆಟಗಾರರನ್ನು ಮಾತ್ರ ಕಣಕ್ಕಿಳಿಸಿತ್ತು. ಇನ್ನುಳಿದ 9 ಆಟಗಾರರಲ್ಲಿ ನಾಲ್ಕು ಪ್ಲೇಯರ್ಸ್ ಸಂಭಾವನೆ 30 ಲಕ್ಷ ರೂ. ಮಾತ್ರ. ಹೀಗಾಗಿ ಈ ಯುವ ಆಟಗಾರರನ್ನು ಆರ್​ಸಿಬಿ ಮುಂದಿನ ಸೀಸನ್​ಗಾಗಿ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. 

ಝಾಹಿರ್ ಯೂಸುಫ್
|

Updated on: Jun 03, 2026 | 10:42 AM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸತತವಾಗಿ ಟ್ರೋಫಿ ಗೆದ್ದು, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಈಗ ಇರುವ ದೊಡ್ಡ ಸವಾಲೆಂದರೆ ಮಿನಿ ಹರಾಜು. ಏಕೆಂದರೆ ಮಿನಿ ಹರಾಜಿಗೂ ಮುನ್ನ ಆರ್​ಸಿಬಿ ಕೆಲ ಆಟಗಾರರನ್ನು ಬಿಡುಗಡೆ ಮಾಡಬೇಕಾಗುತ್ತದೆ. (PC: IPL)

1 / 6
ಆದರೆ ಪ್ರಸ್ತುತ ತಂಡದಲ್ಲಿರುವ ಬಹುತೇಕ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲದೆ ತನ್ನ ಗೆಲುವಿನ ಕಾಂಬಿನೇಷನ್ ಹಾಗೂ ಕೋರ್ ತಂಡವನ್ನು ಬದಲಿಸಲು ಆರ್​ಸಿಬಿ ಮುಂದಾಗುವುದಿಲ್ಲ. ಇದಾಗ್ಯೂ ಹರಾಜಿನಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ಪರ್ಸ್ ಮೊತ್ತ ಇರಲೇಬೇಕು. ಹೀಗಾಗಿ ಕೆಲವೇ ಕೆಲವು ಆಟಗಾರರನ್ನು ಮಾತ್ರ ಬಿಡುಗಡೆ ಮಾಡಲು ಪ್ಲ್ಯಾನ್ ರೂಪಿಸಲಿದೆ. ಈ ಪ್ಲ್ಯಾನ್​ನಂತೆ ಆರ್​ಸಿಬಿ ತಂಡದಿಂದ ಹೊರಬೀಳಬಹುದಾದ ಮೂವರು ಆಟಗಾರರ ಪಟ್ಟಿ ಇಲ್ಲಿದೆ... (PC: IPL)

2 / 6
ಯಶ್ ದಯಾಳ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪರ್ಸ್ ಮೊತ್ತ ಹೆಚ್ಚಿಸಲು ಇರುವ ಏಕೈಕ ಆಯ್ಕೆ ಯಶ್ ದಯಾಳ್ ಬಿಡುಗಡೆ. ಈ ಬಾರಿಯ ಐಪಿಎಲ್​ನಿಂದ ಹೊರಗುಳಿದಿದ್ದ ದಯಾಳ್ ಮುಂಬರುವ ಸೀಸನ್​ನಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ತನ್ನ ಮೇಲಿರುವ ದೌರ್ಜನ್ಯ ಪ್ರಕರಣದಿಂದ ಖುಲಾಸೆಗೊಳ್ಳಬೇಕು. ಇಲ್ಲದಿದ್ದರೆ ಆರ್​ಸಿಬಿ 5 ಕೋಟಿ ರೂ. ಬೆಲೆಯ ಯಶ್ ದಯಾಳ್ ಅವರನ್ನು ಬಿಡುಗಡೆ ಮಾಡುವುದು ಖಚಿತ. (PC: IPL)

3 / 6
ಅಭಿನಂದನ್ ಸಿಂಗ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅಭಿನಂದನ್ ಸಿಂಗ್ ಈ ಬಾರಿ 3 ಪಂದ್ಯಗಳನ್ನಾಡಿದ್ದಾರೆ. ಈ ಮೂರು ಮ್ಯಾಚ್​ಗಳಲ್ಲಿ 58 ಎಸೆತಗಳನ್ನು ಎಸೆದಿರುವ ಅಭಿನಂದನ್ ಪಡೆದಿರುವುದು ಕೇವಲ 3 ವಿಕೆಟ್ ಮಾತ್ರ. ಇದೇ ವೇಳೆ ಅವರು ನೀಡಿರುವುದು ಬರೋಬ್ಬರಿ 122 ರನ್​ಗಳು. ಹೀಗಾಗಿ ಅಭಿನಂದನ್ ಸಿಂಗ್ ಅವರನ್ನು ಮುಂದಿನ ಸೀಸನ್​ಗಾಗಿ ಆರ್​ಸಿಬಿ ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ. (PC: IPL)

4 / 6
ರಿಚರ್ಡ್ ಗ್ಲೀಸನ್: ಆರ್​ಸಿಬಿ ತಂಡದಲ್ಲಿದ್ದ ನುವಾನ್ ತುಷಾರ ಬದಲಿಗೆ ಆಯ್ಕೆಯಾಗಿದ್ದ ರಿಚರ್ಡ್ ಗ್ಲೀಸನ್ ಅವರನ್ನು ಮುಂದಿನ ಸೀಸನ್​ಗಾಗಿ ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ. ಬದಲಾಗಿ ನುವಾನ್ ಅವರನ್ನು ರಿಟೈನ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಐಪಿಎಲ್ 2027 ರಲ್ಲಿ ಗ್ಲೀಸನ್ ಆರ್​ಸಿಬಿ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದೇ ಹೇಳಬಹುದು. (PC: IPL)

5 / 6
ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ರಿಚರ್ಡ್ ಗ್ಲೀಸನ್.

6 / 6
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us