RCB: ಐಪಿಎಲ್ ಆರಂಭಕ್ಕೂ ಮುನ್ನ ಆರ್ಸಿಬಿಗೆ ಬಿಗ್ ಶಾಕ್; ಮತ್ತೊಮ್ಮೆ ಟ್ವಿಟರ್ ಖಾತೆ ಹ್ಯಾಕ್..!
RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ಖಾತೆಯನ್ನು ಹ್ಯಾಕ್ ಮಾಡಿರುವ ಹ್ಯಾಕರ್ಸ್ಗಳು ಇದೀಗ ಆ ಖಾತೆಯ ಹೆಸರನ್ನು ಬದಲಿಸಿರುವುದಲ್ಲದೆ, ಆ ಖಾತೆಯಲ್ಲಿ ಎನ್‌ಎಫ್‌ಟಿ ಸಂಬಂಧಿತ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.
Updated on:Jan 21, 2023 | 1:34 PM

ಐಪಿಎಲ್ನ ಅತ್ಯಂತ ಜನಪ್ರಿಯ ತಂಡ ಹಾಗೂ ಅತಿ ಹೆಚ್ಚು ಸೋಶಿಯಲ್ ಮೀಡಿಯಾ ಫಾಲೋವರ್ಸ್ಗಳನ್ನು ಹೊಂದಿರುವ ಆರ್ಸಿಬಿ ಸೋಶಿಯಲ್ ಮೀಡಿಯಾ ಖಾತೆ ಪದೆಪದೆ ಹ್ಯಾಕರ್ಗಳ ದಾಳಿಗೆ ತುತ್ತಾಗುತ್ತಿದೆ.

ಈಗ ಆರ್ಸಿವಿ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿರುವ ಹ್ಯಾಕರ್ಸ್ಗಳು ಆರ್ಸಿಬಿ ಟ್ವಿಟರ್ ಖಾತೆಯ ಹೆಸರನ್ನು ಬೋರ್ಡ್ ಆಪ್ ಯಾಚ್ ಕ್ಲಬ್ ಎಂದು ಹೆಸರನ್ನು ಬದಲಾಯಿಸಿದ್ದಾರೆ. ಜೊತೆಗೆ RCB ಯ ಲೋಗೋ ಮತ್ತು ಪ್ರೊಫೈಲ್ ಚಿತ್ರವನ್ನೂ ಹ್ಯಾಕರ್‌ಗಳು ಬದಲಾಯಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಖಾತೆಯನ್ನು ಹ್ಯಾಕ್ ಮಾಡಿರುವ ಹ್ಯಾಕರ್ಸ್ಗಳು ಇದೀಗ ಆ ಖಾತೆಯ ಹೆಸರನ್ನು ಬದಲಿಸಿರುವುದಲ್ಲದೆ, ಆ ಖಾತೆಯಲ್ಲಿ ಎನ್‌ಎಫ್‌ಟಿ ಸಂಬಂಧಿತ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಇದಲ್ಲದೆ, ಹ್ಯಾಕರ್‌ಗಳು ತಮ್ಮ ಅಧಿಕೃತ ವೆಬ್‌ಸೈಟ್‌ನ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಆರ್‌ಸಿಬಿಯ ಟ್ವಿಟರ್ ಖಾತೆ ಹ್ಯಾಕ್ ಆಗಿರುವುದು ಇದೇ ಮೊದಲಲ್ಲ. 2021ರಲ್ಲೂ ಈ ತಂಡದ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು.

ಆರ್ಸಿಬಿ ಟ್ವಿಟರ್ ಖಾತೆಗಳನ್ನು ಎರಡೆರಡು ಬಾರಿ ಹ್ಯಾಕ್ ಮಾಡಿರುವ ಹ್ಯಾಕರ್ಸ್ಗಳು ಈ ನಡುವೆ 2022 ರ ಆಗಸ್ಟ್‌ನಲ್ಲಿ ಆರ್‌ಸಿಬಿಯ ಯೂಟ್ಯೂಬ್ ಚಾನೆಲ್ ಅನ್ನು ಒಮ್ಮೆ ಹ್ಯಾಕ್ ಮಾಡಿದ್ದರು.
Published On - 1:33 pm, Sat, 21 January 23

TV9 Kannada
Read More



