AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ 3ನೇ ಆಟಗಾರ ಮನೀಷ್ ಪಾಂಡೆ

Manish Pandey's Historic IPL 2026 Record: ಐಪಿಎಲ್ 2026ರಲ್ಲಿ ಮನೀಷ್ ಪಾಂಡೆ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಕೆಕೆಆರ್ ಪರ ಆಡುವ ಮೂಲಕ, ಅವರು ಎಲ್ಲಾ 19 ಸೀಸನ್‌ಗಳಲ್ಲಿ ಕನಿಷ್ಠ ಒಂದು ಪಂದ್ಯವನ್ನಾದರೂ ಆಡಿದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಂತರದ ಮೂರನೇ ಆಟಗಾರರಾಗಿದ್ದಾರೆ. ಗಾಯದಿಂದಾಗಿ ಧೋನಿ ಈ ಸೀಸನ್‌ನಲ್ಲಿ ಆಡದಿರುವ ಕಾರಣ, ಪಾಂಡೆ ಧೋನಿ ಅವರನ್ನು ಈ ಪಟ್ಟಿಯಲ್ಲಿ ಹಿಂದಿಕ್ಕಿದ್ದಾರೆ. ಇದು ಪಾಂಡೆಯ ದೀರ್ಘಾವಧಿಯ ಐಪಿಎಲ್ ವೃತ್ತಿಜೀವನಕ್ಕೆ ಸಾಕ್ಷಿಯಾಗಿದೆ.

ಪೃಥ್ವಿಶಂಕರ
|

Updated on: May 03, 2026 | 6:22 PM

Share
ಐಪಿಎಲ್ 2026 ರ 45ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೆಕೆಆರ್ ಪರ ಕನ್ನಡಿಗ ಮನೀಷ್ ಪಾಂಡೆಗೆ ಪ್ಲೇಯಿಂಗ್ 11ನಲ್ಲಿ ಆಡುವ ಅವಕಾಶ ಸಿಕ್ಕಿತು. ಈ ಆವೃತ್ತಿಯಲ್ಲಿ ಮನೀಷ್​ಗೆ ಆಡುವ ಅವಕಾಶ ಸಿಕ್ಕಿದ್ದು ಇದೇ ಮೊದಲು. ಈ ಮೂಲಕ ಮನೀಷ್ ಐಪಿಎಲ್‌ನಲ್ಲಿ ವಿಶೇಷ ದಾಖಲೆಯನ್ನು ಸೃಷ್ಟಿಸಿದರು.

1 / 6
ವಾಸ್ತವವಾಗಿ ಐಪಿಎಲ್ 19 ವರ್ಷಗಳನ್ನು ಪೂರೈಸಿದೆ. ಈ 19 ಸೀಸನ್‌ಗಳನ್ನು ಆಡಿದ್ದವರಲ್ಲಿ ಕೇವಲ 3 ರಿಂದ 4 ಆಟಗಾರರ ಹೆಸರಿದೆ. ಇದರಲ್ಲಿ ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ದೊಡ್ಡ ಹೆಸರುಗಳು. ಆದರೆ ಇವರನ್ನು ಹೊರತುಪಡಿಸಿ, ಮನೀಷ್ ಪಾಂಡೆ ಕೂಡ ಲೀಗ್‌ನ ಮೊದಲ ಸೀಸನ್‌ನಿಂದ ಆಡುತ್ತಿರುವ ಆಟಗಾರ.

2 / 6
ಇದೀಗ ಮನೀಷ್ ಪಾಂಡೆ ಐಪಿಎಲ್‌ನಲ್ಲಿ ಧೋನಿಗೂ ಸಹ ಸಾಧಿಸಲು ಸಾಧ್ಯವಾಗದ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ವಿರಾಟ್ ಮತ್ತು ರೋಹಿತ್ ನಂತರ ಈ ಸಾಧನೆ ಮಾಡಿದ ಮೂರನೇ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

3 / 6
ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಮೂಲಕ ಮನೀಷ್ 19 ಐಪಿಎಲ್ ಸೀಸನ್‌ಗಳಲ್ಲಿ ಕನಿಷ್ಠ ಒಂದು ಪಂದ್ಯವನ್ನಾದರೂ ಆಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಹಿಂದಿನ 18 ಸೀಸನ್‌ಗಳಲ್ಲಿ ಮನೀಷ್ ವಿವಿಧ ತಂಡಗಳಿಗಳ ಪರ ಒಂದು ಅಥವಾ ಹೆಚ್ಚಿನ ಪಂದ್ಯಗಳನ್ನು ಆಡಿದ್ದರು. ಇದೀಗ ಈ ಸೀಸನ್‌ನಲ್ಲಿಯೂ ಮನೀಷ್​ಗೆ ಆಡುವ ಅವಕಾಶ ಸಿಕ್ಕಿದೆ.

4 / 6
ಇದರೊಂದಿಗೆ ಪಾಂಡೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದರು. ಈ ಇಬ್ಬರೂ ಅನುಭವಿಗಳು ಪ್ರತಿ ಐಪಿಎಲ್ ಆವೃತ್ತಿಯಲ್ಲಿ ಕನಿಷ್ಠ ಒಂದು ಪಂದ್ಯವನ್ನಾದರೂ ಆಡಿದ್ದಾರೆ. ಆಶ್ಚರ್ಯಕರವೆಂದರೆ, ಮನೀಶ್ ಪಾಂಡೆ ಈ ವಿಷಯದಲ್ಲಿ ಧೋನಿಯನ್ನು ಮೀರಿಸಿದ್ದಾರೆ. ಗಾಯದಿಂದಾಗಿ ಧೋನಿ ಈ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಅದಕ್ಕಾಗಿಯೇ ಧೋನಿಯನ್ನು ಪ್ರಸ್ತುತ ಈ ಪಟ್ಟಿಯಿಂದ ಹೊರಗಿಡಲಾಗಿದೆ.

5 / 6
ಮನೀಶ್ ಪಾಂಡೆ ಅವರ ಐಪಿಎಲ್ ವೃತ್ತಿಜೀವನವು ಸಾಕಷ್ಟು ಏರಿಳಿತಗಳಿಂದ ಕೂಡಿದೆ. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಏಳು ತಂಡಗಳ ಭಾಗವಾಗಿರುವ ಮನೀಷ್ 175 ಪಂದ್ಯಗಳನ್ನು ಆಡಿದ್ದು, 3,942 ರನ್ ಗಳಿಸಿದ್ದಾರೆ. ಇದರಲ್ಲಿ 22 ಅರ್ಧಶತಕಗಳು ಮತ್ತು ಒಂದು ಶತಕವೂ ಸೇರಿದೆ. 2009 ರ ಐಪಿಎಲ್‌ನಲ್ಲಿ ಶತಕ ಬಾರಿಸುವ ಮೂಲಕ ಮನೀಷ್, ಐಪಿಎಲ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದ್ದರು.

6 / 6
Follow Us
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ

ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು

Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ

ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ

ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ

ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ

ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ

ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ

ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ

ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ