AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಕೀರನ್ ಪೊಲಾರ್ಡ್​ಗೆ ದಂಡದ ಬರೆ ಎಳೆದ ಬಿಸಿಸಿಐ

Kieron Pollard Penalty: 2026ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪ್ಲೇಆಫ್‌ನಿಂದ ಹೊರಬಿದ್ದಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ತಂಡದ ಬ್ಯಾಟಿಂಗ್ ಕೋಚ್ ಕೀರನ್ ಪೊಲಾರ್ಡ್ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಕ್ಕಾಗಿ ಅವರ ಪಂದ್ಯ ಶುಲ್ಕದ ಶೇ. 15ರಷ್ಟು ದಂಡ ಮತ್ತು 1 ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಸಿಸಿಐ ಈ ಕ್ರಮ ಕೈಗೊಂಡಿದೆ.

ಪೃಥ್ವಿಶಂಕರ
|

Updated on: May 15, 2026 | 3:32 PM

Share
2026 ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ತಂಡದಲ್ಲಿ ಬಲಿಷ್ಠ ಆಟಗಾರರಿದ್ದರೂ ಅವರ್ಯಾರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಇದರ ಪರಿಣಾಮವಾಗಿ ಐದು ಬಾರಿಯ ಚಾಂಪಿಯನ್ ಮುಂಬೈ ತಂಡ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇದರರ್ಥ ಪ್ಲೇಆಫ್​ ರೇಸ್​​ನಿಂದ ಹೊರಬಿದ್ದಿದೆ. ಮುಂಬೈ ಪಾಯಿಂಟ್‌ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದರೂ ಫೇರ್ ಪ್ಲೇ ಅವಾರ್ಡ್​ನಲ್ಲಿ ಅಗ್ರಸ್ಥಾನದಲ್ಲಿತ್ತು. ಆದರೀಗ ಆ ಸ್ಥಾನಕ್ಕೂ ಕುತ್ತು ಬಂದಿದೆ (PC- IPL X).

1 / 6
ವಾಸ್ತವವಾಗಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಮುಂಬೈ ತಂಡದ ಬ್ಯಾಟಿಂಗ್‌ ಕೋಚ್ ಕೀರನ್ ಪೊಲಾರ್ಡ್ ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ನಡೆಸಿ, ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಹೀಗಾಗಿ ಪೊಲಾರ್ಡ್ ಐಪಿಎಲ್ ನಿಯಮಗಳನ್ನು ಉಲ್ಲಂಘಿಸಿರುವ ಕಾರಣ ಅವರಿಗೆ ಬಿಸಿಸಿಐ ಪಂದ್ಯ ಶುಲ್ಕ ಶೇ. 15 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿದೆ (PC- IPL X).

2 / 6
ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಮಾಡುವಾಗ 19 ನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ಪೊಲಾರ್ಡ್  ಅಸಭ್ಯ ಭಾಷೆ ಬಳಸಿರುವುದು ಕಂಡುಬಂದಿದೆ. ಈ ಕಾರಣದಿಂದಾಗಿ, ಬಿಸಿಸಿಐ ಅವರ ವಿರುದ್ಧ ಕ್ರಮ ಕೈಗೊಂಡು ಅವರ ಪಂದ್ಯ ಶುಲ್ಕದ ಶೇಕಡಾ 15 ರಷ್ಟು ಕಡಿತಗೊಳಿಸಿದೆ. ಇದರ ಜೊತೆಗೆ, ಪೊಲಾರ್ಡ್‌ಗೆ 1 ಡಿಮೆರಿಟ್ ಪಾಯಿಂಟ್‌ಗಳನ್ನು ಸಹ ನೀಡಲಾಗಿದೆ (PC- IPL X).

3 / 6
ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕೋಚ್ ಕೀರನ್ ಪೊಲಾರ್ಡ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 15 ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ" ಎಂದು ಐಪಿಎಲ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ (PC- IPL X).

4 / 6
ಈ ಆವೃತ್ತಿಯಲ್ಲಿ ಇಂತಹ ಶಿಕ್ಷೆಗೆ ಒಳಗಾದ ಮೊದಲ ತರಬೇತುದಾರ ಕೀರನ್ ಪೊಲಾರ್ಡ್ ಅಲ್ಲ. ಇದಕ್ಕೂ ಮೊದಲು, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮುಖ್ಯ ತರಬೇತುದಾರರಿಗೂ ಪಂದ್ಯವೊಂದರಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿದ್ದಕ್ಕಾಗಿ ಅವರ ಸಂಬಳದ 15 ಪ್ರತಿಶತದಷ್ಟು ದಂಡ ವಿಧಿಸಲಾಗಿತ್ತು (PC- IPL X).

5 / 6
ಪಂದ್ಯದ ಬಗ್ಗೆ ಹೇಳುವುದಾದರೆ, ಮುಂಬೈ ಇಂಡಿಯನ್ಸ್ ಪಂಜಾಬ್ ಕಿಂಗ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಇದರಿಂದಾಗಿ, ಪಂಜಾಬ್‌ನ ಪ್ಲೇಆಫ್ ತಲುಪುವ ಕನಸಿಗೆ ದೊಡ್ಡ ಹೊಡೆತ ಬಿದ್ದಿದೆ. ಪಂಜಾಬ್ ನೀಡಿದ್ದ 211 ರನ್‌ಗಳ ಗುರಿಯನ್ನು ಮುಂಬೈ ಈ ಪಂದ್ಯವನ್ನು ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ ಗೆದ್ದುಕೊಂಡಿತು (PC- IPL X).

6 / 6
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ಕೋರ್ಟ್ ಆದೇಶದಿಂದ ದರ್ಶನ್​ಗೆ ಅನುಕೂಲ: ಹೇಗೆ ಗೊತ್ತಾ?

ಇನೋವಾ ಕಾರಿನಲ್ಲಿ ಬಂದು 7ಲಕ್ಷ ರೂ. ಮೌಲ್ಯದ ಸೀರೆ ಎಗರಿಸಿದ ಮಹಿಳಾ ಗ್ಯಾಂಗ್

ಮೋದಿ ಕರೆ ಬೆನ್ನಲ್ಲೇ ಬೆಂಗಾವಲು ವಾಹನ ತ್ಯಜಿಸಿದ ಕೇಂದ್ರ ಸಚಿವ ವಿ. ಸೋಮಣ್ಣ

ಇನ್ನೂ ಹೆಚ್ಚಾಗುತ್ತಾ ಪೆಟ್ರೋಲ್, ಡೀಸೆಲ್ ಬೆಲೆ? ತಜ್ಞರು ಹೇಳೋದೇನು ನೋಡಿ

ಮಗ, ಸೊಸೆ-ಮೊಮ್ಮಕ್ಳು ಬೆಳಗಾಗೋದ್ರೊಳಗೆ ಸತ್ತೋದ್ರು: ತಾಯಿಯ ಕಣ್ಣೀರ ಮಾತು

ದರ್ಶನ್ ಜಾಮೀನು ಅರ್ಜಿ ನಿರಾಕರಣೆಯಾಗಿದ್ದು ಒಳ್ಳೆಯದು: ವಕೀಲರ ವಿಶ್ಲೇಷಣೆ

ಬಸ್ಸಿನಲ್ಲಿ ಮೊಬೈಲ್ ಕಳವು ತಡೆಯಲು ಈ ಯುವಕನ ಐಡಿಯಾ ಫಾಲೋ ಮಾಡಿ

ಹುಟ್ಟುಹಬ್ಬಕ್ಕೆ ಸ್ಪೆಷಲ್​​ ಗಿಫ್ಟ್​: ರಂಗೋಲಿಯಲ್ಲಿ ಮೂಡಿದ ಡಿಕೆಶಿ

ಡಿ.ಕೆ. ಶಿವಕುಮಾರ್ ಜನ್ಮದಿನ: ವೇದಘೋಷದೊಂದಿಗೆ ಆಶೀರ್ವದಿಸಿದ ವಿದ್ವಾಂಸರು!

ಪೆಟ್ರೋಲ್​​, ಡೀಸೆಲ್ ದರ ಏರಿಕೆ ಬಗ್ಗೆ ಬೆಂಗಳೂರಿನಲ್ಲಿ ಜನ ಏನಂತಾರೆ ನೋಡಿ!