AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KL Rahul: ಕೆಎಲ್ ರಾಹುಲ್ ರಾಕೆಟ್ ಸಿಕ್ಸ್​ಗೆ ದಾಖಲೆಗಳೇ ಧೂಳೀಪಟ

IPL 2025 DC vs GT: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2025) 35ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 203 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 19.2 ಓವರ್​ಗಳಲ್ಲಿ 204 ರನ್ ಬಾರಿಸಿ 7 ವಿಕೆಟ್​ಗಳ ಗೆಲುವು ದಾಖಲಿಸಿದೆ.

ಝಾಹಿರ್ ಯೂಸುಫ್
|

Updated on: Apr 20, 2025 | 10:30 AM

Share
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ಕೆಎಲ್ ರಾಹುಲ್ (KL Rahul) ಭರ್ಜರಿ ಪ್ರದರ್ಶನ ಮುಂದುವರೆದಿದೆ. ಈ ಭರ್ಜರಿ ಬ್ಯಾಟಿಂಗ್​ನೊಂದಿಗೆ ರಾಹುಲ್ ವಿಶೇಷ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ. ಅದು ಕೂಡ ಅತೀ ವೇಗವಾಗಿ 200 ಸಿಕ್ಸ್​ಗಳನ್ನು ಪೂರೈಸುವ ಮೂಲಕ ಎಂಬುದು ವಿಶೇಷ.

1 / 5
ಅಹದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಎಲ್ ರಾಹುಲ್ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು.

2 / 5
ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕೆಎಲ್ ರಾಹುಲ್ 14 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 28 ರನ್ ಬಾರಿಸಿದ್ದರು. ಈ ಒಂದು ಸಿಕ್ಸ್​ನೊಂದಿಗೆ ಕನ್ನಡಿಗ ಐಪಿಎಲ್​ನಲ್ಲಿ 200 ಸಿಕ್ಸ್​ಗಳನ್ನು ಪೂರೈಸಿದ್ದಾರೆ. ಅದು ಕೂಡ ಕೇವಲ 129 ಇನಿಂಗ್ಸ್​ಗಳಲ್ಲಿ ಎಂಬುದು ವಿಶೇಷ.

3 / 5
ಈ ಮೂಲಕ ಐಪಿಎಲ್​ನಲ್ಲಿ ಅತೀ ಕಡಿಮೆ ಇನಿಂಗ್ಸ್​ಗಳಲ್ಲಿ 200 ಸಿಕ್ಸ್​ಗಳನ್ನು ಬಾರಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಸಂಜು ಸ್ಯಾಮ್ಸನ್ ಹೆಸರಿನಲ್ಲಿತ್ತು. ಸ್ಯಾಮ್ಸನ್ 159 ಇನಿಂಗ್ಸ್​ಗಳ ಮೂಲಕ 200 ಸಿಕ್ಸ್ ಪೂರೈಸಿ ಈ ಭರ್ಜರಿ ದಾಖಲೆ ಬರೆದಿದ್ದರು. ಹಾಗೆಯೇ ಧೋನಿ 165 ಇನಿಂಗ್ಸ್​ಗಳಲ್ಲಿ 200 ಸಿಕ್ಸ್​ ಸಿಡಿಸಿದ್ದರು.

4 / 5
ಇದೀಗ ಕೇವಲ 129 ಇನಿಂಗ್ಸ್​ಗಳ ಮೂಲಕ 200 ಸಿಕ್ಸರ್​ಗಳನ್ನು ಪೂರೈಸಿ ಕೆಎಲ್ ರಾಹುಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಮುಂದಿನ ಪಂದ್ಯದಲ್ಲಿ 51 ರನ್​ ಕಲೆಹಾಕಿದರೆ, ಐಪಿಎಲ್ ಇತಿಹಾಸದಲ್ಲೇ ಅತೀ ವೇಗವಾಗಿ 5000 ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆಯನ್ನು ಬರೆಯುವ ಅವಕಾಶ ಕೆಎಲ್ ರಾಹುಲ್ ಮುಂದಿದೆ.

5 / 5
Follow Us
ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ
ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?

KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!

ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ

ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ

‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ

ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?

ದಾವಣಗೆರೆ ಜನರಿಗೆ ತಂಪೆರೆದ ಮಳೆರಾಯ: ಹಲವೆಡೆ ಅಕಾಲಿಕ ಮಳೆ

ತಮಿಳುನಾಡಿನಲ್ಲಿ ಡಿಎಂಕೆ ಬದಲು ಎಐಎಡಿಎಂಕೆಯನ್ನು ಹೊಗಳಿದ ರಾಹುಲ್ ಗಾಂಧಿ

ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!