AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

LPL 2024: ಸ್ಟೋಟಕ ಸೆಂಚುರಿ ಸಿಡಿಸಿ ಬಾಬರ್ ದಾಖಲೆ ಮುರಿದ ಕುಸಾಲ್ ಪೆರೇರಾ

LPL 2024: ಲಂಕಾ ಪ್ರೀಮಿಯರ್ ಲೀಗ್​ನ 4ನೇ ಪಂದ್ಯದಲ್ಲಿ ಜಾಫ್ನಾ ಕಿಂಗ್ಸ್ ತಂಡವು ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಂಬುಲ್ಲಾ ಸಿಕ್ಸರ್ಸ್ ಪರ ಕುಸಾಲ್ ಪೆರೇರಾ ಭರ್ಜರಿ ಶತಕ ಸಿಡಿಸಿದ್ದರು. ಈ ಶತಕದ ನೆರವಿನಿಂದ ದಂಬುಲ್ಲಾ ಸಿಕ್ಸರ್ಸ್ 191 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಜಾಫ್ನಾ ಕಿಂಗ್ಸ್ ತಂಡವು ಕೊನೆಯ ಎಸೆತದಲ್ಲಿ ಸಿಕ್ಸ್​ ಸಿಡಿಸಿ ಜಯ ಸಾಧಿಸಿತು.

ಝಾಹಿರ್ ಯೂಸುಫ್
|

Updated on: Jul 04, 2024 | 8:54 AM

Share
ಲಂಕಾ ಪ್ರೀಮಿಯರ್ ಲೀಗ್​ನಲ್ಲಿ (LPL 2024) ಸ್ಪೋಟಕ ಶತಕ ಬಾರಿಸಿದ ಕುಸಾಲ್ ಪೆರೇರಾ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಬಾಬರ್ ಆಝಂ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಪಲ್ಲೆಕೆಲೆ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ ದಂಬುಲ್ಲಾ ಸಿಕ್ಸರ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಜಾಫ್ನಾ ಕಿಂಗ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು.

1 / 5
ಅದರಂತೆ ಮೊದಲು ಬ್ಯಾಟ್ ಮಾಡಿದ ದಂಬುಲ್ಲಾ ಸಿಕ್ಸರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಕುಸಾಲ್ ಪೆರೇರಾ ವಿಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಪೆರೇರಾ ಜಾಫ್ನಾ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ಕೇವಲ 50 ಎಸೆತಗಳಲ್ಲಿ ಶತಕ ಮೂಡಿಬಂತು. ಇದರೊಂದಿಗೆ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ದಾಖಲೆ ಕುಸಾಲ್ ಪೆರೇರಾ ಪಾಲಾಯಿತು.

2 / 5
ಇದಕ್ಕೂ ಮುನ್ನ ಈ ದಾಖಲೆ ಬಾಬರ್ ಆಝಂ ಹೆಸರಿನಲ್ಲಿತ್ತು. 2023 ರ ಎಲ್​ಪಿಎಲ್​ನಲ್ಲಿ ಕೊಲಂಬೊ ಸ್ಟ್ರಕರ್ಸ್ ಪರ ಕಣಕ್ಕಿಳಿದಿದ್ದ ಬಾಬರ್ 57 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ ಈ ದಾಖಲೆಯನ್ನು ಕುಸಾಲ್ ಪೆರೇರಾ ಮುರಿದಿದ್ದಾರೆ.

3 / 5
ಇನ್ನು ಈ ಪಂದ್ಯದಲ್ಲಿ 52 ಎಸೆತಗಳನ್ನು ಎದುರಿಸಿದ ಕುಸಾಲ್ ಪೆರೇರಾ 5 ಭರ್ಜರಿ ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ ಅಜೇಯ 102 ರನ್ ಬಾರಿಸಿದರು. ಈ ಶತಕದ ನೆರವಿನಿಂದ ದಂಬುಲ್ಲಾ ಸಿಕ್ಸರ್ಸ್ ತಂಡವು 20 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 191 ರನ್ ಕಲೆಹಾಕಿತು.

4 / 5
192 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಜಾಫ್ನಾ ಕಿಂಗ್ಸ್ ಪರ ಅವಿಷ್ಕಾ ಫೆರ್ನಾಂಡೋ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಅವಿಷ್ಕಾ 34 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 80 ರನ್ ಚಚ್ಚಿದರೆ, ಚರಿತ್ ಅಸಲಂಕಾ 36 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ಜಾಫ್ನಾ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 197 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿತು.

5 / 5
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
4500 ಕೋಟಿ ರೂ. ವಂಚನೆ ಕೇಸ್: ಶಿವಂ ಅಸೋಸಿಯೇಟ್‌ ಮಾಲೀಕ ಅರೆಸ್ಟ್​​​

ಹೈದರಾಬಾದ್-ಜೈಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ದುರಂತ

ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?

ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು

ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?

ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?

ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​

ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ

ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್

ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ