AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಕೆಟ್ ಬೇಟೆ… ಮೊಹಮ್ಮದ್ ಅಮೀರ್ ವಿಶ್ವ ದಾಖಲೆ

Mohammad Amir Records: ಟಿ20 ಕ್ರಿಕೆಟ್​​ನಲ್ಲಿ ಪಾಕಿಸ್ತಾನ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮೀರ್ ವಿಶೇಷ ಮೈಲುಗಲ್ಲು ಮುಟ್ಟಿದ್ದಾರೆ. ಅದು ಕೂಡ ಕೆರಿಬಿಯನ್ ಪ್ರೀಮಿಯರ್ ಲೀಗ್​​​ನಲ್ಲಿ 2 ವಿಕೆಟ್ ಕಬಳಿಸುವ ಮೂಲಕ. ಈ ಎರಡು ವಿಕೆಟ್​ಗಳೊಂದಿಗೆ ಟಿ20 ಕ್ರಿಕೆಟ್​​ನ ವಿಕೆಟ್ ಸರದಾರರ ಪಟ್ಟಿಯಲ್ಲಿ 9ನೇ ಸ್ಥಾನ ಅಲಂಕರಿಸಿದ್ದಾರೆ.

ಝಾಹಿರ್ ಯೂಸುಫ್
|

Updated on: Aug 24, 2025 | 8:54 AM

Share
ಟಿ20 ಕ್ರಿಕೆಟ್ ಇತಿಹಾಸದಲ್ಲಿ 400+ ವಿಕೆಟ್ ಕಬಳಿಸಿರುವುದು ಕೇವಲ 9 ಬೌಲರ್​​ಗಳು ಮಾತ್ರ. ಈ ಒಂಭತ್ತು ಬೌಲರ್​​​ಗಳಲ್ಲಿ ಈ ಸಾಧನೆ ಮಾಡಿರುವುದು ಕೇವಲ ಐವರು ವೇಗಿಗಳು ಮಾತ್ರ. ಈ ಐವರುಗಳಲ್ಲಿ ಇದೀಗ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಕೂಡ ಒಬ್ಬರು.

1 / 5
ಪ್ರಸ್ತುತ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಟ್ರಿನ್ ಬಾಗೊ ನೈಟ್ ರೈಡರ್ಸ್ ಪರ ಕಣಕ್ಕಿಳಿಯುತ್ತಿರುವ ಮೊಹಮ್ಮದ್ ಅಮೀರ್ 2 ವಿಕೆಟ್ ಕಬಳಿಸಿದ್ದಾರೆ. ಈ ಎರಡು ವಿಕೆಟ್​​ ಗಳೊಂದಿಗೆ ಟಿ20 ಕ್ರಿಕೆಟ್​​ನಲ್ಲಿ 400 ವಿಕೆಟ್ ಪಡೆದ ಬೌಲರ್​​​ಗಳ ಪಟ್ಟಿಯಲ್ಲಿ ಅಮೀರ್​ ಕೂಡ ಸೇರ್ಪಡೆಯಾಗಿದ್ದಾರೆ.

2 / 5
ಅಲ್ಲದೆ ಈ ಸಾಧನೆ ಮಾಡಿದ ಪಾಕಿಸ್ತಾನದ 2ನೇ ಬೌಲರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪಾಕ್ ತಂಡದ ಮಾಜಿ ಎಡಗೈ ವೇಗಿ ವಹಾಬ್ ರಿಯಾಝ್ 344 ಇನಿಂಗ್ಸ್​​ ಗಳ ಮೂಲಕ ಒಟ್ಟು 413 ವಿಕೆಟ್​ ಕಬಳಿಸಿ ದಾಖಲೆ ಬರೆದಿದ್ದರು. ಇದೀಗ ವಹಾಬ್ ಅವರ ದಾಖಲೆಯನ್ನು ಸರಿಗಟ್ಟುವಲ್ಲಿ ಅಮೀರ್ ಯಶಸ್ವಿಯಾಗಿದ್ದಾರೆ.

3 / 5
ಮೊಹಮ್ಮದ್ ಅಮೀರ್ ಈವರೆಗೆ 336 ಇನಿಂಗ್ಸ್​​​ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ 7379 ಎಸೆತಗಳನ್ನು ಎಸೆದಿರುವ ಅವರು ಒಟ್ಟು 400 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ನಾಲ್ಕು ನೂರು ವಿಕೆಟ್​ ಪಡೆದ ಪಾಕಿಸ್ತಾನದ 2ನೇ ಆಟಗಾರ ಹಾಗೂ ವಿಶ್ವದ 9ನೇ ಬೌಲರ್ ಎನಿಸಿಕೊಂಡಿದ್ದಾರೆ.

4 / 5
ಇನ್ನು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಅಫ್ಘಾನಿಸ್ತಾನದ ರಶೀದ್ ಖಾನ್ ಹೆಸರಿನಲ್ಲಿದೆ. 483 ಟಿ20 ಇನಿಂಗ್ಸ್​ ಗಳಲ್ಲಿ ಬೌಲಿಂಗ್ ಮಾಡಿರುವ ರಶೀದ್ ಖಾನ್ ಈವರೆಗೆ 660 ವಿಕೆಟ್​​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟಿ20 ಇತಿಹಾಸದಲ್ಲೇ 650+ ವಿಕೆಟ್ ಪಡೆದ ಏಕೈಕ ಬೌಲರ್​ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

5 / 5
Follow Us
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’

ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ

ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ

ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ

ಸುಬ್ರಹ್ಮಣ್ಯ, ಹನುಮನ ಲಹರಿ ಇರುವ ಪರ್ವ ದಿನ: 12 ರಾಶಿಗಳ ದಿನ ಭವಿಷ್ಯ

ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ

ಪಶುವೈದ್ಯ ನೇಮಕಾತಿ ಹಗರಣ: CBI ತನಿಖೆಗೆ ಒಪ್ಪಿಸಿ ಎಂದ ಸುರೇಶ್ ಕುಮಾರ್

ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ

ಡಿಕೆಶಿಗೆ ಹೈ ಸೆಕ್ಯೂರಿಟಿ:ದೆಹಲಿಯಲ್ಲಿ ವಿಶೇಷ ಭದ್ರತೆ ಇದೇ ಮೊದಲು

ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ತಿರುಗಿಬಿದ್ದ ಹೋಟೆಲ್ ಮಾಲೀಕರು