IND vs NZ: ನ್ಯೂಝಿಲೆಂಡ್ ತಂಡದ್ದು ಅಂತಿಂಥ ಗೆಲುವಲ್ಲ..!
India vs New Zealand, 2nd ODI: ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಗೆಲುವು ದಾಖಲಿಸಿ ನ್ಯೂಝಿಲೆಂಡ್ ತಂಡವು ಸರಣಿ ಗೆಲುವಿನ ಆಸೆಯನ್ನು ಜೀವಂತವಿರಿಸಿಕೊಂಡಿದೆ. ರಾಜ್ಕೋಟ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 284 ರನ್ಗಳಿಸಿದರೆ, ನ್ಯೂಝಿಲೆಂಡ್ ತಂಡವು ಈ ಗುರಿಯನ್ನು 47.3 ಓವರ್ಗಳಲ್ಲಿ ಚೇಸ್ ಮಾಡಿದೆ.
Updated on: Jan 15, 2026 | 7:47 AM

ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಕಿವೀಸ್ ಪಡೆ ಭಾರತೀಯ ಪಿಚ್ನಲ್ಲಿ ಐತಿಹಾಸಿಕ ಸಾಧನೆಯನ್ನು ಸಹ ಮಾಡಿದೆ. ಅಂದರೆ ಇದು ನ್ಯೂಝಿಲೆಂಡ್ ತಂಡದ್ದು ಅಂತಿಂಥ ಗೆಲುವಲ್ಲ.

ರಾಜ್ಕೋಟ್ನ ನಿರಂಜನ್ ಶಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮೈಕೆಲ್ ಬ್ರೇಸ್ವೆಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (112) ಅಜೇಯ ಶತಕ ಸಿಡಿಸಿದ್ದರು. ಈ ಶತಕದ ನೆರವಿನೊಂದಿಗೆ ಭಾರತ ತಂಡವು 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 284 ರನ್ ಕಲೆಹಾಕಿತು.

285 ರನ್ಗಳ ಸ್ಪರ್ಧಾತ್ಮಕ ಗುರಿ ಪಡೆದ ನ್ಯೂಝಿಲೆಂಡ್ ಪರ ಡೇರಿಲ್ ಮಿಚೆಲ್ ಅಜೇಯ 131 ರನ್ ಬಾರಿಸಿದರೆ, ವಿಲ್ ಯಂಗ್ 87 ರನ್ಗಳಿಸಿದರು. ಈ ಮೂಲಕ ಕಿವೀಸ್ ಪಡೆ 47.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 286 ರನ್ಗಳಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.

ವಿಶೇಷ ಎಂದರೆ ಇದು ಭಾರತದಲ್ಲಿ ನ್ಯೂಝಿಲೆಂಡ್ ತಂಡದ ಗರಿಷ್ಠ ರನ್ ಚೇಸ್ ಆಗಿದೆ. ಅಂದರೆ ಇದಕ್ಕೂ ಮುನ್ನ ಕಿವೀಸ್ ಪಡೆ ಭಾರತೀಯ ಪಿಚ್ನಲ್ಲಿ ಬೆನ್ನತ್ತಿ ಗೆದ್ದ ಗರಿಷ್ಠ ಸ್ಕೋರ್ 283. 2023 ರಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ 283 ರನ್ಗಳನ್ನು ಚೇಸ್ ಮಾಡಿರುವುದೇ ಶ್ರೇಷ್ಠ ಸಾಧನೆಯಾಗಿತ್ತು.

ಇದೀಗ ಭಾರತದಲ್ಲಿ ಬಲಿಷ್ಠ ಭಾರತ ತಂಡಕ್ಕೆ ಸೋಲುಣಿಸುವಲ್ಲಿ ನ್ಯೂಝಿಲೆಂಡ್ ತಂಡ ಯಶಸ್ವಿಯಾಗಿದೆ. ಅದು ಕೂಡ ಬರೋಬ್ಬರಿ 285 ರನ್ಗಳನ್ನು ಚೇಸ್ ಮಾಡುವ ಮೂಲಕ. ಈ ಚೇಸಿಂಗ್ನೊಂದಿಗೆ ಭಾರತೀಯ ಪಿಚ್ನಲ್ಲಿ ನ್ಯೂಝಿಲೆಂಡ್ ತಂಡವು ತನ್ನ ದಾಖಲೆಯನ್ನು ಪುನರ್ಸ್ಥಾಪಿಸಿದೆ.
