- TV9 Kannada Photo gallery Cricket photos Nitish Kumar Reddy Ruled Out Of India vs England ODI Series
IND vs ENG: ಟೀಮ್ ಇಂಡಿಯಾದಿಂದ ಸ್ಟಾರ್ ಆಟಗಾರ ಔಟ್!
India vs England ODI Series: ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಏಕದಿನ ಸರಣಿ ಆಡಲಿದೆ. ಮೂರು ಮ್ಯಾಚ್ಗಳ ಈ ಏಕದಿನ ಸರಣಿಯಿಂದ ಭಾರತ ತಂಡದ ಯುವ ಆಲ್ರೌಂಡರ್ ಹೊರಬಿದ್ದಿದ್ದಾರೆ. ಅವರ ಬದಲಿಗೆ ಅನುಭವಿ ಆಟಗಾರನಿಗೆ ಮಣೆ ಹಾಕಲಾಗಿದೆ.
Updated on:Jul 07, 2026 | 9:50 AM

ಇಂಗ್ಲೆಂಡ್ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಟೀಮ್ ಇಂಡಿಯಾ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಹೊರಬಿದ್ದಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ನಿತೀಶ್ ಕುಮಾರ್ ರೆಡ್ಡಿ ಚೇತರಿಸಿಕೊಳ್ಳಲು ಮತ್ತಷ್ಟು ಸಮಯ ತೆಗೆದುಕೊಳ್ಳಲಿದ್ದು, ಹೀಗಾಗಿ ಅವರನ್ನು ಈ ಸರಣಿಯಿಂದ ಕೈ ಬಿಡಲಾಗಿದೆ. (PC: Getty Images)

ಅಫ್ಘಾನಿಸ್ತಾನ್ ವಿರುದ್ಧದ ಅಂತಿಮ ಏಕದಿನ ಪಂದ್ಯದ ವೇಳೆ ನಿತೀಶ್ ಕುಮಾರ್ ರೆಡ್ಡಿ ಎಡಗಾಲಿನ ಸ್ನಾಯು ಸೆಳೆತದ ಸಮಸ್ಯೆಗೆ ಒಳಗಾಗಿದ್ದರು. ಈ ಗಾಯದ ಕಾರಣದಿಂದಾಗಿ ಅವರು ಇಂಗ್ಲೆಂಡ್ ಸರಣಿಯಿಂದ ಹೊರಬೀಳಬೇಕಾಗಿ ಬಂದಿದೆ. ಸದ್ಯ ಅವರು ಬೆಂಗಳೂರಿನ ಬಿಸಿಸಿಐ ‘ಸೆಂಟರ್ ಆಫ್ ಎಕ್ಸಲೆನ್ಸ್’ (CoE) ನಲ್ಲಿ ಚಿಕಿತ್ಸೆ ಮತ್ತು ಚೇತರಿಕೆ ಪಡೆಯುತ್ತಿದ್ದಾರೆ. (PC: Getty Images)

ಅತ್ತ ನಿತೀಶ್ ಕುಮಾರ್ ರೆಡ್ಡಿ ಹೊರಗುಳಿಯುವುದು ಖಚಿತವಾಗುತ್ತಿದ್ದಂತೆ, ಇಂಗ್ಲೆಂಡ್ನಲ್ಲಿ ಟಿ20 ಸರಣಿ ಆಡುತ್ತಿರುವ ಶಿವಂ ದುಬೆ ಅವರನ್ನು ಏಕದಿನ ತಂಡದಲ್ಲೂ ಮುಂದುವರಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ. ಭಾರತ ಏಕದಿನ ತಂಡದಲ್ಲಿ 2024 ರಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದ ಶಿವಂ ದುಬೆಗೆ ಇದೀಗ 2 ವರ್ಷಗಳ ಬಳಿಕ ಮತ್ತೆ ಅದೃಷ್ಟ ಖುಲಾಯಿಸಿದೆ. (PC: Getty Images)

ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿಯು ಜುಲೈ 14 ರಿಂದ ಶುರುವಾಗಲಿದೆ. ಮೊದಲ ಪಂದ್ಯವು ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದರೆ, ದ್ವಿತೀಯ ಪಂದ್ಯವು ಜುಲೈ 16 ರಂದು ಕಾರ್ಡಿಫ್ನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ಜರುಗಲಿದೆ. ಇನ್ನು ಮೂರನೇ ಪಂದ್ಯವು ಜುಲೈ 19 ರಂದು ಜರುಗಲಿದ್ದು, ಈ ಪಂದ್ಯಕ್ಕೆ ಲಂಡನ್ನ ಲಾರ್ಡ್ಸ್ ಮೈದಾನ ಆತಿಥ್ಯವಹಿಸಲಿದೆ.

ಭಾರತ ಏಕದಿನ ತಂಡ: ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್.
Published On - 9:46 am, Tue, 7 July 26




