- Kannada News Photo gallery Cricket photos Pak actress Sehar Shinwari’s tweet on team India triggers hilarious reactions Kannada News
ಗೆದ್ದೇ ಗೆಲ್ತೀವಿ ಅನ್ನೋ ನಂಬಿಕೆಯಲ್ಲಿ ಟ್ವೀಟ್ ಮಾಡಿದ ಪಾಕ್ ನಟಿ: ಈಗ ಫುಲ್ ಟ್ರೋಲ್
Sehar Shinwari: 18 ಎಸೆತಗಳಲ್ಲಿ 48 ರನ್ಗಳಿಸುವುದು ಕಷ್ಟಸಾಧ್ಯ ಎಂದೇ ಭಾವಿಸಿದ್ದ ಪಾಕ್ ಕ್ರಿಕೆಟ್ ಪ್ರೇಮಿಗಳು ವಿರಾಟ್ ಕೊಹ್ಲಿ ಆಘಾತ ನೀಡಿದ್ದರು. ಈ ಮೂಲಕ ಟೀಮ್ ಇಂಡಿಯಾಗೆ ರೋಚಕ ಜಯ ತಂದುಕೊಟ್ಟರು.
Updated on: Oct 25, 2022 | 3:54 PM

ಭಾರತ-ಪಾಕಿಸ್ತಾನ್ ನಡುವಣ ರಣರೋಚಕ ಪಂದ್ಯದಲ್ಲಿ ಟೀಮ್ ಇಂಡಿಯಾ ಅಂತಿಮ ಎಸೆತದಲ್ಲಿ ಗೆಲುವು ದಾಖಲಿಸಿತು. ವಿಶೇಷ ಎಂದರೆ 17 ಓವರ್ ತನಕ ಈ ಪಂದ್ಯವು ಪಾಕ್ ಪರವಿತ್ತು. ಆದರೆ 18ನೇ ಓವರ್ನಲ್ಲಿ ಅಬ್ಬರಿಸಲಾರಂಭಿಸಿದ ವಿರಾಟ್ ಕೊಹ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು.

ಆದರೆ 18 ಎಸೆತಗಳಲ್ಲಿ 48 ರನ್ಗಳಿಸುವುದು ಕಷ್ಟಸಾಧ್ಯ ಎಂದೇ ಭಾವಿಸಿದ್ದ ಪಾಕ್ ಕ್ರಿಕೆಟ್ ಪ್ರೇಮಿಗಳು ವಿರಾಟ್ ಕೊಹ್ಲಿ ಆಘಾತ ನೀಡಿದ್ದರು. ಈ ಮೂಲಕ ಟೀಮ್ ಇಂಡಿಯಾಗೆ ರೋಚಕ ಜಯ ತಂದುಕೊಟ್ಟರು.

ಅತ್ತ ಪಾಕಿಸ್ತಾನ್ ತಂಡವು ಈ ಪಂದ್ಯದಲ್ಲಿ ಗೆದ್ದೇ ಗೆಲ್ಲುತ್ತೆ ಎಂಬ ಭರವಸೆಯಲ್ಲಿ ಪಾಕ್ ನಟಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಚಾಲೆಂಜ್ ಕೂಡ ಹಾಕಿದ್ದರು. ಇದೀಗ ಅದನ್ನೇ ಇಟ್ಟುಕೊಂಡು ಟ್ರೋಲ್ ಪೇಜ್ಗಳು ನಟಿಯನ್ನು ಕಾಲೆಳೆಯುತ್ತಿದ್ದಾರೆ.

ಅಕ್ಟೋಬರ್ 23 ರಂದು ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿದರೆ, ನನ್ನ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುತ್ತೇನೆ. ಮತ್ತೆ ಯಾವತ್ತೂ ಟ್ವಿಟರ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಪಾಕ್ ನಟಿ ಸೆಹರ್ ಶಿನ್ವಾರಿ ಬರೆದುಕೊಂಡಿದ್ದರು.

ಆದರೆ ಮೆಲ್ಬೋರ್ನ್ನಲ್ಲಿ ಭಾನುವಾರ ಭಾರತ ತಂಡವು 4 ವಿಕೆಟ್ಗಳಿಂದ ಪಾಕಿಸ್ತಾನ್ ತಂಡವನ್ನು ಸೋಲಿಸಿತ್ತು. ಈ ವೇಳೆ ಗುಡ್ ಬೈ ಟ್ವಿಟರ್ ಎನ್ನುವ ಮೂಲಕ ಸೆಹರ್ ಶಿನ್ವಾರಿ ಕಾಣಿಸಿಕೊಂಡಿದ್ದರು.

ಆದರೆ ಆ ಬಳಿಕ ಕೂಡ ನಟಿ ಟ್ವಿಟರ್ನಲ್ಲಿ ಕೆಲ ಪೋಸ್ಟ್ಗಳನ್ನು ಹಂಚಿಕೊಂಡಿದ್ದರು. ಇತ್ತ ಇದನ್ನೇ ಕಾಯುತ್ತಿದ್ದ ಟ್ರೋಲ್ ಪೇಜ್ಗಳು ನಟಿಯನ್ನು ಕಿಚಾಯಿಸಲಾರಂಭಿಸಿದ್ದಾರೆ.

ಗೆಲ್ತೀವಿ ಅನ್ನೋ ಅತಿಯಾದ ಆತ್ಮವಿಶ್ವಾಸದಲ್ಲಿ ಮಾಡಿದ ಟ್ವೀಟ್ಗಳು ಇದೀಗ ಉಲ್ಟಾ ಹೊಡೆದು ಇದೀಗ ಸೆಹರ್ ಶಿನ್ವಾರಿ ಪೇಚಿಗೆ ಸಿಲುಕಿದ್ದಾರೆ.

TV9 Kannada
Read More




