AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಫ್ಯಾನ್ಸ್​ಗೆ ಗುಡ್​ ನ್ಯೂಸ್; ಬೆಂಗಳೂರಿನಲ್ಲೇ ನಡೆಯಲಿವೆ ಪಂದ್ಯಗಳು! ಆದ್ರೆ ಕಂಡೀಷನ್ ಅಪ್ಲೈ

RCB IPL 2026 Home Ground: ಐಪಿಎಲ್ 2026 ರಲ್ಲಿ ಆರ್​ಸಿಬಿ ತವರು ಪಂದ್ಯಗಳನ್ನು ಎಲ್ಲಿ ಆಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಕಳೆದ ವರ್ಷದ ಕಾಲ್ತುಳಿತದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತೆ ಹೆಚ್ಚಿಸಲು 4.5 ಕೋಟಿ ರೂ. ವೆಚ್ಚದಲ್ಲಿ ಎಐ ಕ್ಯಾಮೆರಾಗಳನ್ನು ಅಳವಡಿಸಲು ಆರ್​ಸಿಬಿ ಕೆಎಸ್‌ಸಿಎಗೆ ಪ್ರಸ್ತಾಪಿಸಿದೆ. ಈ ವೆಚ್ಚವನ್ನು ತಾನೇ ಭರಿಸುವುದಾಗಿಯೂ ತಿಳಿಸಿದೆ. ರಾಯ್‌ಪುರ್ ಮತ್ತು ಪುಣೆ ಪರ್ಯಾಯ ತವರು ಮೈದಾನಗಳಾಗಿ ಗುರುತಿಸಲ್ಪಟ್ಟಿವೆ.

ಪೃಥ್ವಿಶಂಕರ
|

Updated on: Jan 16, 2026 | 5:45 PM

Share
2026 ರ ಐಪಿಎಲ್ ಮಾರ್ಚ್​ ತಿಂಗಳ ಕೊನೆಯ ವಾರದಿಂದ ಆರಂಭವಾಗುವ ಸಾಧ್ಯತೆಗಳಿವೆ. ಈ ಲೀಗ್​ಗಾಗಿ ಎಲ್ಲಾ ಸಿದ್ಧತೆಗಳು ಕೂಡ ಅಂತಿಮಗೊಂಡಿದೆ. ಎಲ್ಲಾ 10 ಫ್ರಾಂಚೈಸಿಗಳು ಕೂಡ ಈಗಾಗಲೇ ತಯಾರಿಯಲ್ಲಿ ತೊಡಗಿವೆ. ಆದಾಗ್ಯೂ ಹಾಲಿ ಚಾಂಪಿಯನ್ ಆರ್​ಸಿಬಿ ಮಾತ್ರ ಯಾವ ಕ್ರೀಡಾಂಗಣದಲ್ಲಿ ತನ್ನ ತವರು ಪಂದ್ಯಗಳನ್ನು ಆಡಲಿದೆ ಎಂಬುದು ಇನ್ನು ಖಚಿತವಾಗಿಲ್ಲ.

1 / 8
ವಾಸ್ತವವಾಗಿ ಕಳೆದ ವರ್ಷ ಅಂದರೆ 2025 ರಲ್ಲಿ ಆರ್​ಸಿಬಿ ಸಂಭ್ರಮಾಚರಣೆಯಲ್ಲಿ ಉಂಟಾದ ಕಾಲ್ತುಳಿತದಿಂದ 11 ಅಮಾಯಕರು ಪ್ರಾಣಬಿಟ್ಟಿದ್ದರು. ಆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದುವರೆಗೆ ಯಾವುದೇ ಪಂದ್ಯಗಳು ನಡೆದಿಲ್ಲ. ಇದೀಗ ಮುಂಬರುವ ಐಪಿಎಲ್ ಪಂದ್ಯಗಳು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

2 / 8
ಇದೆಲ್ಲದರ ನಡುವೆ ಆರ್​ಸಿಬಿ ಫ್ರಾಂಚೈಸಿ ತನ್ನ ತವರು ಮೈದಾನಗಳನ್ನು ನಡೆಸಲು ಎರಡು ಮೈದಾನಗಳನ್ನು ಆಯ್ಕೆ ಮಾಡಿದೆ ಎಂತಲೂ ವರದಿಯಾಗಿತ್ತು. ಇದೀಗ ಇದೆಲ್ಲದರ ನಡುವೆ ಆರ್​ಸಿಬಿ ಫ್ರಾಂಚೈಸಿ ಚಿನ್ನಸ್ವಾಮಿ ಮೈದಾನದಲ್ಲಿ ತವರು ಪಂದ್ಯಗಳನ್ನು ನಡೆಸಲು ಉತ್ಸುಕತೆ ತೋರಿದೆ. ಆದರೆ ಪಂದ್ಯಗಳು ನಡೆಯಬೇಕೆಂದರೆ ಕೆಲವು ಷರತ್ತುಗಳನ್ನು ಪೂರ್ಣಗೊಳಿಸುವಂತೆ ಕೆಎಸ್​ಸಿಎ ಬಳಿ ಕೇಳಿದೆ.

3 / 8
ಜನವರಿ 16 ರಂದು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಆರ್​ಸಿಬಿ ಅದರಲ್ಲಿ, ‘ಕ್ರೀಡಾಂಗಣದಲ್ಲಿ 300 ರಿಂದ 350 ಎಐ ಕ್ಯಾಮೆರಾಗಳನ್ನು ಅಳವಡಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಬಳಿ ಔಪಚಾರಿಕವಾಗಿ ಪ್ರಸ್ತಾಪಿಸಲಾಗಿದೆ. ಈ ಕ್ಯಾಮೆರಾಗಳು ಕ್ರೀಡಾಂಗಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡುತ್ತವೆ ಮತ್ತು ಜನಸಂದಣಿಯ ನಿರ್ವಹಣೆಗೆ ಸಹಾಯ ಮಾಡುತ್ತವೆ.

4 / 8
ಫ್ರಾಂಚೈಸಿಯ ಪ್ರಕಾರ, ಈ ಕ್ಯಾಮೆರಾಗಳು ಕೆಎಸ್‌ಸಿಎ ಮತ್ತು ಭದ್ರತಾ ಸಂಸ್ಥೆಗಳು ಜನಸಂದಣಿಯನ್ನು ಮೇಲ್ವಿಚಾರಣೆ ಮಾಡಲು, ಕ್ರೀಡಾಂಗಣದ ಹೊರಗೆ ಸರತಿ ಸಾಲುಗಳನ್ನು ನಿರ್ವಹಿಸಲು ಮತ್ತು ಅಕ್ರಮವಾಗಿ ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸುವವರನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ.

5 / 8
ಆರ್​ಸಿಬಿ ಫ್ರಾಂಚೈಸಿ ಈ ಪ್ರಸ್ತಾವನೆಯನ್ನು ಕೆಎಸ್​ಸಿಎ ಮುಂದಿಟ್ಟಿರುವುದು ಮಾತ್ರವಲ್ಲದೆ, ಎಐ ಕ್ಯಾಮೆರಾಗಳನ್ನು ಅಳವಡಿಸಲು ತಗಲುವ ವೆಚ್ಚವನ್ನು ತಾನೇ ಬರಿಸುವುದಾಗಿ ತಿಳಿಸಿದೆ. ಕ್ಯಾಮೆರಾಗಳನ್ನು ಅಳವಡಿಸಲು ಬೇಕಾಗುವ ಸರಿಸುಮಾರು 4.5 ಕೋಟಿ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವುದಾಗಿ ಆರ್​ಸಿಬಿ ತಿಳಿಸಿದೆ.

6 / 8
ಇದೆಲ್ಲದರ ನಡುವೆ ಮುಂಬರುವ ಐಪಿಎಲ್​ನಲ್ಲಿ ತನ್ನ ತವರು ಪಂದ್ಯಗಳನ್ನು ಆರ್‌ಸಿಬಿ ಎರಡು ವಿಭಿನ್ನ ಕ್ರೀಡಾಂಗಣಗಳಲ್ಲಿ ಆಡಲಿದೆ ಎಂದು ವರದಿಯಾಗಿದೆ. ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಆರ್​ಸಿಬಿಯ ಎರಡು ಪಂದ್ಯಗಳನ್ನು ನಡೆಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಅವರೇ ಸ್ವತಃ ಘೋಷಿಸಿದ್ದಾರೆ.

7 / 8
ಹಾಗೆಯೇ ಉಳಿದ ಪಂದ್ಯಗಳನ್ನು ಮಹಾರಾಷ್ಟ್ರದ ಪುಣೆಯಲ್ಲಿ ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಫ್ರಾಂಚೈಸಿ ಈಗಾಗಲೇ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ನೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಪುಣೆ ಕ್ರೀಡಾಂಗಣವನ್ನು ಸಹ ಪರಿಶೀಲಿಸಿದೆ. ಆದಾಗ್ಯೂ, ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

8 / 8
ಗಿಲ್ಲಿ ನಟನ ಹುಟ್ಟೂರಲ್ಲಿ ಬ್ಯಾನರ್, ಕಟೌಟ್: ಹಳ್ಳಿ ಮಂದಿ ಖುಷಿ ನೋಡಿ..

ಲಕ್ಕುಂಡಿಯಲ್ಲಿ ಮೊದಲ ದಿನದ ಉತ್ಖನನ ಅಂತ್ಯ: ಅಧಿಕಾರಿ ಹೇಳಿದ್ದೇನು?

ಡಿಕೆಶಿಗೂ ಮೊದಲೇ ರಾಹುಲ್ ಗಾಂಧಿ ಭೇಟಿಯಾದ ಕೆಜೆ ಜಾರ್ಜ್

ಬಸ್​​ಗೆ ಹಿಂದಿನಿಂದ ಬೊಲೆರೋ ಪಿಕ್-ಅಪ್ ಡಿಕ್ಕಿ: ಚಾಲಕ ಬದುಕಿದ್ದೇ ಪವಾಡ

ಇದು ಯಾವುದೋ ಜಾತ್ರೆಯಲ್ಲ: ಹೋರಿ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ

‘ಅನ್ನ ಕದ್ದು ತಿಂದಿದ್ದೆ’; ಗಿಲ್ಲಿಯ ಹಳೆಯ ಕಥೆ ಕೇಳಿ ರಕ್ಷಿತಾ ಕಣ್ಣೀರು

ಜ್ವರ ಬಂದು ಬಾಯಿ ಕೆಟ್ಟಿತ್ತು: ಕಾಲ್ ಸೂಪ್, ನಾಟಿ ಚಿಕನ್ ಚಪ್ಪರಿಸಿದ ಸಿಎಂ

ಬೈಕ್​​ಗೆ ಗುದ್ದಿದ ಕಾರು: 10 ಅಡಿ ಎತ್ತರಕ್ಕೆ ಹಾರಿಬಿದ್ದ ಸವಾರ!

ಸ್ಟೈಲಿಶ್ ಆಗಿ ಗಿಲ್ಲಿಗೆ ಆಲ್​ ದಿ ಬೆಸ್ಟ್ ಹೇಳಿದ ಶಿವಣ್ಣ; ವಿಡಿಯೋ ನೋಡಿ

ಸಿದ್ದರಾಮಯ್ಯ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ, ಮುಂದೇನಾಯ್ತು?