IPL 2026: ಈ ಬಾರಿಯ ಐಪಿಎಲ್ನಲ್ಲಿ RCBಗೆ ‘ಗೋಲ್ಡನ್’ ಗೌರವ!
IPL 2026: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸದ್ಯಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 12 ರವರೆಗೆ ನಡೆಯಲಿರುವ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಅದರಂತೆ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ.
Updated on: Mar 16, 2026 | 9:00 AM

IPL 2026: ಐಪಿಎಲ್ನ ಹಾಲಿ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಈ ಬಾರಿ ತನ್ನ ಜೆರ್ಸಿಯ ಮೇಲೆ ಚಿನ್ನದ ಬಣ್ಣದ ಐಪಿಎಲ್ ಲೋಗೋ (Golden IPL Logo) ಧರಿಸಲಿದೆ. ಇನ್ನುಳಿದ 9 ತಂಡಗಳು ಸಾಧಾರಣ ಐಪಿಎಲ್ ಲೋಗೋನಲ್ಲಿ ಕಾಣಿಸಿಕೊಳ್ಳಲಿದೆ.

ಐಪಿಎಲ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ತಂಡವನ್ನು ಗೌರವಿಸಲು ಈ ವಿಶೇಷ ಸಂಪ್ರದಾಯವನ್ನು ಅನುಸರಿಸಲಾಗುತ್ತಿದೆ. ಅದರಂತೆ ಕಳೆದ ಬಾರಿಯ ಚಾಂಪಿಯನ್ ಆರ್ಸಿಬಿ ತಂಡವು ಈ ಬಾರಿ ಗೋಲ್ಡನ್ ಐಪಿಎಲ್ ಲೋಗೋದೊಂದಿಗೆ ಕಣಕ್ಕಿಳಿಯಲಿದೆ.

ಹಾಗೆಯೇ ಈ ಬಾರಿಯ ಆರ್ಸಿಬಿ ತಂಡದ ಜೆರ್ಸಿ ಮೇಲೆ ಒಂದು ಚಿನ್ನದ ನಕ್ಷತ್ರವಿರಲಿದ್ದು, ಇದು ತಂಡದ ಮೊದಲ ಐಪಿಎಲ್ ಟ್ರೋಫಿ ಗೆಲುವನ್ನು ಸೂಚಿಸುತ್ತದೆ. ಅಂದರೆ ಇದೇ ಮೊದಲ ಬಾರಿಗೆ ಆರ್ಸಿಬಿ ಸ್ಟಾರ್ ಹಾಗೂ ಚಾಂಪಿಯನ್ ಬ್ಯಾಡ್ಜ್ನೊಂದಿಗೆ ಕಣಕ್ಕಿಳಿಯುತ್ತಿರುವುದು ವಿಶೇಷ.

ಕಳೆದ ವರ್ಷ ಅಹಮದಾಬಾದ್ನಲ್ಲಿ ನಡೆದ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ರಜತ್ ಪಾಟಿದಾರ್ ನಾಯಕತ್ವದ ಆರ್ಸಿಬಿ, 18 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಿತ್ತು. ಈ ಐತಿಹಾಸಿಕ ಗೆಲುವಿನ ಸಂಭ್ರಮದ ಭಾಗವಾಗಿ ಈ 'ಗೋಲ್ಡನ್ ಜೆರ್ಸಿ' ವಿನ್ಯಾಸಗೊಳಿಸಲಾಗಿದೆ.

ಇನ್ನು 2026ರ ಐಪಿಎಲ್ (IPL 2026) ಮಾರ್ಚ್ 28, 2026 ರಿಂದ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ.
