AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CSK vs RR: ಸಿಎಸ್​ಕೆ ಪರ ಮೊದಲ ಪಂದ್ಯದಲ್ಲೇ ಎಡವಿದ ಸಂಜು ಸ್ಯಾಮ್ಸನ್

Sanju Samson's Disappointing CSK Debut: ಸಾಕಷ್ಟು ನಿರೀಕ್ಷೆಗಳೊಂದಿಗೆ ಸಿಎಸ್‌ಕೆ ತಂಡಕ್ಕೆ ಸೇರಿದ್ದ ಸಂಜು ಸ್ಯಾಮ್ಸನ್, ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ತಮ್ಮ ಮೊದಲ ಪಂದ್ಯದಲ್ಲಿ ಪ್ರಭಾವ ಬೀರಲು ವಿಫಲರಾದರು. ಕೇವಲ 6 ರನ್ ಗಳಿಸಿ ನಿರಾಸೆ ಮೂಡಿಸಿದರು. ತಮ್ಮ ಹಳೆಯ ತಂಡದ ವಿರುದ್ಧ ಅಬ್ಬರಿಸುವ ಮತ್ತು ಎಂ.ಎಸ್. ಧೋನಿ ಅನುಪಸ್ಥಿತಿಯಲ್ಲಿ ಜವಾಬ್ದಾರಿ ವಹಿಸಿಕೊಳ್ಳುವ ನಿರೀಕ್ಷೆ ಹುಸಿಯಾಯಿತು. ಇದು ಸಿಎಸ್‌ಕೆ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಪೃಥ್ವಿಶಂಕರ
|

Updated on: Mar 30, 2026 | 8:03 PM

Share
ಸಾಕಷ್ಟು ನಿರೀಕ್ಷೆಗಳನ್ನು ಹೊತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎಂಟ್ರಿಕೊಟ್ಟಿದ್ದ ಸಂಜು ಸ್ಯಾಮ್ಸನ್, ತಂಡದ ಪರ ಆಡಿದ ಮೊದಲ ಪಂದ್ಯದಲ್ಲಿ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ 2026 ರ ಮೂರನೇ ಪಂದ್ಯದಲ್ಲಿ ಸಿಎಸ್​ಕೆ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್ ಕೇವಲ ಒಂದಂಕಿಗೆ ವಿಕೆಟ್ ಒಪ್ಪಿಸಿದ್ದಾರೆ.

1 / 5
ಸಂಜು ಸ್ಯಾಮ್ಸನ್ ಆಗಮನದಿಂದ ಸಿಎಸ್​ಕೆಯ ಓಪನಿಂಗ್ ಜೋಡಿಯಲ್ಲಿ ಬದಲಾವಣೆಗಳಾಗಿತ್ತು. ಕಳೆದ ಆವೃತ್ತಿಯಲ್ಲಿ ರುತುರಾಜ್ ಜೊತೆ ಆಯುಷ್ ಮ್ಹಾತ್ರೆ ಆರಂಭಿಕರಾಗಿದ್ದರು. ಆದರೆ ಈ ಆವೃತ್ತಿಯಲ್ಲಿ ರುತುರಾಜ್ ಜೊತೆ ಸಂಜು ಇನ್ನಿಂಗ್ಸ್ ಆರಂಭಿಸಿದ್ದರು. ಆದರೆ ಮೊದಲ ಪಂದ್ಯದಲ್ಲಿ ಸಂಜುಗೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

2 / 5
ಮೊದಲ ಓವರ್​ನಿಂದಲೂ ರನ್ ಕಲೆಹಾಕಲು ಪರದಾಡಿದ ಸಂಜು, ಆರ್ಚರ್ ಬೌಲ್ ಮಾಡಿದ ಮೊದಲ ಓವರ್​ನಲ್ಲಿ ಸ್ಲಿಪ್​ನಲ್ಲಿ ಬೌಂಡರಿ ಬಾರಿಸಿದ್ದರು. ಒಂದು ವೇಳೆ ರಾಜಸ್ಥಾನ್ ಸ್ಲಿಪ್​ನಲ್ಲಿ ಫಿಲ್ಡರ್​ನ ಪೋಸ್ಟ್ ಮಾಡಿದ್ದರೆ, ಸಂಜು ಆಗಲೇ ಔಟಾಗಬೇಕಿತ್ತು. ಆದರೆ ಫಿಲ್ಡರ್ ಇಲ್ಲದ ಕಾರಣ ಸಂಜುಗೆ ಜೀವದಾನ ಸಿಕ್ಕಿತ್ತು. ಆದರೆ ಅದನ್ನು ಬಳಸಿಕೊಳ್ಳಲು ಸಂಜು ವಿಫಲರಾದರು.

3 / 5
ವಾಸ್ತವವಾಗಿ ಸಂಜು ಸ್ಯಾಮ್ಸನ್ ಕಳೆದ ಆವೃತ್ತಿಯವರೆಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಈ ಫ್ರಾಂಚೈಸಿ ಪರ ಸಾಕಷ್ಟು ವರ್ಷ ಐಪಿಎಲ್ ಆಡಿದ್ದ ಸಂಜು ಅವರನ್ನು ಮಿನಿ ಹರಾಜಿಗೂ ಮುನ್ನ ಸಿಎಸ್​ಕೆ, ಟ್ರೇಡ್ ಮೂಲಕ ಖರೀದಿ ಮಾಡಿತ್ತು.

4 / 5
ಹೀಗಾಗಿ ತನ್ನ ಮಾತೃ ತಂಡದ ವಿರುದ್ಧ ಸಂಜು ಸ್ಯಾಮ್ಸನ್ ಅಬ್ಬರಿಸುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಅಲ್ಲದೆ ಅನುಭವಿ ಎಂಎಸ್ ಧೋನಿ ತಂಡದಲ್ಲಿ ಇಲ್ಲದಿರುವಾಗ, ಆ ಜವಾಬ್ದಾರಿಯನ್ನು ಸಂಜು ವಹಿಸಿಕೊಂಡು ತಂಡವನ್ನು ಮುನ್ನಡೆಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಂಜು ಈ ಪಂದ್ಯದಲ್ಲಿ 7 ಎಸೆತಗಳನ್ನು ಎದುರಿಸಿ, ಒಂದು ಬೌಂಡರಿ ಸಹಿತ 6 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

5 / 5
Follow Us
BJP ರೋಡ್ ಶೋಗೆ ಕಾಂಗ್ರೆಸ್ ಧ್ವಜ ಹಿಡಿದು 'ಕೈ' ಕಾರ್ಯಕರ್ತರ ಎಂಟ್ರಿ!

ಕೈ ಮುಖಂಡನ ಹತ್ಯೆ ಯತ್ನ: ಚಾಕುವಿನಿಂದ ಚುಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗ್ಯಾಸ್ ರೀಫಿಲ್ ಮಾಡುವಾಗ ಏಕಾಏಕಿ ಸಿಲಿಂಡರ್​ ಸ್ಫೋಟ: ಮನೆ ಛಿದ್ರಛಿದ್ರ

ಐಪಿಎಲ್ ಮ್ಯಾಚ್ ನೋಡಲು ಹೋಗುವ ಕ್ರಿಕೆಟ್ ಅಭಿಮಾನಿಗಳೇ ಈ ಮಹಿಳೆಯ ಮಾತು ಕೇಳಿ

ಸೇತುವೆಯಿಂದ ಹಳ್ಳಕ್ಕೆ ಬಿದ್ದ ಬಸ್‌: ಪ್ರಯಾಣಿಕರು ಬದುಕುಳಿದಿದ್ದೇ ಪವಾಡ

ಅಪಘಾತದಲ್ಲಿ ನವ ದಂಪತಿ ಸ್ಥಳದಲ್ಲೇ ದುರ್ಮರಣ: ಆಪ್ತರ ನೋವಿನ ಮಾತು

ಹೋಟೆಲ್​​ ಮಾಲೀಕರಿಗೆ ಗುಡ್​​ನ್ಯೂಸ್​​ ಕೊಟ್ಟ ಸಚಿವ ಮುನಿಯಪ್ಪ

ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ 5 ದಿನ ಕ್ಯಾಂಪೇನ್​​​ಗೆ ಶ್ರೀರಾಮುಲು ವ್ಯಂಗ್ಯ

ಚಕ್ರದ ಅಡಿಯಲ್ಲಿ ಸಿಲುಕಿದ ಕರು
ಚಕ್ರದ ಅಡಿಯಲ್ಲಿ ಸಿಲುಕಿದ ಕರು
ಮಂಟಪವನ್ನೇ ಹಾರದಂತೆ ತಡೆದವನು ಎಂದಾದರೂ ಪತ್ನಿ ಕೈ ಬಿಡುವುದುಂಟೇ!