AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ವಿಶ್ವಕಪ್​ಗೂ ಮುನ್ನ ಸಂಜು ಸ್ಯಾಮ್ಸನ್​ಗೆ ಕೊನೆಯ ಅವಕಾಶ

Sanju Samson's T20 World Cup Hope: ಟಿ20 ವಿಶ್ವಕಪ್ ಸಮೀಪಿಸುತ್ತಿರುವಾಗ, ಸಂಜು ಸ್ಯಾಮ್ಸನ್ ಅವರ ಕಳಪೆ ಫಾರ್ಮ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ನ್ಯೂಜಿಲೆಂಡ್ ಸರಣಿಯಲ್ಲಿ ವೈಫಲ್ಯ ಕಂಡಿದ್ದ ಸಂಜುಗೆ, ಇಶಾನ್ ಕಿಶನ್ ಭರ್ಜರಿ ಪ್ರದರ್ಶನ ನೀಡಿ ಪೈಪೋಟಿ ಒಡ್ಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯವು ಸಂಜುಗೆ ಟಿ20 ವಿಶ್ವಕಪ್ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯಲು ಅಂತಿಮ ಅವಕಾಶವಾಗಿದೆ. ಈ ಪಂದ್ಯದಲ್ಲಿ ಅಬ್ಬರಿಸಿದರೆ ಮಾತ್ರ ಅವರಿಗೆ ತಂಡದಲ್ಲಿ ಸ್ಥಾನ ಸಿಗಬಹುದು.

ಪೃಥ್ವಿಶಂಕರ
|

Updated on: Feb 03, 2026 | 3:51 PM

Share
ಟಿ20 ವಿಶ್ವಕಪ್ ಸಮೀಪಿಸುತ್ತಿರುವ ಬೆನ್ನಲ್ಲೇ ಪ್ರತಿಯೊಬ್ಬ ಟೀಂ ಇಂಡಿಯಾ ಅಭಿಮಾನಿಗೆ ಕಾಡುತ್ತಿರುವ ಪ್ರಶ್ನೆ ಎಂದರೆ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಫಾರ್ಮ್​ ಕಂಡುಕೊಳ್ಳುವುದು ಯಾವಾಗ? ಎಂಬುದು. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಐದು ಪಂದ್ಯಗಳನ್ನಾಡಿದ್ದ ಸಂಜುಗೆ ಒಂದೇ ಒಂದು ಅರ್ಧಶತಕ ಬಾರಿಸಲು ಸಾಧ್ಯವಾಗಿರಲಿಲ್ಲ.

1 / 5
ಆದರೆ ತಿಲಕ್ ವರ್ಮಾ ಇಂಜುರಿಯಿಂದಾಗಿ ತಂಡ ಸೇರಿಕೊಂಡಿದ್ದ ಇಶಾನ್ ಕಿಶನ್ ಭರ್ಜರಿ ಪ್ರದರ್ಶನ ನೀಡಿದ್ದರು. ಸರಣಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕ ಕೂಡ ಬಾರಿಸಿದರು. ಪರಿಣಾಮವಾಗಿ, ಸಂಜು ಸ್ಯಾಮ್ಸನ್ ಬದಲಿಗೆ ಕಿಶನ್​ಗೆ ತಂಡದಲ್ಲಿ ಅವಕಾಶ ಕೊಡಬೇಕೆಂಬ ಕೂಗು ಜೋರಾಗಿದೆ. ಇದೆಲ್ಲದರ ನಡುವೆ ಟಿ20 ವಿಶ್ವಕಪ್ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಲು ಸಂಜುಗೆ ಕೊನೆಯ ಅವಕಾಶವೊಂದಿದೆ.

2 / 5
ವಾಸ್ತವವಾಗಿ ನಾಳೆ ಅಂದರೆ ಫೆಬ್ರವರಿ 4 ರ ಬುಧವಾರದಂದು ನವಿ ಮುಂಬೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದು ಅಭ್ಯಾಸ ಪಂದ್ಯವಾಗಿದ್ದರೂ, ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ವರದಿಗಳ ಪ್ರಕಾರ, 35,000 ಟಿಕೆಟ್‌ಗಳು ಮಾರಾಟವಾಗಿವೆ, ಅಂದರೆ ಹೌಸ್ ಫುಲ್ ಆಗುವ ಸಾಧ್ಯತೆಯಿದೆ. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ಗೆ ಆಡುವ ಅವಕಾಶ ನೀಡಬಹುದು. ದಕ್ಷಿಣ ಆಫ್ರಿಕಾ ವಿರುದ್ಧ ಅವರು ಸ್ಫೋಟಕ ಇನ್ನಿಂಗ್ಸ್ ಆಡಿದರೆ, ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗಬಹುದು.

3 / 5
ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಕಳಪೆ ಪ್ರದರ್ಶನ ನೀಡಿದ್ದರು. ಐದು ಪಂದ್ಯಗಳಲ್ಲಿ 9.2 ಬ್ಯಾಟಿಂಗ್ ಸರಾಸರಿಯೊಂದಿಗೆ ಕೇವಲ 46 ರನ್ ಗಳಿಸಿದ್ದರು. ಮತ್ತೊಂದೆಡೆ, ಇಶಾನ್ ಕಿಶನ್ ನಾಲ್ಕು ಪಂದ್ಯಗಳಲ್ಲಿ 53.75 ಸರಾಸರಿಯಲ್ಲಿ 215 ರನ್ ಗಳಿಸುವ ಮೂಲಕ ಆಡುವ XI ನಲ್ಲಿ ತಮ್ಮ ಹಕ್ಕು ಬಲಪಡಿಸಿಕೊಂಡಿದ್ದಾರೆ.

4 / 5
ಈಗ ಸಂಜು ಟಿ20 ವಿಶ್ವಕಪ್ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಬೇಕೆಂದರೆ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಲೇಬೇಕಿದೆ. ಈ ಪಂದ್ಯದಲ್ಲಿ ಸಂಜು ರನ್ ಗಳಿಸಿದರೆ, ಆರಂಭಿಕ ಸ್ಥಾನವನ್ನು ಪಡೆಯಬಹುದು. ಟೀಂ ಇಂಡಿಯಾ ಆರಂಭದಲ್ಲಿ USA ಮತ್ತು ನಮೀಬಿಯಾ ವಿರುದ್ಧ ಪಂದ್ಯಗಳನ್ನು ಆಡಲಿದೆ. ಈ ಎರಡು ತಂಡಗಳ ವಿರುದ್ಧ ರನ್ ಗಳಿಸುವುದು ಸಂಜು ಸ್ಯಾಮ್ಸನ್‌ಗೆ ಸುಲಭವಾಗುತ್ತದೆ. ಹೀಗಾಗಿ ಸ್ಯಾಮ್ಸನ್ ಆಫ್ರಿಕಾ ವಿರುದ್ಧ ಹೇಗೆ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

5 / 5
ಯಶ್ ತಾಯಿ ಮಾಡಿದ ಆರೋಪ ತಳ್ಳಿಹಾಕಿದ ಪಿಡಿಒ ನಟರಾಜ್; ವಿಡಿಯೋ ನೋಡಿ..

ಚೀಟಿ ಹೆಸರಲ್ಲಿ 4 ಕೋಟಿ ಮಕ್ಮಲ್​​ ಟೋಪಿ: ಕಣ್ಣೀರು ಹಾಕಿದ ಸಂತ್ರಸ್ತರು

ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ 70ಕ್ಕೂ ಹೆಚ್ಚು ಗೋವು ರಕ್ಷಣೆ

ರೆಸಾರ್ಟ್​​ಗಾಗಿ ವೈದ್ಯನಿಂದ 2 ಎಕ್ರೆ ಪ್ರದೇಶದಲ್ಲಿದ್ದ ಮರಗಳ ಮಾರಣಹೋಮ!

ಮಹಿಳೆ ಅಕ್ರಮ ಸಂಬಂಧ ಪ್ರಕರಣದ ಬಗ್ಗೆ ಬಿಗ್​​​ ಅಪ್ಡೇಟ್​​ ನೀಡಿದ ಪೊಲೀಸರು

ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ

ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ

ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ

ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?

ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?