AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರಿಂದಲೂ ಸಾಧ್ಯವಾಗದ ಹೊಸ ವಿಶ್ವ ದಾಖಲೆ ಬರೆದ  ಶಾಕಿಬ್ ಅಲ್ ಹಸನ್..!

Shakib Al Hasan World Record: ಬಾಂಗ್ಲಾದೇಶ್ ತಂಡದ ಮಾಜಿ ನಾಯಕ ಶಾಕಿಬ್ ಅಲ್ ಹಸನ್ ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಈವರೆಗೆ ಯಾರೂ ಸಹ ಮಾಡಿರದ ದಾಖಲೆ ಬರೆಯುವ ಮೂಲಕ ಎಂಬುದು ವಿಶೇಷ. ಶಾಕಿಬ್ ಬರೆದಿರುವ ನ್ಯೂ ವರ್ಲ್ಡ್​ ರೆಕಾರ್ಡ್​ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

ಝಾಹಿರ್ ಯೂಸುಫ್
|

Updated on: Aug 25, 2025 | 10:25 AM

Share
ಟಿ20 ಕ್ರಿಕೆಟ್ ಇತಿಹಾಸದಲ್ಲಿ 500+ ವಿಕೆಟ್ ಪಡೆದಿರುವುದು ಕೇವಲ 5 ಬೌಲರ್​ಗಳು ಮಾತ್ರ. ಈ ಪಟ್ಟಿಯಲ್ಲಿ ರಶೀದ್ ಖಾನ್ ಅಗ್ರಸ್ಥಾನದಲ್ಲಿದ್ದರೆ, ಇದೀಗ ಐದನೇ ಸ್ಥಾನದಲ್ಲಿ ಶಾಕಿಬ್ ಅಲ್ ಹಸನ್ ಕಾಣಿಸಿಕೊಂಡಿದ್ದಾರೆ. ಅದು ಸಹ 502 ವಿಕೆಟ್​ಗಳೊಂದಿಗೆ ಎಂಬುದು ವಿಶೇಷ.

1 / 6
ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಪರ ಕಣಕ್ಕಿಳಿಯುತ್ತಿರುವ ಶಾಕಿಬ್ ಅಲ್ ಹಸನ್, ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ವಿರುದ್ಧದ ಪಂದ್ಯದಲ್ಲಿ 2 ಓವರ್​ಗಳಲ್ಲಿ 11 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ.

2 / 6
ಈ ಮೂರು ವಿಕೆಟ್​ಗಳೊಂದಿಗೆ ಶಾಕಿಬ್ ಅಲ್ ಹಸನ್ ಟಿ20 ಕ್ರಿಕೆಟ್​ನಲ್ಲಿ 500 ವಿಕೆಟ್​ಗಳ ಮೈಲುಗಲ್ಲು ಮುಟ್ಟಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ 500 ವಿಕೆಟ್​ಗಳ ಸಾಧನೆ ಮಾಡಿದ ಬಾಂಗ್ಲಾದೇಶದ ಮೊದಲ ಬೌಲರ್ ಹಾಗೂ ವಿಶ್ವದ 5ನೇ ಆಟಗಾರ ಎನಿಸಿಕೊಂಡಿದ್ದಾರೆ.

3 / 6
ಇದರೊಂದಿಗೆ ಟಿ20 ಕ್ರಿಕೆಟ್​ನಲ್ಲಿ 500+ ವಿಕೆಟ್ ಪಡೆದ ವಿಶ್ವದ ಮೊದಲ ಎಡಗೈ ಬೌಲರ್ ಎಂಬ ಹೆಗ್ಗಳಿಕೆಯನ್ನು ಸಹ ಶಾಕಿಬ್ ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ 500+ ವಿಕೆಟ್ ಹಾಗೂ 7000 ರನ್​ ಗಳಿಸಿರುವ ವಿಶ್ವದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆಯನ್ನು ಕೂಡ ಬರೆದಿದ್ದಾರೆ.

4 / 6
ಟಿ20 ಕ್ರಿಕೆಟ್​ನಲ್ಲಿ ಈವರೆಗೆ 448 ಟಿ20 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಶಾಕಿಬ್ ಅಲ್ ಹಸನ್ 9507 ಎಸೆತಗಳನ್ನು ಎಸೆದು 502 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 419 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಅವರು ಒಟ್ಟು 7574 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ 7 ಸಾವಿರ ರನ್ ಹಾಗೂ 500+ ವಿಕೆಟ್ ಕಬಳಿಸಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.

5 / 6
ಇನ್ನು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಅಫ್ಘಾನಿಸ್ತಾನದ ರಶೀದ್ ಖಾನ್ ಹೆಸರಿನಲ್ಲಿದೆ. 483 ಟಿ20 ಇನಿಂಗ್ಸ್​ ಗಳಲ್ಲಿ ಬೌಲಿಂಗ್ ಮಾಡಿರುವ ರಶೀದ್ ಖಾನ್ ಈವರೆಗೆ 660 ವಿಕೆಟ್​​ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟಿ20 ಇತಿಹಾಸದಲ್ಲೇ 650+ ವಿಕೆಟ್ ಪಡೆದ ಏಕೈಕ ಬೌಲರ್​ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

6 / 6
Follow Us
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ

ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು

ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?

ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ

ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ

ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ

ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?

ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!

ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​

ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ