AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2026 Final: ಮೊಟ್ಟ ಮೊದಲ ತಂಡ; ಫೈನಲ್ ಗೆದ್ದು ಇತಿಹಾಸ ಬದಲಿಸಿದ ಆರ್​ಸಿಬಿ

WPL 2026, RCB Crowned Champions: 2026 ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸ್ಮೃತಿ ಮಂಧಾನ ನಾಯಕತ್ವದ ಆರ್​ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿತು. ನೇರವಾಗಿ ಫೈನಲ್‌ಗೇರಿದ ತಂಡಗಳು ಟ್ರೋಫಿ ಗೆಲ್ಲುವುದಿಲ್ಲ ಎಂಬ ಇತಿಹಾಸವನ್ನು ಮುರಿದು, ಆರ್​ಸಿಬಿ ಹೊಸ ಮೈಲುಗಲ್ಲು ಸ್ಥಾಪಿಸಿತು. ಮಂಧಾನ ಹಾಗೂ ಜಾರ್ಜಿಯಾ ವಾಲ್ ಅವರ ಅರ್ಧಶತಕಗಳು ಗೆಲುವಿಗೆ ಕಾರಣವಾದವು. ಇದು RCB ಯ ಎರಡನೇ WPL ಪ್ರಶಸ್ತಿ.

ಪೃಥ್ವಿಶಂಕರ
|

Updated on: Feb 06, 2026 | 6:30 AM

Share
2026 ರ ಮಹಿಳಾ ಪ್ರೀಮಿಯರ್ ಲೀಗ್ ರಣರೋಚಕ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಯಿತು. ಎರಡು ಬಲಿಷ್ಠ ತಂಡಗಳ ನಡುವೆ ನಡೆದ ಈ ಫೈನಲ್ ಕಾಳಗವನ್ನು ಜಯಿಸುವಲ್ಲಿ ಸ್ಮೃತಿ ಮಂಧಾನ ಪಡೆ ಯಶಸ್ವಿಯಾಯಿತು. ಇಡೀ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆರ್​ಸಿಬಿ ಲೀಗ್ ಹಂತದಲ್ಲಿ 5 ಪಂದ್ಯಗಳನ್ನು ಗೆದ್ದು ನೇರವಾಗಿ ಫೈನಲ್​ಗೇರಿತ್ತು.

1 / 7
ಇದೀಗ ಫೈನಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸುವುದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 203 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಪರ  ನಾಯಕಿ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವಾಲ್ ಗೆಲುವಿನ ಅರ್ಧಶತಕ ಬಾರಿಸಿ ತಂಡವನ್ನು ಚಾಂಪಿಯನ್ ಮಾಡಿದರು.

2 / 7
ಈ ಫೈನಲ್ ಪಂದ್ಯದ ಗೆಲುವಿನೊಂದಿಗೆ ಆರ್​ಸಿಬಿ, ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಸಂಪ್ರದಾಯವನ್ನು ಮುರಿದು ಹೊಸ ಇತಿಹಾಸ ರಚಿಸಿದೆ. ವಾಸ್ತವವಾಗಿ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನೇರವಾಗಿ ಫೈನಲ್​ಗೇರಿದ ತಂಡವು ಇದುವರೆಗೆ ಒಮ್ಮೆಯೂ ಪ್ರಶಸ್ತಿ ಗೆದ್ದಿರಲಿಲ್ಲ. ಆದರೆ ನಾಲ್ಕನೇ ಆವೃತ್ತಿಯಲ್ಲಿ ನೇರವಾಗಿ ಫೈನಲ್​ಗೇರಿದ್ದ ಆರ್​ಸಿಬಿ ಟ್ರೋಫಿ ಎತ್ತಿಹಿಡಿಯುವುದರಲ್ಲೂ ಯಶಸ್ವಿಯಾಯಿತು.

3 / 7
2023 ರಲ್ಲಿ ನಡೆದಿದ್ದ ಮಹಿಳಾ ಪ್ರೀಮಿಯರ್ ಲೀಗ್ ಮೊದಲ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ದವು. ಇದರಲ್ಲಿ ಡೆಲ್ಲಿ ನೇರವಾಗಿ ಫೈನಲ್​ ಪ್ರವೇಶಿಸಿದ್ದರೆ, ಮುಂಬೈ ತಂಡ ಎಲಿಮಿನೇಟರ್​ನಲ್ಲಿ ಯುಪಿ ವಾರಿಯರ್ಸ್​ ತಂಡವನ್ನು ಮಣಿಸಿ ಫೈನಲ್​ಗೇರಿತ್ತು. ಈ ಫೈನಲ್‌ನಲ್ಲಿ ಮುಂಬೈ ಜಯಭೇರಿ ಬಾರಿಸಿತ್ತು.

4 / 7
2024 ರಲ್ಲಿ ನಡೆದಿದ್ದ ಎರಡನೇ ಆವೃತ್ತಿಯಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ನೇರವಾಗಿ ಫೈನಲ್​ಗೆ ಅರ್ಹತೆ ಪಡೆದಿತ್ತು. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲಿಮಿನೇಟರ್​ನಲ್ಲಿ ಅಂದಿನ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಮೊಟ್ಟ ಮೊದಲ ಬಾರಿಗೆ ಫೈನಲ್ ಆಡಿತ್ತು. ಆ ಪಂದ್ಯವನ್ನು ಆರ್​ಸಿಬಿ ಗೆದ್ದುಕೊಂಡು ಟ್ರೋಫಿ ಎತ್ತಿಹಿಡಿದಿತ್ತು.

5 / 7
ಕಳೆದ ಆವೃತ್ತಿಯಲ್ಲಿ ಅಂದರೆ 2025 ರ ಮಹಿಳಾ ಪ್ರೀಮಿಯರ್ ಲೀಗ್​ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಹಂತದಲ್ಲಿ ನೀಡಿದ ಸೂಪರ್ ಪ್ರದರ್ಶನದಿಂದಾಗಿ ನೇರವಾಗಿ ಫೈನಲ್​ ಪ್ರವೇಶಿಸಿತ್ತು. ಇತ್ತ ಎಲಿಮಿನೇಟರ್​ನಲ್ಲಿ ಗುಜರಾತ್ ಜೈಂಟ್ಸ್​ ತಂಡವನ್ನು ಮಣಿಸಿದ್ದ ಮುಂಬೈ ಇಂಡಿಯನ್ಸ್ ತಂಡ ಎರಡನೇ ಬಾರಿಗೆ ಫೈನಲ್​ಗೇರಿತ್ತು. ಫೈನಲ್ ಪಂದ್ಯದಲ್ಲಿ ಮತ್ತೆ ಡೆಲ್ಲಿ ತಂಡವನ್ನು ಸೋಲಿಸಿದ್ದ ಮುಂಬೈ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿತ್ತು.

6 / 7
ಆದರೆ 2026 ರ ಆವೃತ್ತಿಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತು. ಲೀಗ್ ಹಂತದಲ್ಲಿ 5 ಪಂದ್ಯಗಳನ್ನು ಗೆಲ್ಲುವ ಮೂಲಕ ಆರ್​ಸಿಬಿ ಫೈನಲ್​ಗೇರಿತ್ತು. ಇತ್ತ ಡೆಲ್ಲಿ ಎಲಿಮಿನೇಟರ್ ಗೆದ್ದು ಫೈನಲ್​ ಟಿಕೆಟ್ ಪಡೆದಿತ್ತು. ಹಿಂದಿನ ದಾಖಲೆಯನ್ನು ನೋಡಿ ಎಲ್ಲರೂ ಈ ಬಾರಿ ಡೆಲ್ಲಿ ತಂಡಕ್ಕೆ ಗೆಲುವು ಎಂಬ ಲೆಕ್ಕಾಚಾರದಲ್ಲಿದ್ದರು. ಆದರೆ ಆರ್​ಸಿಬಿ ಫೈನಲ್​ ಗೆದ್ದು ಎಲ್ಲಾ ಲೆಕ್ಕಾಚಾರಗಳನ್ನು ಸುಳ್ಳು ಮಾಡಿದೆ.

7 / 7